ಖ್ಯಾತ ನಟ ರಿಯಲ್ ಸ್ಟಾರ್ ಉಪ್ರೇಂದ್ರ ಅಭಿನಯದ (Kabza) “ಕಬ್ಜ” ಸಿನಿಮಾ ಕ್ರೇಜ್ ಪ್ರೇಕ್ಷಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ರಿಯಲ್ ಸ್ಟಾರ್ (Upendra)ಉಪೇಂದ್ರ ಕಿಚ್ಚ ಸುದೀಪ್(Sudeep) ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಕಬ್ಜ ಸಿನಿಮಾದಲ್ಲಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದಾರೆ. ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಬ್ಜ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ನಡುವಲ್ಲೇ ಚಿತ್ರ ತಂಡ ಸಿನಿಮಾದ ಟೀಸರ್ ಬಿಡುಗಡೆ ಸಜ್ಜಾಗಿದೆ.
ಸದ್ಯಲ್ಲೇ (Upendra) ಉಪೇಂದ್ರರವರ ಹುಟ್ಟುಹಬ್ಬವಿದ್ದು ಅವರ ಬರ್ತಡೆಯ ಹಿಂದಿನ ದಿನ ಸೆಪ್ಟೆಂಬರ್ 17ರಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತು ಸ್ವತಃ ಕಿಚ್ಚ ಸುದೀಪ್ (Sudeep)ಮಾತನಾಡಿರೋದು ಪ್ರೇಕ್ಷಕರಲ್ಲಿ, ಅಭಿಮಾನಿಗಳಲ್ಲಿ ಸಿನಿಮಾದ ಬಗೆಗಿನ ಕ್ರೇಜ್ ಹೆಚ್ಚಾಗುವಂತೆ ಮಾಡಿದೆ. ಹಲವು ಕಾರಣಗಳಿಂದಾಗಿ (Kabza)”ಕಬ್ಜ” ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾದ ಪೋಸ್ಟರ್ ಅದ್ಬುತವಾಗಿ ಮೂಡಿ ಬಂದಿದ್ದು, ಜೊತೆಗೆ ಮೇಕಿಂಗ್ ಕೂಡ ಕುತೂಹಲವನ್ನು ಹುಟ್ಟು ಹಾಕಿದೆ.
ಕಬ್ಜ ಚಿತ್ರದ ಡಿಫರೆಂಟ್ ಪೋಸ್ಟರ್ ಎಲ್ಲರಿಗೂ ಇಷ್ಟವಾಗುತ್ತೆ. ಸತತ ಮೂರು ವರ್ಷಗಳ ಕೆಲಸದ ನಂತರ ಮೊದಲ ಬಾರಿಗೆ ಸಿನಿಮಾದ ಟೀಸರ್ ಸೆಪ್ಟೆಂಬರ್ 17ರಂದು ಸಂಜೆ 5ಗಂಟೆಗೆ ನಿಮ್ಮ ಮುಂದೆ ಬರಲಿದೆ. ಇಡೀ ಕಬ್ಜ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳುತ್ತೇನೆ. ತಾವೆಲ್ಲರೂ ಈ ಚಿತ್ರದ ಟೀಸರ್ ನೋಡಿ, ಶೇರ್ ಮಾಡಿ” ಎಂದು ನಟ ಸುದೀಪ್ (Sudeep) ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಲಿಸ್ಟ್‌ನಲ್ಲಿ ಇದೀಗ ಕಬ್ಜ ಕೂಡ ಸೇರ್ಪಡೆಗೊಂಡಿದೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಲಂ, ತಮಿಳು, ಹಿಂದಿ ಭಾಷೆಗಳಲ್ಲಿ ಸಿನಿಮಾ ಡಬ್ ಆಗಲಿದೆ. ಭೂಗತ ಲೋಕದ ಕಥಾಹಂದರವನ್ನು ಹೊಂದಿರುವ ಕಬ್ಜಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ. ಸಿನಿಮಾದಲ್ಲಿ ಉಪೇಂದ್ರ ಹೊಸ ಗೆಟಪ್ ತೊಟ್ಟಿದ್ದಾರೆ.
ಬಹುನಿರೀಕ್ಷೆಯ ಪ್ಯಾನ್ ಇಂಡಿಯನ್ ಸಿನಿಮಾ “ಕಬ್ಜ” ಚಿತ್ರದ ಟೀಸರ್ ಬಿಡುಗಡೆಗೆ ಇನ್ನು ಎರಡೇ ದಿನ ಬಾಕಿಯಿದ್ದು ಸಿನಿರಸಿಕರ ಕುತೂಹಲ ಇಮ್ಮಡಿಯಾಗಿದೆ#Kabzaa #Upendra #KicchaSudeep #RChandru #StormStudios pic.twitter.com/hSHGzSgEXV
— ಕನ್ನಡವೇ ಸತ್ಯ™ (@KannadaveSatyaa) September 15, 2022
ಇದನ್ನೂ ಓದಿ: ‘ಪ್ರವೀಣರ ಜೊತೆ ನವೀನರು’ : ಬಿಗ್ಬಾಸ್ 9ನಲ್ಲಿ ಹೊಸ ಸ್ಪರ್ಧಿಗಳ ಜೊತೆ ಹಳೆ ಸ್ಪರ್ಧಿಗಳ ಸಮಾಗಮ
ಇದನ್ನೂ ಓದಿ : ಬ್ರಹ್ಮಾಸ್ತ್ರ ಸೂಪರ್ ಸಕ್ಸಸ್ : ರಾಷ್ತ್ರೀಯ ಸಿನಿಮಾ ದಿನ ಮುಂದೂಡಿಕೆ
ಇದನ್ನೂ ಓದಿ : ಅಕಾಲಿಕ ನಿಧನರಾದ ಮಂಡ್ಯ ರವಿಗೆ ಇತ್ತು ಅದೊಂದು ನನಸಾಗದ ಕನಸು
“ಕಬ್ಜ” ಸಿನಿಮಾವು ಚಿತ್ರೀಕರಣದ ಸಮಯದಿಂದಲೂ ಕೂಡ ಸಾಕಷ್ಟು ನಿರೀಕ್ಷೆ, ಕುತೂಹಲಗಳನ್ನು ಹುಟ್ಟುಹಾಕುತ್ತಿದೆ. (Upendra)ಉಪೇಂದ್ರ ಹಾಗೂ ಸುದೀಪ್(Sudeep) ಕಾಂಬಿಷೇನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಅದ್ರಲ್ಲೂ ರಿಯಲ್ ಸ್ಟಾರ್ ಬರ್ತಡೇ ದಿನದಂದೇ ಸಿನಿಮಾ ಬಿಡುಗಡೆ ಆಗುತ್ತಿರುವುದು ಪ್ರೇಕ್ಷಕರ ಪಾಲಿಗೆ ಡಬಲ್ ಧಮಾಕಾ.
Kichcha Sudeep created a craze about “Kabza”.