Darshan Arrest : ಸ್ಯಾಂಡಲ್‌ವುಡ್‌ ನಟ ದರ್ಶನ್‌ ತೂಗುದೀಪ ಅರೆಸ್ಟ್‌

Pavithra Gowda Darshan Case : ನಟ ದರ್ಶನ್‌ ತೂಗುದೀಪ  (Darshan Thoogudeepa) ಇದೀಗ ಮೊತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನಟ ದರ್ಶನ್‌ ತೂಗುದೀಪ ಅವರನ್ನು ಬಂಧಿಸಿದ್ದಾರೆ.

Pavithra Gowda Darshan Case : ನಟ ದರ್ಶನ್‌ ತೂಗುದೀಪ  (Darshan Thoogudeepa) ಇದೀಗ ಮೊತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನಟ ದರ್ಶನ್‌ ತೂಗುದೀಪ ಅವರನ್ನು ಬಂಧಿಸಿದ್ದಾರೆ. ಅಲ್ಲದೇ ದರ್ಶನ್‌ ಜೊತೆಗೆ 10 ಮಂದಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎನ್ನಲಾಗುತ್ತಿದೆ.

Darshan Thugudeepa ದರ್ಶನ್‌ ತೂಗುದೀಪ
Image Credit to Original Source

ನಟಿ ಪವಿತ್ರ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬವರು ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ವಿನಯ್‌ ಎಂಬವರ ಶೆಡ್‌ನಲ್ಲಿ ಇರಿಸಲಾಗಿತ್ತು. ನಂತರದಲ್ಲಿ ರೇಣುಕಾಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದಾಗ ದರ್ಶನ್‌ ಕೂಡ ಇದ್ದರೂ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : Chandan Shetty Niveditha Gowda Divorce: ಚಂದನ್‌ ಶೆಟ್ಟಿ ನಿವೇದಿತಾ ಗೌಡ ವಿಚ್ಚೇಧನ : ಈ ಕಾರಣಕ್ಕೆ ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ್ರಾ ?

ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ್ದು, ಮೋರಿಯಲ್ಲಿ ಎಸೆದು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗೆ ಇಳಿದ ಬೆಂಗಳೂರು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದರ್ಶನ್‌ ಅವರ ಸೂಚನೆಯ ಮೇರೆಗೆ ಈ ಕೃತ್ಯ ಎಸಗಿರುವುದಾಗಿ ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ದರ್ಶನ್‌ ಜೊತೆ ವಿಜಯಲಕ್ಷ್ಮೀ, ಮಗಳ ಜೊತೆ ಪವಿತ್ರಗೌಡ : ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾಮಿಲಿಯ ವಾರ್

ಅಷ್ಟಕ್ಕೂ ಆಗಿದ್ದೇನು ?
ನಟಿ ಪವಿತ್ರಗೌಡ ಹಾಗೂ ನಟ ದರ್ಶನ್‌ ತೂಗುದೀಪ ಅತ್ಯಾಪ್ತರಾಗಿದ್ದಾರೆ. ದರ್ಶನ್‌ ಅವರ ಜೊತೆಗೆ ಇರುವ ಪೋಟೋಗಳನ್ನು ಪವಿತ್ರಗೌಡ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಪವಿತ್ರಗೌಡಗೆ ಅಶ್ಲೀಲವಾಗಿ ಮೆಸೆಜ್‌ ಮಾಡಿದ್ದರು. ಇದೇ ಕಾರಣಕ್ಕೆ ರೇಣುಕಾಸ್ವಾಮಿ ಅವರ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ.

Darshan Thugudeepa ದರ್ಶನ್‌ ತೂಗುದೀಪ
Image Credit to Original Source

ಇದನ್ನೂ ಓದಿ : All The Best ಅಂದ್ರು ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ : ದರ್ಶನ್‌ ತೂಗುದೀಪ್‌ ನಟನೆಯ ಕಾಟೇರಾಗೆ ಸಿಕ್ತು ಸ್ಪೆಶಲ್ ವಿಶ್

ವಿಜಯನಗರ ಎಸಿಪಿ ಚಂದನ್‌ ನೇತೃತ್ವದ ತಂಡ ನಟ ದರ್ಶನ್‌ ತೂಗುದೀಪ ಅವರನ್ನು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದೆ. ಅಲ್ಲದೇ ದರ್ಶನ್‌ ಅವರ ಜೊತೆಗೆ ಹತ್ಯೆ ಸಹಕಾರ ನೀಡಿದ ಆರೋಪದ ಮೇರೆಗೆ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Sandalwood actor Darshan Thugudeepa arrested in Chitradurga Renukaswami Murder case 

Comments are closed.