Ipl 2023: ಪಂಜಾಬ್​ ಕಿಂಗ್ಸ್​ ಮುಖ್ಯ ಕೋಚ್​ ಸ್ಥಾನದಿಂದ ಅನಿಲ್​ ಕುಂಬ್ಳೆ ಔಟ್​ : ಟ್ರೆವೋರ್​ ಬೇಲಿಸ್​ ಇನ್​

Ipl 2023: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಪಂಜಾಬ್​​ ಕಿಂಗ್ಸ್​​​ ತಂಡವು ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಕೋಚ್​​ ಅನಿಲ್​ ಕುಂಬ್ಳೆ ಜೊತೆಗಿ ಒಪ್ಪಂದಕ್ಕೆ ಅಂತ್ಯ ಹಾಡಿದೆ. ಅನಿಲ್​ ಕುಂಬ್ಳೆ ಜಾಗಕ್ಕೆ ಪಂಜಾಬ್​ ಕಿಂಗ್ಸ್​​ ಟ್ರೆವೋರ್​ ಬೇಲಿಸ್​ರನ್ನು ನೇಮಿಸಿದ್ದು ಇವರು 2023ರ ಐಪಿಎಲ್​ ಪಂದ್ಯಾವಳಿಯಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಟ್ರೇವೋರ್​ ಬೇಲಿಸ್​ 2019ರಲ್ಲಿ ನಡೆದ ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಚಾಂಪಿಯನ್​ಗಳಾಗಿ ಹೊರ ಹೊಮ್ಮಿದ್ದ ಇಂಗ್ಲೆಂಡ್​ ತಂಡದ ಕೋಚ್​ ಆಗಿದ್ದರು.


ಇಂಡಿಯನ್ ಪ್ರೀಮಿಯರ್​ ಲೀಗ್​​ ಟ್ರೆವೋರ್​ ಬೇಲಿಸ್​ರಿಗೆ ಹೊಸದೇನಲ್ಲ. ಈ ಹಿಂದೆ ಎರಡು ಬಾರಿ ಐಪಿಎಲ್​ ಟ್ರೋಫಿಯನ್ನು ಅಲಂಕರಿಸಿದ ತಂಡಗಳಿಗೆ ಬೇಲಿಸ್​ ಕೋಚ್​ ಆಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಪಂಜಾಬ್ ಕಿಂಗ್ಸ್​ ತಂಡವು ಟ್ರೆವೋರ್​ ಬೇಲಿಸ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಇನ್ನು ಪಂಜಾಬ್​ ಕಿಂಗ್ಸ್​ ತಂಡಕ್ಕೆ ಕೋಚ್​​ ಆಗಿ ಆಯ್ಕೆ ಆದ ಬಳಿಕ ಪ್ರತಿಕ್ರಿಯೆ ನೀಡಿದ ಟ್ರೆವೋರ್​ ಬೇಲಿಸ್​, ಪಂಜಾಬ್​ ಕಿಂಗ್ಸ್​ ತಂಡವು ನನಗೆ ಮುಖ್ಯ ಕೋಚ್​ ಸ್ಥಾನ ನೀಡಿರುವುದು ನನಗೆ ತುಂಬಾನೇ ಸಂತಸ ತಂದಿದೆ. ಐಪಿಎಲ್​ ಮೊದಲ ಆವೃತ್ತಿಯಿಂದಲೂ ಆಡುತ್ತಿರುವ ಪಂಜಾಬ್​ ಕಿಂಗ್ಸ್​ ತಂಡವು ಐಪಿಎಲ್​ ಟ್ರೋಫಿಯನ್ನು ಹಿಡಿಯಲು ಹಾತೊರೆಯುತ್ತಿದೆ. ಈ ತಂಡಕ್ಕೆ ಆ ಯಶಸ್ಸನ್ನು ತಂದುಕೊಡಲು ನಾನು ಯತ್ನಿಸುತ್ತೇನೆ ಎಂದು ಹೇಳಿದ್ದಾರೆ .


ಪಂಜಾಬ್​ ಕಿಂಗ್ಸ್​ ತಂಡವು ಈ ಹಿಂದೆ ಕಿಂಗ್ಸ್​ ಇಲೆವನ್​ ಪಂಜಾಬ್​ ಎಂಬ ಹೆಸರನ್ನು ಹೊಂದಿತ್ತು. ಐಪಿಎಲ್​ ಮೊದಲ ಆವೃತ್ತಿಯಿಂದಲೂ ಕಣದಲ್ಲಿರುವ ಈ ತಂಡಕ್ಕೆ ಹೆಸರು ಬದಲಾವಣೆ ಮಾಡಿದರೂ ಹಣಬರಹ ಮಾತ್ರ ಬದಲಾಗಿಲ್ಲ. 2014ರ ಆವೃತ್ತಿಯಲ್ಲಿ ಫೈನಲ್​ ಪ್ರವೇಶಿಸಿದ್ದು ಬಿಟ್ಟರೆ ಪಂಜಾಬ್​ ಕಿಂಗ್ಸ್​ ಐಪಿಎಲ್​ನಲ್ಲಿ ಇನ್ಯಾವ ಗಮನಾರ್ಹ ಸಾಧನೆಯನ್ನು ಮಾಡಿಲ್ಲ. ಪ್ರೀತಿ ಝಿಂಟಾ, ನೆಸ್​ ವಾಡಿಯಾ, ಮೋಹಿತ್​ ಬುಮ್ರಾ ಹಾಗೂ ಕರುಣ್​ ಪಾಲ್​ ಜಂಟಿ ನಾಯಕತ್ವವನ್ನು ಹೊಂದಿರುವ ಪಂಜಾಬ್​ ಕಿಂಗ್ಸ್​ ತಂಡವು ಟ್ರೆವೋರ್​ ಬೇಲಿಸ್​ ಮಾರ್ಗದರ್ಶನದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನು ಓದಿ : Ravindra Jadeja: 10 ದಿನಗಳ ನಂತರ ಬೆಡ್‌ನಿಂದ ಮೇಲೆದ್ದು ನಿಂತ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜ

ಇದನ್ನೂ ಓದಿ : woman killed grandmother :ಆನ್​ಲೈನ್​ ಸಾಲದ ಆ್ಯಪ್​ಗಳಿಂದ ಕಿರುಕುಳ : ಸಾಲ ತೀರಿಸಲೆಂದು ಅಜ್ಜಿಯನ್ನೇ ಕೊಂದ ಮೊಮ್ಮಗಳು ಅಂದರ್​

Ipl 2023: Trevor Bayliss Replaces Anil Kumble As Head Coach Of Punjab Kings

Comments are closed.