ಬೆಂಗಳೂರು: Vaishnavi Gowda Engagement: ಅಗ್ನಿಸಾಕ್ಷಿ ಧಾರಾವಾಹಿ ಯಾರಿಗೆ ತಾನೇ ನೆನಪಿಲ್ಲ ಹೇಳಿ..? ಸೀರಿಯಲ್ ನೋಡುವವರಿಂದ ಹಿಡಿದು ನೋಡದೇ ಇರುವವರಿಗೂ ಈ ಧಾರವಾಹಿ ಪರಿಚಯ ಅಂತೂ ಖಂಡಿತಾ ಇತ್ತು. ಧಾರಾವಾಹಿ ಮುಗಿದಿದ್ದರೂ ಅದರಲ್ಲಿದ್ದ ಸಿದ್ದಾರ್ಥ್- ಸನ್ನಿಧಿ ಪಾತ್ರ ಜನರ ಮನಸ್ಸನ್ನು ಇನ್ನೂ ಕಾಡುತ್ತಿದೆ. ಆದರೆ ಸನ್ನಿಧಿ ಅಸಲಿ ಜೀವನದಲ್ಲಿ ಯಾವಾಗ ಸಿದ್ದಾರ್ಥ್ ಬರುತ್ತಾರೆ ಅಂತ ಅಭಿಮಾನಿಗಳು ಕಾಯ್ತಾ ಇದ್ರು. ಈ ನಡುವೆ ವೈಷ್ಣವಿ ಗೌಡ ಎಂಗೇಜ್ ಮೆಂಟ್ ನಡೆದಿದೆ ಎನ್ನಲಾದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈಷ್ಣವಿ ಗೌಡ ಹಾಗೂ ಹುಡುಗನೊಬ್ಬ ಮಾಲೆ ಧರಿಸಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗಾಗಿ ವೈಷ್ಣವಿ ನಿಶ್ಚಿತಾರ್ಥ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡಾ ಸಾಕ್ಷಿ ಆಗಿದ್ದು, ವೈರಲ್ ಆದ ಫೋಟೋದಲ್ಲಿ ಶಂಕರ್ ಬಿದರಿ ಸೇರಿದಂತೆ ಹಲವಾರು ನಿಂತಿದ್ದಾರೆ. ಎದುರಿನಲ್ಲಿ ಟೇಬಲ್ ಮೇಲೆ ಹೂ-ಹಣ್ಣು, ಸಿಹಿ ತಿನಿಸುಗಳನ್ನು ಇಡಲಾಗಿದೆ. ಹೀಗಾಗಿ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಆದರೆ ಈ ಬಗ್ಗೆ ವೈಷ್ಣವಿ ಕಡೆಯಿಂದ ಅಧಿಕೃತ ಘೋಷಣೆ ಬಂದಿಲ್ಲ.
ಹುಡುಗ ಯಾರು ಗೊತ್ತಾ..?
ಅಂದಹಾಗೆ ವೈಷ್ಣವಿ ಗೌಡ ಮದುವೆ ಆಗುತ್ತಿರುವ ಹುಡುಗ ಬೆಂಗಳೂರು ಮೂಲದ ವಿದ್ಯಾಭರಣ್. ಅವರು 2018ರಲ್ಲಿ ರಿಲೀಸ್ ಆದ ವಿರಾಜ್ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ವಿದ್ಯಾಭೂಷಣ್ ವೈಷ್ಣವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ.
ಬಿಗ್ ಬಾಸ್ ಶೋನಲ್ಲಿದ್ದಾಗ ವೈಷ್ಣವಿ ಅವರು ಮದುವೆ ವಿಚಾರ ಪ್ರಸ್ತಾಪ ಮಾಡುತ್ತಿದ್ದರು. ತಮಗೆ ಮದುವೆ ಆಗಬೇಕು ಎಂಬ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಬಿಗ್ ಬಾಸ್ ನಿಂದ ಹೊರಗೆ ಬಂದ ಬಳಿಕ ಅವರಿಗೆ ಹಲವು ಪ್ರಪೋಸಲ್ ಗಳು ಬರುತ್ತಿವೆ ಎಂದು ಖುದ್ದು ಅವರೇ ಹೇಳಿಕೊಂಡಿದ್ದರು. ಸದ್ಯ ಬಿಗ್ ಬಾಸ್ ಸೀಸನ್- 8 ಮುಗಿದು 1 ವರ್ಷಗಳ ಬಳಿಕ ಅವರು ಕುಟುಂಬದ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: MS Dhoni tennis : ಟೆನಿಸ್ ಡಬಲ್ಸ್ ಚಾಂಪಿಯನ್‌ಷಿಪ್ ಗೆದ್ದ ಕ್ರಿಕೆಟ್ ಮೈದಾನದ ಕೂಲ್ ಕ್ಯಾಪ್ಯನ್ ಎಂ.ಎಸ್ ಧೋನಿ
ಇತ್ತೀಚೆಗಷ್ಟೆ ವೈಷ್ಣವಿ ಹೊಸ ಮನೆ ಖರೀದಿಸಿ ಗೃಹ ಪ್ರವೇಶ ಮಾಡಿದ್ದರು. ಬಿಗ್ ಬಾಸ್ ಮನೆಯ ಸದಸ್ಯರು ಸೇರಿದಂತೆ ಹಲವು ಆಪ್ತರು ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೀಗ ಹೊಸ ಮನೆಗೆ ಕಾಲಿಟ್ಟ ಬೆನ್ನಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
Vaishnavi Gowda Engagement: Did actress Vaishnavi Gowda get engaged? What is the authenticity of the viral photo?