ಭಾನುವಾರ, ಏಪ್ರಿಲ್ 27, 2025
HomeCinemaVeena Kapoor: ಖ್ಯಾತ ಹಿರಿಯ ನಟಿ ವೀಣಾ ಕಪೂರ್ ಸತ್ತಿಲ್ಲ; ಕೇಸ್ ಗೆ ಹೊಸ ಟ್ವಿಸ್ಟ್

Veena Kapoor: ಖ್ಯಾತ ಹಿರಿಯ ನಟಿ ವೀಣಾ ಕಪೂರ್ ಸತ್ತಿಲ್ಲ; ಕೇಸ್ ಗೆ ಹೊಸ ಟ್ವಿಸ್ಟ್

- Advertisement -

ಮುಂಬೈ; Veena Kapoor: ಬಾಲಿವುಡ್ ನ ಹಿರಿಯ ನಟಿ ವೀಣಾ ಕಪೂರ್ ಹತ್ಯೆ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ನಟಿ ವೀಣಾ ಕಪೂರ್ ಹತ್ಯೆಯಾಗಿದೆ. ಸ್ವಂತ ಮಗನೇ ಆಸ್ತಿಗಾಗಿ ಕೊಲೆ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಇದೀಗ ಖುದ್ದು ನಟಿ ಮಾಧ್ಯಮಗಳ ಮುಂದೆ ಬಂದು ಶಾಕ್ ಕೊಟ್ಟಿದ್ದಾರೆ.

ಕಳೆದ 3-4 ದಿನಗಳಿಂದ ಹಿಂದಿ ಸಿನಿಮಾ ಹಾಗೂ ಕಿರುತೆರೆಗಳಲ್ಲಿ ನಟಿಸಿದ್ದ ವೀಣಾ ಕಪೂರ್ ಅವರ ಹತ್ಯೆ ನಡೆದಿದೆ. ಅವರ ಸ್ವಂತ ಮಗ ಸಚಿನ್ ಕಪೂರ್ ಆಸ್ತಿ ಆಸೆಗಾಗಿ ಹೆತ್ತ ತಾಯಿಯನ್ನೇ ಕೊಲೆಗೈದಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ವಾಸ್ತವದಲ್ಲಿ ಅದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ನಾನು ಸತ್ತಿಲ್ಲ, ನನ್ನ ಮಗ ನನ್ನನ್ನು ಕೊಂದಿಲ್ಲ ಎಂದು ನಟಿ ವೀಣಾ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮುಂಬೈ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: Manoranjan Prabhakar: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮನೋರಂಜನ್‌ ಪ್ರಭಾಕರ್‌ ನಿಧನ

ಈ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುತ್ರನೇ ಆಸ್ತಿ ಆಸೆಗಾಗಿ ನನ್ನನ್ನು ಕೊಂದಿದ್ದಾನೆ ಅನ್ನೋದು ಸುಳ್ಳು ಸುದ್ದಿ. ಅಸಲಿಗೆ ಕೊಲೆ ಪ್ರಕರಣ ನಡೆದಿದ್ದು ಜುಹುವಿನಲ್ಲಿ. ಅಲ್ಲಿ ವೀಣಾ ಕಪೂರ್ ಎಂಬವರು ಮಗನಿಂದಲೇ ಹತ್ಯೆಯಾಗಿದ್ದಾರೆ. ಆದರೆ ನಾನು ಕೊಲೆಯಾಗಿದ್ದೇನೆ ಎಂದು ದೇಶದೆಲ್ಲೆಡೆ ಸುದ್ದಿ ಹರಡಿದೆ. ನಾನು ಈಗ ಗೋರೆಗಾಂವ್ ನಲ್ಲಿ ಮಗನ ಜೊತೆಗೆ ಆರಾಮಾಗಿದ್ದೇನೆ. ನಾನು ಬದುಕಿದ್ದೇನೆ. ಇಂಥ ಸುಳ್ಳು ಸುದ್ದಿಯನ್ನು ನಂಬಬೇಡಿ. ನನ್ನ ಸಾವಿನ ಸುದ್ದಿ ಕೇಳಿ ನನಗೆ ನೋವಾಗಿದೆ. ಕಿಡಿಗೇಡಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಬೇರೆ ಯಾರೋ ವೀಣಾ ಕಪೂರ್ ಸಾವಿಗೆ ನನ್ನ ಫೋಟೋ ಹಾಕಿ ಇಲ್ಲದ ರೂಮರ್ಸ್ ಹಬ್ಬಿಸಿದ್ದಾರೆ. ಅನೇಕ ಮಂದಿ ನಮ್ಮ ಮನೆಗೆ, ಮೊಬೈಲ್ ಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಎಲ್ಲರ ಕರೆಗಳಿಗೆ ಉತ್ತರಿಸಿ ಸಾಕಾಗಿದೆ. ಮಾನಸಿಕವಾಗಿ ಹಿಂಸೆಗೆ ಒಳಪಟ್ಟಿದ್ದೇನೆ ಎಂದು ಹೇಳಿದ್ದಾರೆ.

73 ವರ್ಷದ ವೀಣಾ ಕಪೂರ್ ಹಾಗೂ ಪುತ್ರ ಸಚಿನ್ ಕಪೂರ್ ನಡುವೆ 12 ಕೋಟಿ ಮೌಲ್ಯದ ಫ್ಲ್ಯಾಟ್ ಗಾಗಿ ಜಗಳವೇರ್ಪಟ್ಟಿತ್ತು. ಇದೇ ವಿಚಾರಕ್ಕೆ ಮಗನೇ ತಾಯಿಯನ್ನು ಕೊಂದಿದ್ದಾನೆ ಎಂದು ಸುದ್ದಿಯಾಗಿತ್ತು. ಸದ್ಯ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: Protest against pathan: ಪಠಾಣ್ ವಿರುದ್ಧ ಜನಾಕ್ರೋಶ: ಶಾರೂಕ್‌ ಖಾನ್ ಭಾವಚಿತ್ರ ದಹಿಸಿ ಪ್ರತಿಭಟನೆ

RELATED ARTICLES

Most Popular