ಕರ್ನಾಟಕ ವಿಧಾನಸಭಾ ಚುನಾವಣೆ : ಮತದಾನಕ್ಕೆ ಸಕಲ ಸಿದ್ದತೆ, ಬಿಗಿ ಭದ್ರತೆ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಒಂದು ದಿನ ಬಾಕಿ ಉಳಿದಿದೆ. ಅಂತಿಮ ಹಂತದಲ್ಲಿ ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ನಾಳೆ (ಮೇ 10) ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ನಡೆಯಲಿರುವ ಮತದಾನ ಪ್ರಕ್ರಿಯೆ ನಡೆಯಲಿದೆ. ಇನ್ನೊಂದೆಡೆಯಲ್ಲಿ ಚುನಾವಣಾ ಅಧಿಕಾರಿಗಳು ಮತದಾನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಿಗಿ ಪೊಲೀಸ್‌ ಭದ್ರತೆಯನ್ನು (Polling police security) ಒದಗಿಸಲಾಗಿದ್ದು, ಒಟ್ಟು 1.56 ಲಕ್ಷ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗಾಗಿ ಬರೋಬ್ಬರಿ 2,615 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಒಟ್ಟು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 11,631 ಸೂಕ್ಷ್ಮ ಮತಗಟ್ಟೆ, 617 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇನ್ನು 75,603 ಬ್ಯಾಲೆಟ್ ಯೂನಿಟ್ ಗಳಿದ್ದು, 70,300 ಕಂಟ್ರೋಲ್ ಯೂನಿಟ್‌ಗಳಿವೆ. 76,202 ವಿವಿ ಪ್ಯಾಟ್ ಯೂನಿಟ್‌ಗಳನ್ನು ಮತದಾನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿನ ಮತದಾನ ಅಧಿಕಾರಿಗಳನ್ನು ಮತಗಟ್ಟೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ.

ಇನ್ನು ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಾದ್ಯಂತ ಭದ್ರತೆಗಾಗಿ ಒಟ್ಟು 1.56 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರಲ್ಲಿ ಒಟ್ಟು 304 ಡಿವೈಎಸ್ಪಿಗಳು, 991 ಪಿಐಗಳು, 2610 ಪಿಎಸ್‌ಐಗಳು, 5803 ಎಎಸ್‌ಐಗಳು, 46,421 ಪೊಲೀಸರು, 27,990 ಗೃಹ ರಕ್ಷಕರು ಸೇರಿದಂತೆ 84,119 ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ಕರೆಯಿಸಿಕೊಳ್ಳಲಾಗಿದೆ.

ಹೊರ ರಾಜ್ಯಗಳಿಂದ ಸುಮಾರು 8500 ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನು ಚುನಾವಣಾ ಕರ್ತವ್ಯ ನಿಯೋಜಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಭದ್ರತಾ ಪಡೆ ಸೇರಿದಂತೆ 8,500 ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದ್ದು, ಒಟ್ಟಾರೆ 1.56 ಲಕ್ಷ ಪೊಲೀಸರು ಮತದಾನದ ದಿನ ಬಂದೋಬಸ್ತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನ ಬಿಎಎಸ್ ಎಫ್ 108, ಸಿಐಎಸ್ಎಫ್ 75, ಐಟಿಬಿಪಿ 70, ಆರ್ ಪಿಎಫ್-35, ಎಸ್ಎಸ್ ಬಿ 75 ಹಾಗೂ ರಾಜ್ಯದ 224 ಕೆಎಸ್ಆರ್ ಪಿ ತುಕಡಿಗಳು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ : ಹೊಸದುರ್ಗ : ಹಣ್ಣಿನ ಬುಟ್ಟಿಯ ಜೊತೆ ಜಯದ ವಿಶ್ವಾಸದಲ್ಲಿ ಗೂಳಿಹಟ್ಟಿ

ಭದ್ರತೆಗಾಗಿ ನಿಯೋಜನೆಗೊಂಡ ಸಿಬ್ಬಂದಿ, 58, 282 ಮತಗಟ್ಟೆಗಳ ಬಳಿ ನಿಯೋಜಿಸಲಾಗಿದೆ. ಇನ್ನು 11,617 ಸೂಕ್ಷ್ಮ ಮತಗಟ್ಟೆಗಳ ಬಳಿ ಸಿಆರ್ ಪಿಎಫ್ ಹಾಗೂ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ವಿಶೇಷವಾಗಿ 2930 ಪೊಲೀಸ್ ಮೊಬೈಲ್ ಸೆಕ್ಟರ್ ಗಳ ಕಾರ್ಯಾಚರಣೆ ನಡೆಸಲಿದ್ದಾರೆ. ಒಂದು ಮೊಬೈಲ್ ಸೆಕ್ಟರ್ 20 ಮತಗಟ್ಟೆಗಳನ್ನು ಕವರ್ ಮಾಡಲಿದೆ. ಮೊಬೈಲ್ ಸೆಕ್ಟರ್ ಗಳ ಮೇಲ್ವಿಚಾರಣೆಗೆ 749 ಸೂಪರ್‌ ವೈಸರ್ ಗಳು ನಿಯೋಜನೆ ಮಾಡಲಾಗಿದೆ. 700 ಫೈಯಿಂಗ್ ಸ್ಕ್ವಾಡ್, 700 ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ.

Polling police security : Karnataka assembly election: All preparedness for voting, tight security

Comments are closed.