Vijaya Raghavendra : ಪತ್ನಿ ಸ್ಪಂದನಾಗೆ ಭಾವನಾತ್ಮಕ ಸಾಲುಗಳನ್ನು ಅರ್ಪಿಸಿದ ವಿಜಯ ರಾಘವೇಂದ್ರ

ಸ್ಯಾಂಡಲ್‌ವುಡ್‌ ಖ್ಯಾತನಟ ವಿಜಯ್‌ ರಾಘವೇಂದ್ರ (Vijaya Raghavendra) ಅವರ ಪತ್ನಿ ಸ್ಪಂದನಾ ಅವರು ಅಗಸ್ಟ್‌ 6 ರಂದು ವಿದೇಶಿ ಪ್ರಯಾಣದಲ್ಲಿ ಇದ್ದಾಗ ಹೃದಯಾಘಾತದಿಂದ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ನಟ ವಿಜಯ ಹಾಗೂ ಸ್ಪಂದನಾ ಅವರದ್ದು, ಅನ್ಯೋನ್ಯತೆಯಿಂದ ಕೂಡಿದ ಸಂಸಾರವಾಗಿತ್ತು. ಇದಕ್ಕೆ ವಿಧಿ ಕಣ್ಣು ಬಿದ್ದು ಸ್ಪಂದನಾ ಅವರನ್ನು ಬಹಳ ಬೇಗನೆ ತನ್ನ ಬಳಿಗೆ ಕರೆದುಕೊಂಡಿದೆ. ಪತ್ನಿ ಅಗಲಿಕೆಯ ನೋವಿನಲ್ಲಿ ಇರುವ ವಿಜಯ ರಾಘವೇಂದ್ರ ಅವರು ಮಗ ಶೌರ್ಯನನ್ನು ಸುಧಾರಿಸಲು ದುಃಖವನ್ನು ಮಡುಗಟ್ಟಿಸಿಕೊಂಡಿದ್ದರು. ಆದರೆ ಸದ್ಯ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪತ್ನಿ ಸ್ಪಂದನಾ ಅವರನ್ನು ನೆನೆದು ಭಾವನಾತ್ಮಕ ಸಾಲುಗಳನ್ನು ಬರೆದು ಹಂಚಿಕೊಂಡಿದ್ದಾರೆ.

ನಟ ವಿಜಯ ರಾಘವೇಂದ್ರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ,
“ಸ್ಪಂದನ
ಹೆಸರಿಗೆ ತಕ್ಕ ಜೀವ
ಉಸಿರಿಗೆ ತಕ್ಕ ಭಾವ
ಅಳತೆಗೆ ತಕ್ಕ ನುಡಿ
ಬುದುಕಿಗೆ ತಕ್ಕ ನಡೆ
ನಮಗೆಂದೇ ಮಿಡಿದೆ ನಿನ್ನ ಹೃದಯವ
ನಿಲ್ಲದು ನಿನ್ನೊಂದಿಗಿನ ಕಲರವ
ನಾನೆಂದೂ ನಿನ್ನವ
ಕೇವಲ ನಿನ್ನವ
ಚಿನ್ನ”

ಎಂದು ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರಿಗಾಗಿ ಬರೆದು ಹಂಚಿಕೊಂಡಿದ್ದಾರೆ. ಸ್ಪಂದನಾ ಬಾರದ ಲೋಕಕ್ಕೆ ಪಯಣಿಸಿ ಹನ್ನೆರಡು ದಿನಗಳೇ ಕಳೆದಿದೆ. ಥಾಯ್ಲಾಂಡ್‌ ಪ್ರವಾಸಕ್ಕೆ ತೆರಳಿದ್ದ ವೇಳೆಯಲ್ಲಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿ ವಿಜಯ್‌ ರಾಘವೇಂದ್ರ ಪತ್ನಿಯ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೆರೆತಂದಿದ್ದರು. ಥಾಯ್ಲೆಂಡ್‌ನಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸ್ಪಂದನಾ ಪಾರ್ಥವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ : Janhvi : ರಾಕ್ ಸ್ಟಾರ್ ರೂಪೇಶ್ ಶೆಟ್ಟಿಗೆ ಗಿಚ್ಚಿ ಗಿಲಿಗಿಲಿ ಜಾಹ್ನವಿ ಜೋಡಿ

ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮನೆಯಲ್ಲಿ ರಾತ್ರಿಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಬೆಳಗಿನಿಂದಲೇ ನಟ ಶಿವರಾಜ್‌ ಕುಮಾರ್‌, ಯಶ್‌, ರವಿಚಂದ್ರನ್‌ ಸೇರಿದಂತೆ ಸ್ಯಾಂಡಲ್‌ವುಡ್‌ ನಟ, ನಟಿಯರು, ಹಿರಿಯ ಕಲಾವಿದರು ಆಗಮಿಸಿ ಕಂಬನಿ ಮಿಡಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಪೊಲೀಸ್‌ ಅಧಿಕಾರಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ನಂತರ ಸಂಜೆಯ ಸ್ಪಂದನಾ ಪಾರ್ಥವ ಶರೀರವನ್ನು ಮೆರವಣಿಗೆಯ ಮೂಲಕ ಶ್ರೀರಾಂಪುರದ ಹರೀಶ್ಚಂದ್ರ ಘಾಟ್‌ ಕೊಂಡೊಯ್ದು ಈಡಿನ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರೀಯೆ ನಡೆಸಲಾಯಿತು. ಅಂತ್ಯಕ್ರೀಯೆಯಲ್ಲಿ ನಟ ವಿಜಯ್‌ ರಾಘವೇಂದ್ರ ತಂದೆ ಚಿನ್ನೆಗೌಡ, ತಮ್ಮ ನಟ ಮುರುಳಿ, ಸ್ಪಂದನಾ ತಂದೆ ಬಿ.ಕೆ.ಶಿವರಾಂ, ನಟ ಶಿವರಾಜ್‌ ಕುಮಾರ್‌, ಪತ್ನಿ ಗೀತಾ ಶಿವರಾಜ್‌ ಕುಮಾರ್‌, ಸ್ಪಂದನಾ ತಮ್ಮ ರಕ್ಷಿತ್‌ ಶಿವರಾಂ, ಚಿಕ್ಕಪ್ಪ ಬಿ.ಕೆ. ಹರಿಪ್ರಸಾದ್‌, ಸ್ಪಂದನಾ ಹಾಗೂ ವಿಜಯ್‌ ರಾಘವೇಂದ್ರ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರವೇ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸ್ಪಂದನಾ ಹಾಗೂ ವಿಜಯ್‌ ರಾಘವೇಂದ್ರ ಅವರ ಮನೆಯಲ್ಲಿ ಶೋಕ ಮಡುಗಟ್ಟಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸ್ಪಂದನಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

Vijaya Raghavendra dedicated emotional lines to wife Spandana

Comments are closed.