ಮಂಗಳವಾರ, ಏಪ್ರಿಲ್ 29, 2025
HomeCinemaಸಮಂತಾಗೆ ನನ್ನ ರೋಜಾ ನೀನೇ ಎಂದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ

ಸಮಂತಾಗೆ ನನ್ನ ರೋಜಾ ನೀನೇ ಎಂದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ

- Advertisement -

ಟಾಲಿವುಡ್ ಸಿನಿರಂಗದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡಗೆ (Vijay Devarakonda Birthday) ಹುಟ್ಟುಹಬ್ಬದ ಸಂಭ್ರಮ. ಈ ಹೊತ್ತಲ್ಲೇ ದೇವರಕೊಂಡ ನನ್ನ ರೋಜಾ ನೀನೆ ಎಂದು ಸಮಂತಾಗೆ ಹೇಳಿದ್ದಾರೆ. ಇದೇನಪ್ಪಾ ಅಂತಾ ಹುಬ್ಬೇರಿಸಬೇಡಿ. ವಿಜಯ್‌ ದೇವರಕೊಂಡ ಬರ್ತಡೇ ಹಿನ್ನೆಲೆಯಲ್ಲಿಂದು ಖುಷಿ ಸಿನಿಮಾದ ಮೊದಲ ಹಾಡನ್ನು ಸಿನಿತಂಡ ರಿಲೀಸ್‌ ಮಾಡಿದೆ. ನನ್ನ ರೋಜಾ ನೀನೇ ಎಂಬ ಮೆಲೋಡಿ ಟ್ರ್ಯಾಕ್ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿದೆ.

ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಹೇಶಾಮ್ ಅಬ್ದುಲ್ ವಹಾಬ್ ಧ್ವನಿಯಾಗುವುದರ ಜೊತೆಗೆ ಟ್ಯೂನ್ ಹಾಕಿದ್ದಾರೆ. ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ಸಮಂತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಇಡೀ ಸಾಂಗ್ ನ್ನು ಚಿತ್ರೀಕರಿಸಲಾಗಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಿರುವ ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಸಿನಿಮಾಕ್ಕೆ ಮಜಿಲಿ ಹಿಟ್ ನಿರ್ದೇಶಕ ಶಿವ ನರ್ವಣ ನಿರ್ದೇಶಿಸುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ : ಶೀಘ್ರದಲ್ಲೇ ಕಾಂತಾರ 2 ಚಿತ್ರೀಕರಣ ಆರಂಭ : ರಿಷಬ್‌ ಶೆಟ್ಟಿ

ಇದನ್ನೂ ಓದಿ : ಮಗಳು ಹುಟ್ಟಿದಾಗ ಸಿಹಿ ಹಂಚಲು ಕಾಸಿರಲಿಲ್ಲ : ವಿಕೇಂಡ್ ಟೆಂಟ್ ನಲ್ಲಿ ರಿವೀಲ್ ಆಯ್ತು ನಟ ಪ್ರೇಮ್ ಕಣ್ಣೀರ ಕಹಾನಿ

ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಸಿನಿಮಾದ ಭಾಗವಾಗಿದ್ದಾರೆ. ಹೇಷಂ ವಾಹೆಬ್ ಸಂಗೀತ, ಜಿ ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಸಿನಿಮಾಕ್ಕಿದೆ.

ಇದನ್ನೂ ಓದಿ : ವಿನಯ್‌ ರಾಜ್‌ಕುಮಾರ್‌ಗೆ ಹುಟ್ಟುಹಬ್ಬ ಸಂಭ್ರಮ : ವಿಶೇಷವಾಗಿ ಹಾರೈಸಿದ ಒಂದು ಸರಳ ಪ್ರೇಮಕಥೆ ಸಿನಿತಂಡ

ಇದನ್ನೂ ಓದಿ : ನಟ ಶಿವರಾಜ್‌ಕುಮಾರ್‌ ಪ್ರಚಾರಕ್ಕೆ ವ್ಯಂಗ್ಯವಾಡಿದ ಪ್ರಶಾಂತ್‌ ಸಂಬರ್ಗಿ

Vijay Devarakonda Birthday : Sensational star Vijay Devarakonda said to Samantha that you are my rose

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular