HTC Wildfire E2 Plus : ಮಾರುಕಟ್ಟೆಗೆ ರೀ ಎಂಟ್ರಿ ನೀಡಿದ ಎಚ್‌ಟಿಸಿ ಬ್ರಾಂಡ್; 13,400 ರೂ.ಗೆ ದೊರೆಯುವ ಎಚ್‌ಟಿಸಿ ಸ್ಮಾರ್ಟ್‌ಫೋನ್‌ ವೈಶಿಷ್ಟ್ಯವೇನು?

ಎಚ್‌ಟಿಸಿ ( HTC Smartphone) ಎಂಬ ಮೊಬೈಲ್ ಫೋನ್ ಬ್ರಾಂಡ್ ಕೇಳದವರು ಭಾರಿ ವಿರಳ. ಯಾಕೆಂದರೆ 2008ರಲ್ಲಿ ರಿಲಾಂಚ್ ಆದ ಈ ಫೋನ್ ಕ್ವಾಲಿಟಿ ವಿಷಯ ದಲ್ಲಿ ನಂಬರ್ ಒನ್ ಆಗಿತ್ತು. ಮತ್ತೆ ರೆಡ್ಮಿ, ವಿವೋ, ಒಪ್ಪೋದಂತಹ ಹೊಸ ಬ್ರಾಂಡ್ ಬಂದಮೇಲೆ ಎಚ್‌ಟಿಸಿ ತೆರೆ ಹಿಂದೆ ಸರಿದಿತ್ತು. ಇದೀಗ ಮತ್ತೆ ಎಚ್‌ಟಿಸಿ ಸದ್ದು ಮಾಡುತ್ತಿದೆ. ರಷ್ಯಾದಲ್ಲಿ ಡಿಸೆಂಬರ್ 16ರಂದು ನೂತನ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಾಗಿದೆ. HTC Wildfire E2 Plus ಎಂಬ ಫೋನ್ ಕೇವಲ ರುಬ್ 12990 ( ರೂ 13400)ಗಳಲ್ಲಿ ಮಾರ್ಕೆಟ್ ಎಂಟ್ರಿ ನೀಡಿದೆ.

ಈ ಫೋನ್ ರಷ್ಯಾದಲ್ಲಿ ಮಾತ್ರವೇ ಅಥವಾ ಇತರ ದೇಶಗಳಲ್ಲಿ ಕೂಡ ಲಾಂಚ್ ಆಗಲಿದೆಯೇ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಫೀಚರ್ ಹಾಗೂ ಬೆಲೆಯಿಂದಾಗಿ ಎಲ್ಲರ ಗಮನ ಸೆಳೆಯುತ್ತದೆ. ಇದು Unisoc Tiger T610 SoC ಪ್ರೊಸೆಸರ್, 4ಜಿಬಿ ರಾಮ್ ಹಾಗೂ 64 ಜಿಬಿ ಅನ್‌ಬೋರ್ಡ್ ಹೊಂದಿದೆ.ಜೊತೆಗೆ 14 ಪಿಕ್ಸೆಲ್ ಕ್ವಾಡ್ ಕಾಮೆರ ಹೊಂದಿದೆ. ಬ್ಯಾಟರಿಯು 4600 ಎಂಎಎಚ್ ಆಗಿದ್ದು ಉತ್ತಮ ಬ್ಯಾಕಪ್ ನೀಡುತ್ತದೆ. ಈ ನೂತನ ಫೋನ್ 12 ತಿಂಗಳ ವಾರೆಂಟಿಯೊಂದಿಗೆ ಗ್ರಾಹಕರ ಕೈ ಸೇರಲಿದೆ ಎಂದು ಕಂಪೆನಿ ಹೇಳಿದೆ. ಪ್ರಸ್ತುತ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ರಷ್ಯಾದ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆದ ಸಿಟಿಲಿಂಕ್ ಮೂಲಕ  ಮಾತ್ರ ಖರೀದಿಸಲು ಲಭ್ಯವಿದೆ.

ಸ್ಪೆಸಿಫಿಕೇಶನ್
ಡ್ಯುಯಲ್-ಸಿಮ್ (ನ್ಯಾನೋ) ಸಾಮರ್ಥ್ಯ
6.82-ಇಂಚಿನ HD+ (720×1,640 ಪಿಕ್ಸೆಲ್‌ಗಳು) ಮಲ್ಟಿ-ಟಚ್ ಡಿಸ್ಪ್ಲೇ
4GB RAM ಹಾಗೂ 64GB ಆನ್‌ಬೋರ್ಡ್ ಸಂಗ್ರಹಣೆ
ಕ್ಯಾಮೆರಾ ಸ್ಮಾರ್ಟ್‌ಫೋನ್ 5-ಮೆಗಾಪಿಕ್ಸೆಲ್ ಮತ್ತು ಎರಡು 2-ಮೆಗಾಪಿಕ್ಸೆಲ್ 
ಕನೆಕ್ಟಿವಿಟಿ: 4ಜಿ (4G LTE), ವೈಪೈ (Wi-Fi) ಜೊತೆಗೆ 802.11 a/b/g/n/ac, ಬ್ಲೂಟೂತ್ v5, USB ಟೈಪ್-C ಪೋರ್ಟ್ ಹೊಂದಿದೆ.
ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್, ಸೌಲಭ್ಯ ಒಳಗೊಂಡಿದೆ.
ಇದು 174.2×98.6×9.3mm ಅಳತೆ ಮತ್ತು 210 ಗ್ರಾಂ ತೂಕ ಹೊಂದಿದೆ .

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ: Flipkart Big Saving Days Offers: ಡಿಸೆಂಬರ್ 21ರ ಒಳಗೆ ಸ್ಮಾರ್ಟ್‌ಫೋನ್‌ ಖರೀದಿಸಲು ಪ್ಲಿಫ್‌ಕಾರ್ಟ್‌ ಬಿಗ್ ಸೇವಿಂಗ್ ಡೇ ಆಫರ್ ಬಂದಿದೆ

( HTC Wildfire E2 Plus release With 4 600mah Battery Launched here is the Price Specifications HTC Smartphone)

Comments are closed.