ಸೋಮವಾರ, ಏಪ್ರಿಲ್ 28, 2025
HomeCinemaVaishali Takkar Rahul Navlani : ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ ಪ್ರಕರಣ :...

Vaishali Takkar Rahul Navlani : ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ ಪ್ರಕರಣ : ಮಾಜಿ ಗೆಳೆಯ ರಾಹುಲ್ ನವ್ಲಾನಿ ಅರೆಸ್ಟ್

- Advertisement -

ಇಂದೋರ್ : ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ ಪ್ರಕರಣ (Vaishali Takkar suicide case) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನಟಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಇದೀಗ ನಟಿಯ ಮಾಜಿ ಗೆಳೆಯ ರಾಹುಲ್ ನವ್ಲಾನಿಯನ್ನು( Rahul Navlani Arrested) ಪೊಲೀಸರು ಬಂಧಿಸಿದ್ದಾರೆ. ನಟಿ ವೈಶಾಲಿಗೆ ಆತ್ಮಹತ್ಯೆಗೆ (Vaishali Takkar Rahul Navlani) ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಟಿ ಸಾವನ್ನಪ್ಪಿದ ಮೂರು ದಿನಗಳ ನಂತರ ಬಂಧಿಸಲಾಗಿದೆ.

ಇಂದೋರ್ ನಲ್ಲಿರುವ ನಟಿ ವೈಶಾಲಿ ಟಕ್ಕರ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ನಟಿಯ ಮೃತದೇಹ ಪತ್ತೆಯಾಗಿತ್ತು. ಅಲ್ಲದೇ ಆಕೆಯ ಸಾವಿನ ಬೆನ್ನಲ್ಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೊಂದೆಡೆಯಲ್ಲಿ ನಟಿ ಸಾವಿಗೂ ಮುನ್ನ ಡೆತ್ ನೋಟ್ ಬರೆದು ಇಟ್ಟಿದ್ದಾಳೆ. ಡೆತ್ ನೋಟ್ ನಲ್ಲಿ ತನ್ನ ಸಾವಿನ ಕುರಿತು ಹಲವು ವಿಚಾರಗಳನ್ನು ಬರೆದಿಟ್ಟಿದ್ದಾಳೆ. ಇದೀಗ ಆಕೆಯ ಮಾಜಿ ಪ್ರಿಯಕರ ರಾಹುಲ್ ನವ್ಲಾನಿಯನ್ನು ಬಂಧಿಸಿರುವ ಕುರಿತು ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣ ಚಾರಿ ಮಿಶ್ರಾ ದೃಢಪಡಿಸಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ. ಆದರೆ ಆತನ ಪತ್ನಿ ದಿಶಾ ನಾಪತ್ತೆಯಾಗಿದ್ದು, ಆಕೆಯ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ರಾಹುಲ್ ಹಾಗೂ ದಿಶಾ ಇಬ್ಬರೂ ಕೂಡ ನಟಿ ವೈಶಾಲಿ ಟಕ್ಕರ್‌ ನೆರೆಹೊರೆಯವರು ಆಗಿರುವ ಕಾರಣದಿಂದಾಗಿ ಆತ್ಮಹತ್ಯೆ ನಡೆಯುತ್ತಿದ್ದಂತೆಯೇ ಇಬ್ಬರೂ ಕೂಡ ತಪ್ಪಿಸಿಕೊಂಡಿದ್ದಾರೆ. ನಂತರದಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಬಹುಮಾನ ಘೋಷಣೆ ಮಾಡಲಾಗಿತ್ತು. ಇದೀಗ ರಾಹುಲ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಆತನಿಂದ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Vaishali Takkar Rahul Navlani : ಮದುವೆಯ ನಂತರವೂ ಕಿರುಕುಳ ನೀಡಿದ ರಾಹುಲ್‌

ವೈಶಾಲಿ ತನ್ನ ಡೈರಿಯಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದಾಳೆ. ಅಲ್ಲದೇ ಆತ್ಮಹತ್ಯೆಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಆರೋಪಿಗಳ ಹೆಸರನ್ನು ಬರೆದಿದ್ದಾಳೆ. ಜೊತೆಗೆ ಸಾಯುವ ಮೊದಲು ತನ್ನ ಸಹೋದರನಿಗೆ ಕರೆಮಾಡಿ ರಾಹುಲ್ ನವ್ಲಾನಿ ತನಗೆ ಕಿರುಕುಳ ನೀಡುತ್ತಿರುವ ಬಗ್ಗೆ ಮಾತನಾಡಿದ್ದಳು. ರಾಹುಲ್ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಅಲ್ಲದೇ ವರ್ಷದ ಅಂತ್ಯಕ್ಕೆ ವೈಶಾಲಿ ಟಕ್ಕರ್ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಮದುವೆ ಆಗಬೇಕಾಗಿತ್ತು. ಆದರೆ ಆತನ ಕಿರುಕುಳದಿಂದಲೇ ವೈಶಾಲಿ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಳು ಎಂದು ತಿಳಿಸಿದ್ದಾರೆ.

ರಾಹುಲ್ ನವಲಾನಿ ವೈಶಾಲಿ ಟಕ್ಕರ್ ಅವರಿಗೆ ಕಿರುಕುಳ ನೀಡುತ್ತಿದ್ದರು. ವೈಶಾಲಿ ಮತ್ತು ರಾಹುಲ್ ಅವರ ತಂದೆ ದೀರ್ಘಕಾಲದವರೆಗೆ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಕೋವಿಡ್ ಸಂದರ್ಭದಲ್ಲಿ ನಟ ರಾಹುಲ್ ಜೊತೆಗೆ ವೈಶಾಲಿ ಡೇಟಿಂಗ್ ಆರಂಭಿಸಿದ್ದರು. ಆದರೆ ನಂತರ ಇಬ್ಬರೂ ಬೇರ್ಪಟ್ಟಿದ್ದು, ರಾಹುಲ್ ಮತ್ತೊಬ್ಬಾಕೆಯನ್ನು ವಿವಾಹವಾಗಿದ್ದ. ಆದರೆ ನಂತರದಲ್ಲಿಯೂ ರಾಹುಲ್ ವೈಶಾಲಿಗೆ ಕಿರುಕುಳ ನೀಡುತ್ತಿದ್ದ ಅನ್ನೋದು ಇದೀಗ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ವೈಶಾಲಿ ಇಂದೋರ್‌ನಲ್ಲಿರುವ ತನ್ನ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಭಾನುವಾರ ಬೆಳಗ್ಗೆ ಆಕೆಯ ತಂದೆ ಹಾಗೂ ಸಹೋದರ ಆಕೆ ಬಹಳ ಹೊತ್ತು ತನ್ನ ರೂಮಿನಿಂದ ಹೊರಗೆ ಬಾರದಿರುವ ಕುರಿತು ಖಚಿತ ಪಡಿಸಿಕೊಂಡು ಬಂದು ನೋಡಿದಾಗ ಆಕೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಹಿಂದಿಯ ಖ್ಯಾತ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ, ಮತ್ತು ಸಸುರಲ್ ಸಿಮಾರ್ ಕಾ ಮುಂತಾದ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದರು. ಇತ್ತೀಚಿಗೆ ಅವರು ಬಿಗ್ ಬಾಸ್‌ನ ನಿಶಾಂತ್ ಮಲ್ಕಾನಿ ಅವರೊಂದಿಗೆ ರಕ್ಷಾಬಂಧನ್‌ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ : Vaishali Takkar Suicide : ಖ್ಯಾತ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ : ಡೆತ್ ನೋಟ್ ನಲ್ಲಿದೆ ಸಾವಿನ ಅಸಲಿ ಕಾರಣ

ಇದನ್ನೂ ಓದಿ : ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

Vaishali Takkar suicide case Boyfriend Rahul Navlani Arrested

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular