Darshan – Vijayalakshmi : ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮತ್ತೊಮ್ಮೆ ಸಂಕಷ್ಟದಲ್ಲಿದ್ದಾರೆ. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಕೆರಿಯರ್ ಹಾಗೂ ಪ್ಯೂಚರ್ ಎರಡರ ಮೇಲೆ ಕಳಂಕದ ಭಾರ ಹೆಚ್ಚಲಾರಂಭಿಸಿದೆ. ಈ ಮಧ್ಯೆ ದರ್ಶನ್ ಈ ಪ್ರಕರಣ ವೈಯಕ್ತಿಕ ಬದುಕಿನ ಮೇಲೂ ಪ್ರಭಾವ ಬೀರೋ ಮುನ್ಸೂಚನೆ ಸಿಕ್ಕಿದ್ದು, ದರ್ಶನ್ ಪತ್ನಿ ಹಾಗೂ ಉದ್ಯಮಿ ವಿಜಯಲಕ್ಷ್ಮಿ (Vijayalakshmi Darshan) ಅಲಿಯಾಸ್ ವಿಜಿ ದರ್ಶನ್ , ಪತಿಗೆ ವಿಚ್ಚೇಧನ ಕೊಡೋ ಸಿದ್ಧತೆಯಲ್ಲಿದ್ದಾರೆ ಎನ್ನಲಾಗ್ತಿದೆ.

ಒಂದೆಡೆ ದರ್ಶನ್ ಮೇಲೆ ಮತ್ತೆ ಮತ್ತೆ ದಾಖಲಾಗ್ತಿರೋ ಕಾನೂನು ಉಲ್ಲಂಘನೆ, ಕೊಲೆ, ಕಿಡ್ನಾಪ್ ನಂತಹ ಪ್ರಕರಣಗಳು ಚಂದನವನದಲ್ಲಿ ದರ್ಶನ್ ಖ್ಯಾತಿ ಕುಗ್ಗಿಸುತ್ತಿದೆ. ಇನ್ನೊಂದೆಡೆ ತಮ್ಮ ಬಹುಕಾಲದ ಸ್ನೇಹಿತೆ ಪವಿತ್ರಾಗಾಗಿ ದರ್ಶನ್ ಇನ್ನೂ ಮಿಡಿಯುತ್ತಿರುವುದು ಕೂಡ ಅವರ ಪಾಲಿಗೆ ಕಂಕಟವಾಗಿ ಪರಿಗಣಿಸುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ನಟಿ ಪವಿತ್ರಾ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯಾ ವಾರ್ ನಡೆದಿತ್ತು.
ಈ ವೇಳೆ ನಟಿ ವಿಜಯಲಕ್ಷ್ಮಿ ಕೊಂಚ ಮೇಲುಗೈ ಸಾಧಿಸಿದ್ದರು. ಬೇರೆಯವರ ಪತಿಯ ಪೋಟೋ ಹಾಕಿಕೊಂಡರೇ ಕಾನೂನು ಸಮರ ಹೂಡುವುದಾಗಿ ಪವಿತ್ರಾಗೆ ಎಚ್ಚರಿಸಿದ್ದರು. ಇದಕ್ಕೆ ಪವಿತ್ರಾ ಕೂಡಾ ಅಷ್ಟೇ ಖಡಕ್ ಆಗಿ ಉತ್ತರಿಸಿದ್ದರು. ಈ ಸವತಿಯರ ವಾರ್ ದರ್ಶನ್ ಮರ್ಯಾದೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಾಜಿಗೆ ಹಾಕಿದ್ದು ಮಾತ್ರವಲ್ಲ ದರ್ಶನ್ ಪಾಲಿಗೆ ಮುಜುಗರಕ್ಕೂ ಕಾರಣವಾಗಿತ್ತು. ಇದಾದ ಬಳಿಕ ನಟ ದರ್ಶನ್ ಸ್ವತಃ ಪತ್ನಿಗೆ ನಟಿ ಪವಿತ್ರಾ ಸಹವಾಸ ಬಿಡೋದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ಮಗ ವಿನೀಶ್ ಭವಿಷ್ಯ ಹಾಗೂ ಕುಟುಂಬಕ್ಕಾಗಿ ಪತ್ನಿಯೊಂದಿಗೆ ದರ್ಶನ್ ಸದ್ ಗೃಹಸ್ಥನಂತೆ ಬದುಕುವ ನಿರ್ಧಾರವನ್ನು ಕೈಗೊಂಡಿದ್ದರಂತೆ. ಆದರೂ ದಚ್ಚುಗೆ ವಿವಾದ ತಪ್ಪಿರಲಿಲ್ಲ. ವೇದಿಕೆಯೊಂದರಲ್ಲಿ ದರ್ಶನ್ ಪತ್ನಿ ಹಾಗೂ ಪವಿತ್ರಾ ಬಗ್ಗೆ ಲಘುವಾಗಿ ಹೆಣ್ಣುಮಕ್ಕಳೇನು ಇವರು ಹೋದರೇ ಇನ್ನೊಬ್ಬರು ಬರುತ್ತಾರೆ ಎಂಬರ್ಥದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ : ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ
ಇದೆಲ್ಲದರ ಬಳಿಕ ಕೆಲ ತಿಂಗಳಿನಿಂದ ವಿಜಿ ಮತ್ತು ದರ್ಶನ್ ನಡುವೆ ಎಲ್ಲವೂ ಸರಿಹೋದಂತಿತ್ತು. ಇತ್ತೀಚಿಗೆ ಪತ್ನಿಯೊಂದಿಗೆ ವಿವಾಹ ವಾರ್ಷೀಕೋತ್ಸವ ಆಚರಿಸಿಕೊಂಡಿದ್ದ ನಟ ದರ್ಶನ್ ಆಕೆಗೆ ವಜ್ರದ ಉಂಗುರ ಗಿಫ್ಟ್ ನೀಡಿದ್ದರು. ಅಷ್ಟೇ ಅಲ್ಲ ಮಗನ ಬೇಸಿಗೆ ರಜದಲ್ಲಿ ನಟ ದರ್ಶನ್ ಪತ್ನಿಯ ಜೊತೆಗೆ ದುಬೈಗೆ ಹಾರಿದ್ದರು. ಪತಿಯೊಂದಿಗೆ ಹಾಲಿಡೇ ಎಂಜಾಯ್ ಮಾಡಿದ ದಚ್ಚು ಪತ್ನಿ ವಿಜಿ ಇನ್ ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪೋಟೋ ಶೇರ್ ಮಾಡಿ ತಮ್ಮ ಹ್ಯಾಪಿ ಫ್ಯಾಮಿಲಿ ಕ್ಯಾಪ್ಸನ್ ವೈರಲ್ ಮಾಡಿದ್ದರು.

ಆದರೆ ಇದೀಗ ನಟಿ ಪವಿತ್ರಾಗಾಗಿ ನಟ ದರ್ಶನ್ ವ್ಯಕ್ತಿಯೊರ್ವನನ್ನು ಕೊಲೆ ಮಾಡಲು ಸಹಕಾರ ನೀಡಿರುವುದು, ಘಟನಾ ಸ್ಥಳಕ್ಕೆ ನಟಿ ಪವಿತ್ರಾ ಗೌಡ ಜೊತೆಗೆ ಭೇಟಿ ನೀಡಿದ್ದು ಎಲ್ಲವೂ ಬಟಾಬಯಲಾಗಿದೆ. ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಂಡಾಮಂಡಲರಾಗಿದ್ದಾರೆ ಎನ್ನಲಾಗಿದೆ. ಮಂಗಳವಾರ ವಿಜಯಲಕ್ಷ್ಮಿ ಪೊಲೀಸ್ ಕಸ್ಟಡಿಯಲ್ಲಿದ್ದ ಪತಿಯೊಂದಿಗೆ ಪೋನ್ ನಲ್ಲಿ ಮಾತನಾಡಿದ್ದು ಮತ್ತೆ ಹಳೆ ಚಾಳಿ ಆರಂಭಿಸಿದ್ದೀರಾ ಎಂದುಜಗಳವಾಡಿದ್ದಾರಂತೆ.
ಇದನ್ನೂ ಓದಿ : Actor Darshan Pavitra Gowda Case : ಅಭಿಮಾನಿ ರೇಣುಕಾಸ್ವಾಮಿಯನ್ನೇ ಹತ್ಯೆಗೈದ ನಟ ದರ್ಶನ್, ಪವಿತ್ರ ಗೌಡ ಪೊಲೀಸರ ವಶಕ್ಕೆ
ಈ ವೇಳೆ ನಟ ದರ್ಶನ್ ನಾನೇನು ಮಾಡಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನವನ್ನು ಮಾಡಿದ್ದಾರಂತೆ. ಆದರೆ ಇದಕ್ಕೆಲ್ಲ ಕ್ಯಾರೇ ಎನ್ನದ ವಿಜಯಲಕ್ಷ್ಮೀ ದರ್ಶನ್ ಬುದ್ಧಿ ಬದಲಾಗೋದಿಲ್ಲ. ಹೀಗಾಗಿ ಇನ್ನು ಇವರೊಂದಿಗೆ ಬದುಕೋದರಲ್ಲಿ ಅರ್ಥವೇ ಇಲ್ಲ ಎಂದು ಆಪ್ತರ ಬಳಿ ನೋವು ತೋಡಿಕೊಂಡಿದ್ದಾರಂತೆ.
ಇದಕ್ಕಾಗಿಯೇ ವಿಜಿ ಡಿವೋರ್ಸ್ ನೀಡಿ ದರ್ಶನ್ ಜೊತೆಗೆ ವೈವಾಹಿಕ ಬದುಕನ್ನು ಶಾಶ್ವತವಾಗಿ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ವಿಜಯಲಕ್ಷ್ಮಿ, ತಮ್ಮ ಇನ್ ಸ್ಟಾಗ್ರಾಂನಿಂದ ದರ್ಶನ್ ಜೊತೆಗಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದು ದರ್ಶನ್ ರನ್ನು ಅನ್ ಪಾಲೋ ಮಾಡಿದ್ದಾರೆ.
ಇದನ್ನೂ ಓದಿ : Darshan Arrest : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅರೆಸ್ಟ್
ಮೂಲಗಳ ಮಾಹಿತಿ ಪ್ರಕಾರ ನಟಿ ಪವಿತ್ರಾ ಜೊತೆಗೆ ಇನ್ನೂ ದರ್ಶನ್ ನಂಟು ಮುಂದುವರೆಸಿರೋದರಿಂದ ವಿಜಿದರ್ಶನ್ ವಿಚ್ಚೇಧನದ ನಿರ್ಧಾರಕ್ಕೆ ಬಂದಿದ್ದು ಸದ್ಯದಲ್ಲೇ ದರ್ಶನ್ ಗೆ ಡಿವೋರ್ಸ್ ನೊಟೀಸ್ ಕಳುಹಿಸಲಿದ್ದಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ನಟ ದರ್ಶನ್ ರೀಲ್ ಲೈಫ್ ನಲ್ಲಿ ಮಾದರಿಯಾಗಿ ರಿಯಲ್ ಲೈಫ್ ನಲ್ಲಿ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ವಿಲನ್ ಅಗ್ತಿರೋದು ಮಾತ್ರವೇ ವಿಪರ್ಯಾಸವೇ ಸರಿ.
Vijayalakshmi plan to divorce Darshan Thugudeepa with Pavitra Gowda