Rahul Dravid Roger Binny: ಒಬ್ಬ ಬೆಂಗಳೂರಿಗ ಟೀಮ್ ಇಂಡಿಯಾ ಕೋಚ್, ಮತ್ತೊಬ್ಬ ಬಿಸಿಸಿಐ ಬಾಸ್; ಸೂಪರ್ ಫೋಟೋ ಶೇರ್ ಮಾಡಿದ ಆರ್‌ಸಿಬಿ

ಬೆಂಗಳೂರು: ಭಾರತೀಯ ಕ್ರಿಕೆಟ್’ನಲ್ಲೀಗ ಕನ್ನಡಿಗರದ್ದೇ ಹವಾ. ಕರ್ನಾಟಕದ ಕ್ರಿಕೆಟ್ ದಿಗ್ಗಜ, ಕನ್ನಡಿಗರ ಹೆಮ್ಮೆ ರಾಹುಲ್ ದ್ರಾವಿಡ್ (Rahul Dravid) ಭಾರತ ತಂಡದ ಹೆಡ್ ಕೋಚ್, ಕರ್ನಾಟಕದ ಮತ್ತೊಬ್ಬ ಹೆಮ್ಮೆ ಕೆ.ಎಲ್ ರಾಹುಲ್ (KL Rahul) ಟೀಮ್ ಇಂಡಿಯಾದ ಉಪನಾಯಕ, ಸಾಧನೆಗೆ ಕಳಶವಿಟ್ಟಂತೆ ರಾಜ್ಯದ ಮತ್ತೊಬ್ಬ ಕ್ರಿಕೆಟ್ ದಿಗ್ಗಜ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷ (BCCI President Roger Binny).

ಬೆಂಗಳೂರು ಬಾಯ್ ರಾಹುಲ್ ದ್ರಾವಿಡ್ ಭಾರತ ತಂಡದ ಕೋಚ್ ಆಗಿರುವ ಹೊತ್ತಲ್ಲೇ ಬೆಂಗಳೂರಿನವರೇ ಆದ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಂಭ್ರಮವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿಶೇಷ ಫೋಟೋ ಒಂದರ ಮೂಲಕ ಹಂಚಿಕೊಂಡಿದೆ. ಆ ಫೋಟ್ದಲ್ಲಿ ತೆರೆದ ಜೀಪ್ ಅನ್ನು ರಾಹುಲ್ ದ್ರಾವಿಡ್ ವಿಧಾನಸೌಧದ ಮುಂಭಾಗದಲ್ಲಿ ಓಡಿಸುತ್ತಿದ್ದು, ಪಕ್ಕದ ಸೀಟ್’ನಲ್ಲಿ ರೋಜರ್ ಬಿನ್ನಿ ನಿಂತಿದ್ದಾರೆ. ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಈ ಫೋಟೋ ಶೇರ್ ಮಾಡಿದ್ದು, “ಬೆಂಗಳೂರಿನ ದಿಗ್ಗಜರು ಭಾರತೀಯ ಕ್ರಿಕೆಟ್’ನ ಚುಕ್ಕಾಣಿಯನ್ನು ಹಿಡಿದಿದ್ದಾರೆ. ರೋಜರ್ ಮತ್ತು ರಾಹುಲ್, ನೀವು ನಮ್ಮ ಹೆಮ್ಮೆ” ಎಂದು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದೆ.

ಟೀಮ್ ಇಂಡಿಯಾದ ಮಾಜಿ ನಾಯಕರೂ ಆಗಿರುವ ರಾಹುಲ್ ದ್ರಾವಿಡ್ ಕಳೆದ ವರ್ಷದ ನವೆಂಬರ್’ನಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ದ್ರಾವಿಡ್ ಗರಡಿಯಲ್ಲಿ ಪಳಗಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ ಆಡುತ್ತಿದ್ದು, 15 ವರ್ಷಗಳ ನಂತರ ಚುಟುಕು ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಇನ್ನು 67 ವರ್ಷದ ರೋಜರ್ ಬಿನ್ನಿ ಮಂಗಳವಾರ ಮುಂಬೈನಲ್ಲಿ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾಗಿದ್ದರು. ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾರಣ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿ ರಾಜೀನಾಮೆ ಸಲ್ಲಿಸಲಿದ್ದಾರೆ. 67 ವರ್ಷ ವಯಸ್ಸಿನ ರೋಜರ್ ಬಿನ್ನಿ 1983ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದ ಸದಸ್ಯ.

ಇದನ್ನೂ ಓದಿ : Pro Kabaddi League: ಮತ್ತೆ ಗೆಲುವಿನ ಹಾದಿಗೆ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್ ಬೆವರಿಳಿಸಿದ ಗೂಳಿಗಳು

ಇದನ್ನೂ ಓದಿ : India vs Pakistan Rain threat : ಭಾರತ Vs ಪಾಕಿಸ್ತಾನ ಪಂದ್ಯದ ಮೇಲೆ ಮಳೆಯ ಕರಿನೆರಳು, ಭಾನುವಾರ 80% ಮಳೆ ಪಕ್ಕಾ

Bengaluru legends at the helm of Indian Cricket Coach Rahul Dravid And BCCI President Roger Binny

Comments are closed.