Neetha Ashok Marrige : ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಖ್ಯಾತಿಯ ನಟಿ ನೀತಾ ಅಶೋಕ್ ತನ್ನ ಕಾಲೇಜು ಗೆಳೆಯನ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ತನ್ನ ಹುಟ್ಟೂರಾಗಿರುವ ಕೋಟದ ಸಮೀಪದಲ್ಲಿರುವ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ನಟಿಯ ವಿವಾಹ ಸರಳವಾಗಿ ನೆರವೇರಿದೆ.

ಉಡುಪಿ ಜಿಲ್ಲೆಯ ಕೋಟ ಮೂಲದ ನೀತಾ ಅಶೋಕ್ ಎಂಬಿಎ ಪದವೀಧರರು. ನಟಿ ನೀತಾ ಅಶೋಕ್ ಹಾಗೂ ಸತೀಶ್ ಇಬ್ಬರೂ ಕೂಡ ಕಾಲೇಜು ಸ್ನೇಹಿತರು. ಸತೀಶ್ ಬೀಚ್‌ನಲ್ಲಿ ಪ್ರೇಮ ನಿವೇದನೆ ಮಾಡಿದ್ದರು. ಯಶೋದೆ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ನೀತಾ ಅಶೋಕ್ ನಂತರದಲ್ಲಿ ನಾ ನಿನ್ನ ಬಿಡಲಾರೆ, ಆಶಿಯಾನ್, ನೀಲಾಂಬರಿ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಇನ್ನು ತುಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನೀತಾ ಆಶೋಕ್ ಜಬರ್ದಸ್ತ್ ಶಂಕರ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ನೀತಾಗೆ ಖ್ಯಾತಿ ತಂದುಕೊಟ್ಟಿತ್ತು. ಅಲ್ಲದೇ ಸ್ಯಾಂಡಲ್‌ವುಡ್‌ನ ಖ್ಯಾತ ಸಿನಿಮಾ ವಿಕ್ರಾಂತ್ ರೋಣಾ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕಿಚ್ಚ ಸುದೀಪ್ ಅವರೇ ನೀತಾ ಅವರಿಗೆ ಕರೆ ಮಾಡಿ ವಿಕ್ರಾಂತ್ ರೋಣಾ ಸಿನಿಮಾದ ಆಫರ್ ನೀಡಿದ್ದರು. ಕಿಚ್ಚ ಸುದೀಪ್ ಅಭಿನಯದಲ್ಲಿ ನಿರೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬಂದ ವಿಕ್ರಾಂತ್ ರೋಣಾ ಸಿನಿಮಾದಲ್ಲಿ ಪನ್ನಾ ಪಾತ್ರದಲ್ಲಿ ನೀತಾ ಅಶೋಕ್ ನಟಿ ಮೆಚ್ಚುಗೆ ಪಡೆದಿದ್ದರು.

ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಸತೀಶ್ ಜೋಡಿ ತಮ್ಮ ನಿಶ್ಚಿತಾರ್ಥದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲ ಹಂಚಿಕೊಂಡಿದ್ದರು. ಸರಳ ವಾಗಿಯೇ ನಿಶ್ವಿತಾರ್ಥ ಮಾಡಿಕೊಂಡಿದ್ದ ನಟಿ ಇದೀಗ ತನ್ನ ಹುಟ್ಟೂರಲ್ಲೇ ಮದುವೆಯಾಗಿದ್ದಾರೆ. ನೀತಾ ಅಶೋಕ್‌ಗೆ ಸತೀಶ್ ಮೇಸ್ತಾ ಪ್ರಪೋಸ್ ಮಾಡಿದ ಪೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಕನ್ನಡ ಧಾರವಾಹಿ ಮಾತ್ರವಲ್ಲದೇ ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿ ನಟಿ ನೀತಾ ಅಶೋಕ್ ಸೈ ಎನಿಸಿಕೊಂಡಿದ್ದರು.
ಇದನ್ನೂ ಓದಿ : Aparoopa Movie : ಅಪರೂಪ ಸಿನಿಮಾದ ಟ್ರೇಲರ್ ರಿಲೀಸ್ : ಹೊಸಬರಿಗೆ ಡಾಲಿ ಧನಂಜಯ್ ಸಾಥ್
ಇದನ್ನೂ ಓದಿ : Ambuja Movie Teaser : ಬೆಚ್ಚಿ ಬೀಳಿಸೋ ಕಥೆ ಹೊತ್ತು ತಂದಿದೆ ಅಂಬುಜ : ಜುಲೈ 21ಕ್ಕೆ ಶುಭಾ-ರಜನಿ ಸಿನಿಮಾ ತೆರೆಗೆ