ಮಂಗಳವಾರ, ಏಪ್ರಿಲ್ 29, 2025
HomeCinemaVasanthi Nalidaga:ನಲಿದು ಬಿಟ್ಟಳು ‘ವಾಸಂತಿ’…ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್

Vasanthi Nalidaga:ನಲಿದು ಬಿಟ್ಟಳು ‘ವಾಸಂತಿ’…ಅಕ್ಟೋಬರ್ 14ಕ್ಕೆ ಸಿನಿಮಾ ರಿಲೀಸ್

- Advertisement -

ಜೇನುಗೂಡು ಸಿನಿಮಾ ಬ್ಯಾನರ್ ನಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿರುವ ವಾಸಂತಿ ನಲಿದಾಗ(Vasanthi Nalidaga) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಕೇಳ್ರಪ್ಪೋ ಕೇಳಿ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ಟ್ರೇಲರ್ ರಿಲೀಸ್ ಮಾಡಲಾಯಿತು. ಈ ವೇಳೆ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತು.

(Vasanthi Nalidaga)ನಿರ್ದೇಶಕ ರವೀಂದ್ರ ವೆಂಶಿ ಮಾತನಾಡಿ, ಒಂದೊಳ್ಳೆ ತಂಡ ಸೇರಿಕೊಂಡು ಸಿನಿಮಾ ಮಾಡಿದ್ದೇವೆ. ಒಂದು ವರ್ಷದ ಜರ್ನಿ ಇದು. ಯೂತ್ ಫುಲ್ ಎಂಟರ್ ಟ್ರೈನ್ಮೆಂಟ್ ಚಿತ್ರವಿದು. ಕಂಟೆಂಟ್ ತುಂಬಾ ಚೆನ್ನಾಗಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡರು.

ನಿರ್ಮಾಪಕ ಕೆ.ಎನ್.ಶ್ರೀಧರ್ ಮಾತನಾಡಿ, ಸಿನಿಮಾದ ಕೌಂಟ್ ಡೌನ್ ಶುರುವಾಗಿದೆ. ಇನ್ನೂ 30 ದಿನಕ್ಕೆ ಸಿನಿಮಾ ಬೆಳ್ಳಿತೆರೆ ಮೇಲೆ ಇರುತ್ತದೆ. ರಾಜ್ಯಾದ್ಯಂತ ಸಿನಿಮಾವನ್ನು ಜಯಣ್ಣ ವಿತರಣೆ ಮಾಡುತ್ತಿದ್ದಾರೆ. ಚಂದ್ರಣ್ಣ, ಭೋಗಣ್ಣ ಜಯಣ್ಣ ನಮ್ಮ ಸಿನಿಮಾ ತಂಡದ ವತಿಯಿಂದ ಧನ್ಯವಾದ. ಮನೆ ಮಂದಿ ಕುಳಿತು ನೋಡುವ ಚಿತ್ರವಿದು. ಅಕ್ಟೋಬರ್ 14ರಂದು ಸಿನಿಮಾ ತೆರೆಗೆ ಬರ್ತಿದೆ ಪ್ರತಿಯೊಬ್ಬರು ಬೆಂಬಲ ಕೊಡಿ ಎಂದರು.

ಕಾಲೇಜ್ ಸ್ಟೋರಿ ಜೊತೆಗೆ ಒಂದೊಳ್ಳೆ ಪ್ರೇಮಕಥನ ಒಳಗೊಂಡಿರುವ ವಾಸಂತಿ ನಲಿದಾಗ ಸಿನಿಮಾಗೆ ರವೀಂದ್ರ ವೆಂಶಿ ಆಕ್ಷನ್ ಕಟ್ ಹೇಳಿದ್ದು, ಯುವ ಪ್ರತಿಭೆಗಳಾದ ರೋಹಿತ್ ಶ್ರೀಧರ್ ನಾಯಕನಾಗಿ, ಭಾವನಾ ಶ್ರೀನಿವಾಸ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಸೇರಿದಂತೆ ಒಂದಷ್ಟು ಅನುಭವಿ ಕಲಾವಿದರು ಸಿನಿಮಾದಲ್ಲಿದ್ದಾರೆ.

ಇದನ್ನೂ ಓದಿ : ವಿಭಿನ್ನ ಶೀರ್ಷಿಕೆ ‘ಮಂಕು ಭಾಯ್ ಫಾಕ್ಸಿ ರಾಣಿ’ ಬಿಡುಗಡೆಗೆ ರೆಡಿ…ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಚೊಚ್ಚಲ ಸಿನಿಮಾ ಕನಸು ಇದು

ಇದನ್ನೂ ಓದಿ : ನಟ ಡಾಲಿ ಧನಂಜಯ ಅಭಿನಯದ “ಮಾನ್ಸೂನ್‌ ರಾಗ” ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

ಇದನ್ನೂ ಓದಿ : “ಕೆಜಿಎಫ್”‌ ನಟ ಯಶ್‌ ಹೊಸ ಲುಕ್‌ ವೈರಲ್‌

ಇದನ್ನೂ ಓದಿ : ಬ್ರಹ್ಮಾಸ್ತ್ರ ಸೂಪರ್‌ ಸಕ್ಸಸ್ : ರಾಷ್ತ್ರೀಯ ಸಿನಿಮಾ ದಿನ‌ ಮುಂದೂಡಿಕೆ

ಚಿತ್ರಕ್ಕೆ ಶ್ರೀಗುರು ಸಂಗೀತವಿದ್ದು, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಪೀರ್ ಸಾಹಿತ್ಯವಿದೆ. ಸಿ.ರವಿಚಂದ್ರನ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಾಹಣವಿದೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕರ ಮುನ್ನುಡಿ ಬರೆದಿರುವ ಚಿತ್ರತಂಡ ಮುಂದಿನ ಅಕ್ಟೋಬರ್ 14ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.

Nalidu Bittala ‘Vasanti’…movie release on October 14

RELATED ARTICLES

Most Popular