ಬೆಂಗಳೂರು: Varaha Roopam Copyright issue : ಗೆಲುವಿನ ನಾಗಲೋಟದಲ್ಲಿರುವ ಕಾಂತಾರ ಸಿನಿಮಾಗೆ ವರಾಹ ರೂಪಂ ಹಾಡಿನ ವಿಚಾರದಲ್ಲಿ ಹಿನ್ನಡೆಯಾಗಿದೆ. ಈ ಹಾಡನ್ನು ಕಾಪಿ ಮಾಡಲಾಗಿದೆ ಎಂದು ತೈಕುಡಂ ಬ್ರಿಡ್ಜ್ ಕೇಸ್ ದಾಖಲಿಸಿತ್ತು. ಇದೀಗ ವರಾಹ ರೂಪಂ ಹಾಡನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಲಾಗಿದೆ.
ಕಾಂತಾರ ಸಿನಿಮಾ ರಿಲೀಸ್ ಆದ ಕೆಲ ದಿನಗಳಲ್ಲೇ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದ ವರಾಹ ರೂಪಂ ಹಾಡು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಈ ಹಾಡಿನ ಟ್ಯೂನ್ ಮೇಲೆ ಕಾಪಿ ರೈಟ್ಸ್ ಕೇಸ್ ದಾಖಲಿಸಲಾಗಿತ್ತು. ಕೇರಳದ ತೈಕುಡಂ ಬ್ರಿಡ್ಜ್ ಎಂಬ ಮ್ಯೂಸಿಕ್ ಸಂಸ್ಥೆ ಈ ಹಾಡಿನ ವಿರುದ್ಧ ಧ್ವನಿ ಎತ್ತಿತ್ತು. ಮಲಯಾಳಂನ ನವರಸಂ ಹಾಡಿನ ಟ್ಯೂನ್ ವರಾಹ ರೂಪಂ ಹಾಡಿನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿತ್ತು. ಅಷ್ಟೆ ಅಲ್ಲದೇ ಕೇರಳದ ಕೋರ್ಟ್‍ನಲ್ಲಿ ಕೇಸ್ ಕೂಡಾ ದಾಖಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅನುಮತಿ ಇಲ್ಲದೇ ಯಾರೂ ವರಾಹ ರೂಪಂ ಹಾಡನ್ನು ಬಳಕೆ ಮಾಡದಂತೆ ನಿರ್ಬಂಧ ವಿಧಿಸಿತ್ತು. ಇದೀಗ ಕೋರ್ಟ್ ಆದೇಶಕ್ಕೆ ತಲೆಬಾಗಿರುವ ಚಿತ್ರತಂಡ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದ ವರಾಹ ರೂಪಂ ಹಾಡನ್ನು ಡಿಲೀಟ್ ಮಾಡಿದೆ. ಯೂಟ್ಯೂಬ್ ಮಾತ್ರವಲ್ಲದೇ ಮ್ಯೂಸಿಕ್ ಆಪ್ ಸಾವನ್ ಮೊದಲಾದ ಪ್ಲಾಟ್ ಫಾರ್ಮ್‍ಗಳಿಂದಲೂ ಹಾಡನ್ನು ತೆಗೆದುಹಾಕಲಾಗಿದೆ. ಆದರೆ ಯೂಟ್ಯೂಬ್ ಮ್ಯೂಸಿಕ್ ಸೇರಿ ಕೆಲವು ಆಪ್‍ಗಳಲ್ಲಿ ಈ ಹಾಡನ್ನು ಡಿಲೀಟ್ ಮಾಡಲಾಗಿಲ್ಲ.

ಇದನ್ನೂ ಓದಿ: Lockdown again in China : ಕೊರೊನಾ ಹೊಸ ಅಲೆಯ ಆರ್ಭಟ : ಚೀನಾದಲ್ಲಿ ಮತ್ತೆ ಲಾಕ್‌ಡೌನ್
ಪ್ರಕರಣದ ಹಿನ್ನೆಲೆ ಏನು..?
ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಸಾಮ್ಯತೆ ಇದ್ದು, ಕಾಪಿರೈಟ್ಸ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ ಎಂದು ತೈಕುಡಂ ಬ್ರಿಡ್ಜ್ ಹೇಳಿತ್ತು. ಈ ಸಂಬಂಧ ಕೋರ್ಟ್ ನಲ್ಲಿ ವರಾಹ ರೂಪಂ ಹಾಡಿನ ಮೇಲೆ ನಿರ್ಬಂಧ ಹೇರುವಂತೆ ಮನವಿ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ಕೋಯಿಕ್ಕೋಡ್ ಕೋರ್ಟ್ ವರಾಹ ರೂಪಂ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ನಿರ್ಮಾಪಕರು, ನಿರ್ದೇಶಕರು, ಸಂಗೀತ ಸಂಯೋಜಕರು, ಯೂಟ್ಯೂಬ್ ಸೇರಿ ಇತರೆ ಪ್ಲಾಟ್ ಫಾರ್ಮ್ ಗಳು ಈ ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್ ಆದೇಶ ನೀಡಿತ್ತು.
Varaha Roopam Copyright issue : Kantara’s ‘Varaha Roopam’ song deleted from YouTube