ನಗುವಿನ ಹೂಗಳ ಮೇಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ : ಅಭಿಷೇಕ್ ಗೆ ಜೋಡಿಯಾಗಿ ಮಿಂಚಿದ ಶರಣ್ಯಾ

ನಗುವಿನ ಹೂಗಳ‌ ಮೇಲೆ ಮೊದಲ ನೋಟ ಅನಾವರಣ..ಇದು ನವೀರಾದ ಪ್ರೇಮಕಥೆಯ ಯಾನ. ಕನ್ನಡದಲ್ಲಿ ಲವ್ ಸ್ಟೋರಿ ಜಾನರ್ ಸಿನಿಮಾಗಳಿಗೇನು ಕಮ್ಮಿ ಇಲ್ಲ. ಹೊಸ ಹೊಸ ಬಗೆಯ ಸಿನಿಮಾಗಳು ಪ್ರೇಕ್ಷಕರ ಮಡಿಲು ಸೇರ್ತಿವೆ. ಅದರ ಮುಂದುವರೆದ ಭಾಗವಾಗಿ ನಗುವಿನ ಹೂಗಳ ಮೇಲೆ ಚಿತ್ರ ಚಿತ್ರಪ್ರೇಮಿಗಳನ್ನು ರಂಜಿಸಲು ಬರ್ತಿದೆ. ವರನಟ, ರಸಿಕರ ರಾಜ ಡಾ.ರಾಜ್ ಕುಮಾರ್ ಹಾಡಿರುವ ನಗುವಿನ ಹೂಗಳ ಮೇಲೆ (Naguvina Hoogala mele) ಸಾಲುಗಳಿಂದ ಸ್ಪೂರ್ತಿ ಪಡೆದು ಈ ಶೀರ್ಷಿಕೆಯನ್ನು ಇಡಲಾಗಿದೆ.

ಹಿರಿಯ ಚಿತ್ರ ನಿರ್ದೇಶಕ ಸಿ ವಿ ಶಿವಶಂಕರ್‌ ಪುತ್ರ, ಆಮ್ಲೆಟ್‌, ಕೆಂಪಿರ್ವೆ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೆಂಕಟ್‌ ಭಾರದ್ವಾಜ್‌ ಆಕ್ಷನ್ ಕಟ್ ಹೇಳಿರುವ ನಗುವಿನ ಹೂಗಳ ಮೇಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಸಿನಿಮಾಗೆ ವೆಂಕಟ್ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಜವಾಬ್ದಾರಿ ಹೊತ್ತಿದ್ದಾರೆ.

ಕಿರುತೆರೆಯಲ್ಲಿ ಖ್ಯಾತಿಗೊಳಿಸಿರುವ ಅಭಿಷೇಕ್ ರಾಮದಾಸ್ ಮತ್ತು ಶರಣ್ಯಾ ಶೆಟ್ಟಿ ಜೋಡಿಯಾಗಿ ನಟಿಸ್ತಿರುವ ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಬಲರಾಜ್ ವಾಡಿ, ಗಿರೀಶ್, ಆಶಾ ಸುಜಯ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತಾ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ಕಲಾಬಳಗ ಸಿನಿಮಾದಲ್ಲಿದೆ. ಈಗಾಗ್ಲೇ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ತೆಲುಗಿನ ಖ್ಯಾತ ನಿರ್ಮಾಪಕರಾದ ಕೆ ಕೆ ರಾಧಾಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ರೋಮ್ಯಾಂಟಿಕ್ ಲವ್ ಆಕ್ಷನ್ ನಗುವಿನ ಹೂಗಳ ಮೇಲೆ ಚಿತ್ರ ನಿರ್ಮಿಸುತ್ತಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಲವ್ವ್ ಪ್ರಾಣ್ ಮೆಹ್ತಾ ಚಿತ್ರಕ್ಕೆ ಸಂಗೀತ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ, ಚಂದ ಪಿ ಸಂಕಲನ, ಕಬ್ಬಡಿ ನರೇಂದ್ರಬಾಬು, ಚಿದಂಬರ ನರೇಂದ್ರ, ಕಿರಣ್ ರಾಜ್ ಸಾಹಿತ್ಯ ಸಿನಿಮಾಕ್ಕಿದೆ.

ಇದನ್ನೂ ಓದಿ : Made in China : ಕನ್ನಡದ ಮೊದಲ ವರ್ಚುವಲ್ ಸಿನಿಮಾ ‘ಮೇಡ್ ಇನ್ ಚೈನಾ’ ತೆರೆಗೆ : ಜೂನ್ 17ಕ್ಕೆ ಮಲ್ಟಿಪ್ಲೆಕ್ಸ್‌ನಲ್ಲಷ್ಟೇ ರಿಲೀಸ್

ಇದನ್ನೂ ಓದಿ : magalu janaki : ಮತ್ತೆ ಬರ್ತಿದ್ದಾಳೆ ‘ಮಗಳು ಜಾನಕಿ ’ : ಸಿಹಿ ಸುದ್ದಿ ಹಂಚಿಕೊಂಡ ಟಿ.ಎನ್​ ಸೀತಾರಾಮ್​

Venkat Bhardwaj Naguvina Hoogala mele Movie Released In August

Comments are closed.