Kantara Movie Controversy : ದಲಿತರ ಅವಹೇಳನ ಆರೋಪ : ಕಾಂತಾರ ಪ್ರದರ್ಶನ ಸ್ಥಗಿತಕ್ಕೆ ಒತ್ತಾಯ

ಒಂದೆಡೆ ಕಾಂತಾರಾ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದೆ. (Kantara Movie Controversy)ಇನ್ನೊಂದೆಡೆ ದಲಿತ ವಿರೋಧಿ ಅಥವಾ ದಲಿತರಿಗೆ ಅವಮಾನ ಮಾಡುವ ಸಂಗತಿಗಳನ್ನು ವೈಭವಿಕರಿಸಲಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಕಾಂತಾರಾ ಚಿತ್ರ ಪ್ರದರ್ಶನ ಸ್ಥಗಿತಕ್ಕೆ ದಲಿತ ಸಂಘಟನೆಗಳು ಒತ್ತಾಯಿಸಿವೆ.


ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಂಘಟನೆಗಳಿಂದ ಕಾಂತಾರ ಸಿನಿಮಾಕ್ಕೆ ಈಗ ಈ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಿದ ದಲಿತ ಸಂಘಟನೆಗಳು. ಕಾಂತಾರಾ ಚಿತ್ರದಲ್ಲಿ ದಲಿತ ಸಮುದಾಯಕ್ಕೆ ಅವಹೇಳನ ಮಾಡಲಾಗಿದೆ. ದಲಿತ ಮಹಿಳೆಯರು ಮತ್ತು ಯುವಜನರನ್ನು ಅವಮಾನ ಮಾಡಲಾಗಿದೆ. ಕೆಳ ಸಮುದಾಯದ ಯುವಕರನ್ನು ಪೋಲಿ ಹುಡುಗರ ರೀತಿ ಚಿತ್ರಿಸಲಾಗಿದೆ. ಹಣ-ಹೆಂಡ ಕೊಟ್ಟರೆ ಏನನ್ನೂ ಮಾಡಬಲ್ಲರು ಎಂಬುವುದಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿದ್ದಾರೆ.


ದೈವನರ್ತಕರೂ ನಮ್ಮ ಜೊತೆ ನೋವು ಹಂಚಿಕೊಂಡಿದ್ದಾರೆ ಆದರೆ ಅದನ್ನು ಸಮಾಜದ ಮುಂದೆ ಹೇಳಿದರೆ ಉದ್ಯೋಗ ನಷ್ಟವಾಗುವ ಭೀತಿ ವ್ಯಕ್ತಪಡಿಸಿದ್ದಾರೆ. ಚಲನಚಿತ್ರ ನೋಡಿ ಅತ್ತು ಸಮಸ್ಯೆಯನ್ನು ತೋಡಿಕೊಂಡಿದ್ದಾರೆ. ಕೇವಲ ದಲಿತರನ್ನು ಮಾತ್ರವಲ್ಲದೇ,ದೈವ ನರ್ತಕರ ಕುಟುಂಬವನ್ನು ಅವಹೇಳನ ಮಾಡಲಾಗಿದೆ. ಈ ಸಿನಿಮಾದಲ್ಲಿ ಸೆನ್ಸಾರ್ ಸಂಸ್ಥೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಸೆನ್ಸಾರ್ ಸಂಸ್ಥೆ ಪುನಃ ಈ ಸಿನಿಮಾವನ್ನು ಪರಿಶೀಲನೆ ಮಾಡಬೇಕು ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಒತ್ತಾಯಿಸಿದ್ದಾರೆ.


ಸಿನಿಮಾದಲ್ಲಿ ನಲಿಕೆ, ಪಂಬಂಧ, ಪರವ ಸಮುದಾಯವನ್ನು ಅವಮಾನ ಮಾಡಲಾಗಿದೆ‌. ದೈವ ನರ್ತಕನ ತಾಯಿಯ ಬಾಯಿಯಲ್ಲಿ ಅಸಂವಿಧಾನಿಕ ಪದವನ್ನು ಹೇಳಿಸಲಾಗಿದೆ. ಚಿತ್ರದಲ್ಲಿ ಹುಡುಗರು ಕೆಟ್ಟ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನರ್ತಕ ಕುಟುಂಬದಲ್ಲಿ ಆ ರೀತಿಯ ಕೆಟ್ಟ ಶಬ್ಧ ಬಳಕೆ ಮಾಡೋದಿಲ್ಲ. ದಲಿತ ಹುಡುಗರನ್ನು ಕೀಳಾಗಿ ಕಾಣಲಾಗಿದೆ‌ ಧಣಿ ಬಡ ಹೆಣ್ಣು ಮಗಳ ಮನೆಗೆ ಹೋಗುವಾಗ ಹೀರೋ ಕಾವಲು ಕಾಯುತ್ತಾನೆ. ಇದೆಲ್ಲ ಕೀಳು ಸಂಸ್ಕೃತಿ ತೋರುತ್ತಿದೆ.

ಹೀಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡುತ್ತೇವೆ. ಇದು ಹಿಂಸೆಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ಆಕ್ಷೇಪಾರ್ಹ ಸೀನ್ ಗೆ ಕತ್ತರಿ ಹಾಕಬೇಕು. ಗುಳಿಗ ಕಾಂತಾರಾ ಸಿನಿಮಾದಲ್ಲಿ ಇರುವ ರೀತಿಯೇ ಬೇಕು ಎನ್ನುವ ಬೇಡಿಕೆಯೂ ಬರುತ್ತಿದೆ. ಆರಾಧಾನಾ ಕ್ರಮವನ್ನು ವಿಕೃತಿಗೊಳಿಸುತ್ತಿದೆ ಎಂದು ದ.ಕ‌ ಜಿಲ್ಲಾ ನಲಿಕೆ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪದ್ಮನಾಭ ಮೂಡುಬಿದಿರೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : Varaha Roopam: ಕಾಪಿರೈಟ್ಸ್ ವಿವಾದ: ಯೂಟ್ಯೂಬ್ ನಿಂದ ಕಾಂತಾರದ ‘ವರಾಹ ರೂಪಂ’ ಸಾಂಗ್ ಡಿಲೀಟ್

ಇದನ್ನೂ ಓದಿ : Actor Vishal visits Kukke: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಲ್ಲಿ ಆಶ್ಲೇಷಾ ಬಲಿ ನೆರವೇರಿಸಿದ ತಮಿಳು ನಟ ವಿಶಾಲ್

ಒಟ್ಟಿನಲ್ಲಿ ಕಾಂತಾರದ ಯಶಸ್ಸಿನ ಜೊತೆಗೆ ವಿವಾದವೂ ತೀವ್ರಗೊಳ್ಳುತ್ತಿದೆ. ಈಗಾಗಲೇ‌ ಕೇರಳದ ಎರಡು ನ್ಯಾಯಾಲಯಗಳು ಕಾಂತಾರಾ ಸಿನಿಮಾದ ಎರಡು ಹಾಡುಗಳ ಬಳಕೆ ಮೇಲೆ‌ ನಿರ್ಬಂಧ ಹೇರಿವೆ. ಈಗ ದಲಿತ ಸಂಘಟನೆಗಳ ಕೆಂಗಣ್ಣಿಗೆ ಕಾಂತಾರ ಗುರಿಯಾಗಿದೆ.

Kantara Movie Controversy : Allegation of Denigration of Dalits : Kantara forced to stop showing

Comments are closed.