Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್​ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ

ಓಮಿಕ್ರಾನ್​(Omicron Coronavirus) ವಿಶ್ವಾದ್ಯಂತ ತನ್ನ ಕಬಂಧಬಾಹುವನ್ನು ಚಾಚಲು ಆರಂಭಿಸಿದೆ. ದೇಶದಲ್ಲಿ ಫೆಬ್ರವರಿ ತಿಂಗಳಿನಿಂದ ಕೊರೊನಾ ಮೂರನೇ ಅಲೆ ಆರಂಭವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ದೇಶದಲ್ಲಿ ಒಟ್ಟು 200 ಒಮಿಕ್ರಾನ್​ ಪ್ರಕರಣಗಳು ವರದಿಯಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ ತಲಾ 54 ಒಮಿಕ್ರಾನ್​ ಪ್ರಕರಣಗಳು ವರದಿಯಾಗಿವೆ. ಮೂರನೇ ಸ್ಥಾನದಲ್ಲಿರುವ ತೆಲಂಗಾಣ 20 ಪ್ರಕರಣಗಳನ್ನು ವರದಿ ಮಾಡಿದೆ. ಇದಾದ ಬಳಿಕ ಕರ್ನಾಟಕದಲ್ಲಿ 14 ಒಮಿಕ್ರಾನ್​ ಕೇಸುಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 5326 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಕೋವಿಡ್​ನಿಂದಾಗಿ ಒಂದು ದಿನದಲ್ಲಿ 453 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಪ್ರಸ್ತುತ 79,097 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಹಾಗೂ ಕಳೆದ 24 ಗಂಟೆಗಳಲ್ಲಿ 8000 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ

.
ಓಮಿಕ್ರಾನ್​ ರೂಪಾಂತರಿಯ ವಿರುದ್ಧ ದೇಶದಲ್ಲಿ ಲಭ್ಯವಿರುವ ಕೊರೊನಾ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆ ಒಂದು ವಾರದ ಒಳಗಾಗಿ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್​​ ಮಾಂಡವಿಯಾ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಯಲ್ಲಿ ವೈದ್ಯಕೀಯ ಸೌಲಭ್ಯ, ಆಮ್ಲಜನಕ ಸಾಮರ್ಥ್ಯ ಹಾಗೂ ಔಷಧಿಗಳ ದಾಸ್ತಾನುಗಳನ್ನು ಹೆಚ್ಚಿಸುವ ಬಗ್ಗೆ ಈಗಲೇ ತಯಾರಿ ನಡೆದಿದೆ. ಒಂದು ಹಾಗೂ ಎರಡನೆ ಅಲೆಗಳಲ್ಲಿ ಉಂಟಾದ ಯಾವುದೇ ಸಮಸ್ಯೆಗಳು ಮೂರನೇ ಅಲೆಯಲ್ಲಿ ಆಗದಂತೆ ಸರ್ಕಾರ ಎಚ್ಚರ ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತ್​ ಬಯೋಟೆಕ್​​ ಇಂಟ್ರಾ ನಾಸಲ್​ ಕೋವಿಡ್​ 19 ಲಸಿಕೆಯು ಬೂಸ್ಟರ್ ಡೋಸ್​ ಆಗಿ 3ನೇ ಹಂತದ ಅಧ್ಯಯನವನ್ನು ಕೋವಿಶೀಲ್ಡ್​ ಅಥವಾ ಕೋವ್ಯಾಕ್ಸಿನ್​ ಲಸಿಕೆ ಹಾಕಿಸಿದವರ ಮೇಲೆ ಪ್ರಯೋಗ ನಡೆಸಲು ಡಿಸಿಜಿಐನಿಂದ ಅನುಮತಿಯನ್ನು ಕೋರಿದೆ.

Omicron Coronavirus India Live: India’s Omicron tally reaches 200; most cases in Delhi, Maharashtra

ಇದನ್ನು ಓದಿ: Duniya Vijay : ಅಭಿಮಾನಿ ದುನಿಯಾಗೆ ಸಿಹಿಸುದ್ದಿ: ಹೀರೋ,ಡೈರೈಕ್ಷನ್ ಬಳಿಕ‌ ವಿಲನ್ ಪಾತ್ರದತ್ತ ವಿಜಯ್ ಚಿತ್ತ

ಇದನ್ನೂ ಓದಿ : Delhi’s Mohalla clinic : ದೆಹಲಿ ಮೊಹಲ್ಲಾ ಕ್ಲಿನಿಕ್​ನಲ್ಲಿ ಔಷಧಿ ಸೇವಿಸಿದ ಮೂವರು ಮಕ್ಕಳು ಸಾವು..!

Comments are closed.