ಸೋಮವಾರ, ಏಪ್ರಿಲ್ 28, 2025
HomeCinemaVijay Mallya Web Series : ಬಿಗ್ ಸ್ಕ್ರಿನ್ ಗೆ ಮದ್ಯದ ದೊರೆ : ವೆಬ್...

Vijay Mallya Web Series : ಬಿಗ್ ಸ್ಕ್ರಿನ್ ಗೆ ಮದ್ಯದ ದೊರೆ : ವೆಬ್ ಸೀರಿಸ್ ರೂಪದಲ್ಲಿ ವಿಜಯ್ ಮಲ್ಯ ಸ್ಟೋರಿ

- Advertisement -

ಇತ್ತೀಚಿಗೆ ಬಾಲಿವುಡ್ ನಿಂದ ಆರಂಭಿಸಿ ಸ್ಯಾಂಡಲ್ ವುಡ್ ತನಕ ಎಲ್ಲೆಡೆಯೂ ಲೈಫ್ ಸ್ಟೋರಿಗಳದ್ದೇ ಸದ್ದು. ಈ ಸಾಲಿಗೆ ಹೊಸ ಸೇರ್ಪಡೆ ಮದ್ಯದ ದೊರೆ ವಿಜಯ್ ಮಲ್ಯ ಸ್ಟೋರಿ. ಹೌದು ಮದ್ಯದ ಸಾಮ್ರಾಜ್ಯವನ್ನೇ ಕಟ್ಟಿ‌, ಉದ್ಯಮದ ಅನಭಿಷಿಕ್ತ ದೊರೆಯಾಗಿ ಮೆರೆದ ವಿಜಯ್ ಮಲ್ಯ ಈಗ ಸಾಲಗಾರನಾಗಿ ದೇಶಬಿಟ್ಟು ಹೋಗಿ ಕೋರ್ಟ್ ಪನಿಶಮೆಂಟ್ ನೀರಿಕ್ಷೆಯಲ್ಲಿದ್ದಾರೆ. ಇಂಥ‌ ಮದ್ಯದ ದೊರೆಯ ಬದುಕಿನ ಸತ್ಯಗಳನ್ನು ಅನಾವರಣಗೊಳಿಸುವ‌ ವೆಬ್ ಸೀರಿಸ್ ವೊಂದು ತೆರೆಗೆ ಬರಲಿದೆ. ಭಾರತದ ಹಲವು ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ಸಾಲ ಪಡೆದು ಹಿಂತಿರುಗಿಸದೇ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ ಲೈಫ್ ಬಗ್ಗೆ The Vijay Malya Life Story ಎಂಬ ಪುಸ್ತಕವೊಂದು ಬಿಡುಗಡೆಯಾಗಿತ್ತು. ಈ ಸಿನಿಮಾದ ಕತೆಯನ್ನು ಆಧಾರವಾಗಿಟ್ಟುಕೊಂಡು ಒಂದು ವೆಬ್ ಸಿರೀಸ್ ((Vijay Mallya Web Series)) ನಿರ್ಮಾಣವಾಗಲಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸುವ ಸಿದ್ಧತೆ ಕೂಡ ನಡೆದಿದೆ.

ಅಲ್‌ಮೈಟಿ ಮೋಶನ್ ಪಿಕ್ಚರ್ಸ್ ಸಂಸ್ಥೆಯ ನಟಿ ಹಾಗೂ ನಿರ್ಮಾಪಕಿ ಪ್ರಬ್ಲಿನ್‌ಕೌರ್ ಹಾಗೂ ಪಿಝಡ್ ಪಿಕ್ಚರ್ ಸಂಸ್ಥೆಯು ಜಂಟಿಯಾಗಿ ಈ ಸಿನಿಮಾ ನಿರ್ಮಿಸುತ್ತಿದೆ. ಹಿರಿಯ ಪತ್ರಕರ್ತ ಕೆ.ಗಿರೀಶ್ ಅವರು ಮಲ್ಯ ಕುರಿತು ಬರೆದಿರುವ The Vijay Malya Life story ಪುಸ್ತಕದ ಆಯ್ದ ಭಾಗಗಳನ್ನು ವೆಬ್ ಸೀರಿಸ್ ರೂಪದಲ್ಲಿ ತೆರೆಗೆ ತರಲಾಗುತ್ತದೆ.

ಇದರಲ್ಲಿ ಮಲ್ಯ, ಬದುಕು,ಸಾಧನೆ ಹಾಗೂ ಸೋಲಿನ ಕಾರಣಗಳು, ಮಲ್ಯ ಬಾಲ್ಯದ ದಿನಗಳು ಸೇರಿದಂತೆ ಎಲ್ಲ ಮಾಹಿತಿ ಇರಲಿದೆ ಎನ್ನಲಾಗುತ್ತಿದೆ. ಎಮ್ ಎಕ್ಸ್ ಪ್ಲೇಯರ್ ಈಗಾಗಲೇ ಚಿತ್ರದ ಹಕ್ಕುಗಳನ್ನು ಖರೀದಿಸಿದೆ. ಸದ್ಯದಲ್ಲೇ ಸಿನಿಮಾ‌ ಚಿತ್ರೀಕರಣ ಆರಂಭವಾಗಲಿದೆ. ಬಾಲಿವುಡ್ ನಟರೊಬ್ಬರು ವಿಜಯ್ ಮಲ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಯಾರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಎಮ್ ಎಕ್ಸ್ ಪ್ಲೇಯರ್ ವೆಬ್ ಸೀರಿಸ್ ನ್ನು ಓಟಿಟಿಯಲ್ಲಿ ಪ್ರಸಾರ ಮಾಡಲಿದೆ. ವಿಜಯ್ ಮಲ್ಯ ಸದ್ಯ ಗಡಿಪಾರು ಸ್ಥಿತಿಗೆ ತಲುಪಿದ್ದು ಸಾಲದ ಸಮಸ್ಯೆ ವಿಜಯ್ ಮಲ್ಯಯನ್ನು ಹಲವು ಕಾಡುತ್ತಿದೆ. ಯುನೈಟೆಡ್ ಸ್ಪೀರಿಟ್ಸ್, ಕಿಂಗ್ ಫಿಶರ್ ನಂತಹ ಮದ್ಯದ ಉದ್ಯಮವನ್ನು ಹೊಂದಿದ್ದ ಮಲ್ಯ, ಭಾರತ ಮಾತ್ರವಲ್ಲದೇ ವಿದೇಶಿ ಬ್ಯಾಂಕ್ ಗಳಲ್ಲೂ ಸಾಲ ಮಾಡಿಕೊಂಡು ಸಂಕಷ್ಟದಲ್ಲಿದ್ದಾರೆ. ಸದ್ಯ ಭಾರತದಿಂದ ತಲೆಮರೆಸಿಕೊಂಡಿರುವ ಮಲ್ಯಗೆ ಇಂಗ್ಲೆಂಡ್‌ ಸದ್ಯ ಅಡಗು ತಾಣದಂತಾಗಿದೆ. ಹೀಗಿರುವ ಮಲ್ಯ ಲೈಫ್ ಸ್ಟೋರಿ ವೆಬ್ ಸೀರಿಸ್ ರೂಪದಲ್ಲಿ ಬರ್ತಿರೋದಕ್ಕೆ ಅಭಿಮಾನಿಗಳು ಖುಷಿಗಾಗಿದ್ದಾರೆ.

ಇದನ್ನೂ ಓದಿ : ವರ್ಕ್ ಫ್ರಂ ಹೋಂ ಮುಂದುವರೆಯಬೇಕು; ಆಫೀಸಿಗೆ ಬರೋದು ಬೇಡ ಅಂತಿದೆ ಸಮೀಕ್ಷೆ

ಇದನ್ನೂ ಓದಿ : ರೈಲುಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ವಿಶೇಷ ಸೌಕರ್ಯ

( Vijay Mallya Story in Web Series format)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular