ಬುಧವಾರ, ಏಪ್ರಿಲ್ 30, 2025
HomeCinemaAthiya Shetty : ಬಾಡಿ ಶೇಮಿಂಗ್​ ಮಾಡುವವರ ವಿರುದ್ಧ ಖಡಕ್​ ಹೇಳಿಕೆ ಕೊಟ್ಟ ನಟಿ ಆಥಿಯಾ...

Athiya Shetty : ಬಾಡಿ ಶೇಮಿಂಗ್​ ಮಾಡುವವರ ವಿರುದ್ಧ ಖಡಕ್​ ಹೇಳಿಕೆ ಕೊಟ್ಟ ನಟಿ ಆಥಿಯಾ ಶೆಟ್ಟಿ

- Advertisement -

ಬಾಲಿವುಡ್​ ನಟಿ ಆಥಿಯಾ ಶೆಟ್ಟಿ(Athiya Shetty) ಚಿಕ್ಕವರಿದ್ದಾಗ ಜನರು ತಮ್ಮನ್ನು ಹೇಗೆ ಹೀಯಾಳಿಸುತ್ತಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹದಿಹರೆಯದ ದಿನಗಳಲ್ಲಿ ನಾನು ತುಂಬಾ ಸಣ್ಣಗಿದ್ದೇನೆ ಎಂದು ಜನರು ನನ್ನನ್ನು ಆಡಿಕೊಳ್ಳುತ್ತಿದ್ದರು ಎಂದು ಆಥಿಯಾ ಹೇಳಿದ್ದಾರೆ.

ನಾನು ಹದಿಹರೆಯದ ವಯಸ್ಸಿನವಳಾಗಿದ್ದಾಗ ಬಾಡಿ ಶೇಮಿಂಗ್​​ ಅನ್ನು ಎದುರಿಸಿದ್ದೇನೆ. ಕೇವಲ ದಪ್ಪಗಿದ್ದೀಯಾ ಎಂದು ಹೀಯಾಳಿಸುವುದು ಮಾತ್ರ ಬಾಡಿ ಶೇಮಿಂಗ್​ ವರ್ಗಕ್ಕೆ ಸೇರಿದ್ದಲ್ಲ. ಸಣ್ಣಗೆ ಇರುವವರನ್ನು ಆಡಿಕೊಂಡರೂ ಸಹ ಅದು ಬಾಡಿಶೇಮಿಂಗ್​ ವರ್ಗಕ್ಕೆ ಸೇರುತ್ತದೆ. ನಾನು ಇದನ್ನು ಅನುಭವಿಸಿದ್ದೇನೆ. ನಾನು ತಿಳಿದುಕೊಂಡಂತೆ ನಮ್ಮ ತೂಕ, ನಾವು ಹೇಗಿದ್ದೇವೆ ಎಂಬುದರ ಬಗ್ಗೆ ಜನ ಆಡಿಕೊಳ್ಳಲು ಆರಂಭಿಸಿದರೆ ಇದರಿಂದ ನಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ. ಯಾರು ಯಾವ ಯುದ್ಧವನ್ನು ಎದುರಿಸುತ್ತಿದ್ದಾರೆ ಅಥವಾ ಯಾರ ಅಭದ್ರತೆಗಳು ಏನು ಎನ್ನುವುದು ನಿಮಗೆ ತಿಳಿದಿಲ್ಲ. ನಿಮಗೆ ಯಾರ ಬಳಿಯಾದರೂ ಒಳ್ಳೆಯ ರೀತಿಯಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದಾದರೆ ಮಾತನಾಡಲೇಬೇಡಿ. ನಮ್ಮ ಮಾತುಗಳು ಇನ್ನೊಬ್ಬರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿಬಿಡಬಹುದು. ದಯಾಗುಣವನ್ನು ಬೆಳೆಸಿಕೊಳ್ಳಿ ಎಂದು ಆಥಿಯಾ ಹೇಳಿದ್ದಾರೆ .

ನಾನು ಚಿಕ್ಕವಳಿದ್ದಾಗ , ಹದಿಹರೆಯದ ವಯಸ್ಸಿಗೆ ಬಂದಾಗ ನನ್ನ ದೇಹದ ವಿಚಾರದಲ್ಲಿ ಅತಿಯಾದ ಜಾಗ್ರತೆಯನ್ನು ಹೊಂದಿದ್ದೆ. ಈಗಲೂ ಸಹ ಹಾಗೆಯೇ ಇದ್ದೇನೆ. ಆದರೆ ನಾನೀಗ ನನ್ನ ಬಗ್ಗೆ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದೇನೆ. ಎಷ್ಟೋ ಜನರಿಗೆ ಬಾಡಿಶೇಮಿಂಗ್​ ಎಂದರೆ ಏನು ಎಂಬುದೇ ತಿಳಿದಿಲ್ಲ. ಅವರ ಪ್ರಕಾರ ದಪ್ಪಗಿದ್ದವರ ಬಗ್ಗೆ ಹೇಳಿದರೆ ಅದು ಕಾಳಜಿ ಎಂದು ಭಾವಿಸಿದ್ದಾರೆ. ಆದರೆ ಇದು ತಪ್ಪು. ಜನರು ಸಣ್ಣಗಿದ್ದವರನ್ನೂ ಆಡಿಕೊಳ್ಳುತ್ತಾರೆ. ಇದು ಕೂಡ ತಪ್ಪು ಎಂದು ಹೇಳಿದ್ದಾರೆ.

ಅತಿಯಾ ಶೆಟ್ಟಿಗೆ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದ ಕೆಎಲ್ ರಾಹುಲ್

ಕ್ರಿಕೆಟಿಗ ಕೆ.ಎಲ್‌ ರಾಹುಲ್‌ ತನ್ನ ಪ್ರೇಯಸಿ ಅತಿಯಾ ಶೆಟ್ಟಿ ಹುಟ್ಟುಹಬ್ಬಕ್ಕೆ ಕೊಂಚ ತಡವಾದರೂ ರಾಹುಲ್ ಸ್ಪೇಶಲ್‌ ಆಗಿಯೇ ವಿಶ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಇನ್‌ಸ್ಟಾ ಗ್ರಾಮ್‌ ಪೋಸ್ಟ್‌ ನಲ್ಲಿ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದು ಬರೆದುಕೊಂಡಿದ್ದಾರೆ. ಕೆಎಲ್ ರಾಹುಲ್ ಅತಿಯಾ ಶೆಟ್ಟಿ ಜೊತೆಗಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಆ ಪೋಟೋದಲ್ಲಿ ಅತಿಯಾ ಹಾಗೂ ರಾಹುಲ್‌ ಸಂತೋಷದಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಕೆ.ಎಲ್.ರಾಹುಲ್ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಮಾತ್ರವಲ್ಲದೇ “ಹ್ಯಾಪಿ ಬರ್ತ್ ಡೇ ಮೈ ಹಾರ್ಟ್ ಐಕಾನ್” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅತಿಯಾ ಶೆಟ್ಟಿ ಅವರಿಗೆ ಸ್ಪೆಷಲ್‌ ಆಗಿ ವಿಶ್‌ ಮಾಡಿದ್ದಾರೆ. ಕೆ.ಎಲ್.ರಾಹುಲ್ ಅವರ ಈ ಪೋಸ್ಟ್ ಗೆ ಅತಿಯಾ ಶೆಟ್ಟಿ ಅವರ ತಂದೆ ನಟ ಸುನೀಲ್ ಶೆಟ್ಟಿ ಮತ್ತು ಅವರ ಸಹೋದರ ಅಹಾನ್ ಶೆಟ್ಟಿ ಹೃದಯದ ಎಮೋಜಿಗಳನ್ನು ತೋರಿಸಿದ್ದಾರೆ.‌ ಅತಿಯಾ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬದ ಆಚರಣೆಯ ಚಿತ್ರವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದಗಳು ಎಂದು ಅತಿಯಾ ತಿಳಿಸಿದ್ದಾರೆ. ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ 2019 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಅತಿಯಾ ಶೆಟ್ಟಿ ಮತ್ತು ರಾಹುಲ್‌ ಥೈಲ್ಯಾಂಡ್ ರಜೆಯ ಚಿತ್ರಗಳು ಅವರ ಅಭಿಮಾನಿಗಳ ಗಮನ ಸೆಳೆದಾಗ ಅವರ ಅಂದಿನ ಊಹಾಪೋಹ ಸಂಬಂಧದ ಬಗ್ಗೆ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಅವರು 2015 ರ ಹೀರೊ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು.

ಇದನ್ನು ಓದಿ : Sanchari Vijay : ಸಂಚಾರಿ ವಿಜಯ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜನವರಿ 26 ರಂದು ಅಂತ್ಯವಲ್ಲ ಆರಂಭ ತೆರೆಗೆ

ಇದನ್ನೂ ಓದಿ : Duniya Vijay : ಅಭಿಮಾನಿ ದುನಿಯಾಗೆ ಸಿಹಿಸುದ್ದಿ: ಹೀರೋ,ಡೈರೈಕ್ಷನ್ ಬಳಿಕ‌ ವಿಲನ್ ಪಾತ್ರದತ್ತ ವಿಜಯ್ ಚಿತ್ತ

ಇದನ್ನೂ ಓದಿ : Samantha divorce : ಆ ಒಂದು ದೃಶ್ಯವೇ ನಟಿ ಜೀವನಕ್ಕೆ ಮುಳುವಾಯ್ತಾ?! ಸಮಂತಾ ಡಿವೋರ್ಸ್, ಅಭಿಮಾನಿಗಳ ಕುತೂಹಲ!

ಇದನ್ನೂ ಓದಿ : Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ

‘Used to be very conscious’: Athiya Shetty opens up about her struggle with body-shaming

RELATED ARTICLES

Most Popular