Constitution Day : ರಾಜ್ಯದ ಶಾಲಾ ಕಾಲೇಜುಗಳಲ್ಲಿ ನ.26ರಂದು “ಸಂವಿಧಾನ ದಿನ” ಆಚರಿಸುವಂತೆ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ರಾಜ್ಯ ಸರಕಾರವು ಇದೇ ಬರುವ ನವೆಂಬರ್‌ 26 ರಂದು ಭಾರತ ಸಂವಿಧಾನದ ನೆನಪಿಗಾಗಿ ಶಾಲಾ – ಕಾಲೇಜುಗಳಲ್ಲಿ ” ಸಂವಿಧಾನ ದಿನಾಚರಣೆ”ಯನ್ನು (Constitution Day) ಹಮ್ಮಿಕೊಂಡಿದೆ. ರಾಜ್ಯದ ಸರಕಾರಿ, ಅನುದಾನಿತ, ಅನುದಾನರಹಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನವೆಂಬರ್‌ 26ರಂದು “ಸಂವಿಧಾನ ದಿನ”ವನ್ನಾಗಿ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಇಲಾಖೆ ಪ್ರತ್ಯೇಕವಾಗಿ ಆದೇಶ ಹೊರಡಿಸಿದೆ.

1949 ನವೆಂಬರ್‌ 26ರಂದು ಸಂವಿಧಾನ ಸಭೆಯಲ್ಲಿ ಭಾರತದ ಸಂವಿಧಾನವು ಅಂಗೀಕರಿಸಲ್ಪಟ್ಟಿತ್ತು ಅದರ ನೆನಪಿಗಾಗಿ ಪ್ರತಿ ವರ್ಷ ನವೆಂಬರ್‌ 26 “ಸಂವಿಧಾನ ದಿನ”ವನ್ನಾಗಿ ಆಚರಿಸಲಾಗುತ್ತದೆ. ಮುಂದುವರೆದು ಉಲ್ಲೇಖಿತ (2)ರಲ್ಲಿ ಭಾರತ ಸರಕಾರದ, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪತ್ರದಲ್ಲಿ ಸೂಚಿಸಿರುವಂತೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳ ಅರಿವನ್ನು ಮೂಡಿಸುವಂತಹ “know yOur Constitution” ಕಾರ್ಯಕ್ರಮವನ್ನು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ : NEET-UG 2023 : ವೈದ್ಯಕೀಯ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ ಯಾವಾಗ ? ಇಲ್ಲಿದೆ ಸಂಪೂರ್ಣ ವಿವರ

ಇದನ್ನೂ ಓದಿ : Government schools: 268 ಸರಕಾರಿ ಶಾಲೆಗಳನ್ನು ದತ್ತು ಪಡೆದ ಸರಕಾರಿ ಅಧಿಕಾರಿಗಳು

ಇದನ್ನೂ ಓದಿ : Uniform color for schools: ಶಾಲೆಗಳಿಗೆ ಏಕರೂಪದ ಬಣ್ಣ :8,100 ಶಾಲಾ- ಕಾಲೇಜು ಕೊಠಡಿಗೆ ವಿವೇಕಾನಂದರ ಹೆಸರಿಡಲು ಶಿಕ್ಷಣ ಇಲಾಖೆ ಚಿಂತನೆ

ಆದ್ದರಿಂದ ನವೆಂಬರ್‌ 26 ರಂದು ” ಸಂವಿಧಾನ ದಿನಚಾರಣೆ” ಯ ಅಂಗವಾಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಮುಖ್ಯಸ್ಥರು ಹಮ್ಮಿಕೊಳ್ಳಲು ಕ್ರಮವಹಿಸುವಂತೆ ಸೂಚಿಸಿದೆ. ಎಲ್ಲಾ ಶಾಲೆಗಳಲ್ಲಿ ನವೆಂಬರ್‌ 26ರಂದು ಬೆಳಿಗ್ಗೆ 11.00 ಗಂಟೆಗೆ ಏಕಕಾಲಕ್ಕೆ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಶಾಲಾ ಆವರಣದಲ್ಲಿನ ಪ್ರಮುಖ ಸ್ಥಳದಲ್ಲಿ ಭಾರತ ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಕರ್ತವ್ಯಗಳು ಮತ್ತು ಶಾಲೆಗಳಲ್ಲಿ ಸಂವಿಧಾನದ ವಿವಿಧ ಅಂಶಗಳ ಕುರಿತು ಚರ್ಚಾ ಸ್ಪರ್ಧೆ, ರಸಪ್ರಶ್ನೆಗಳು ಅಥವಾ ಪ್ರಬಂಧ ಸ್ಪರ್ಧೆಗಳು ಇತ್ಯಾದಿ ಕಾರ್ಯಕ್ರಮಗಳನ್ನು ನವೆಂಬರ್‌ 26 ರ ಮೊದಲು ಹಮ್ಮಿಕೊಳ್ಳುವಂತೆ ಆದೇಶ ನೀಡಲಾಗಿದೆ.

To celebrate “Constitution Day” on November 26 in schools and colleges of the state: Education Department orders

Comments are closed.