Atal Bihari Vajpayee : ದೇಶ ಕಂಡ ಮಹಾನ್ ರಾಜಕೀಯ ವ್ಯಕ್ತಿತ್ವ, ಅಜಾತ ಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತಂದಿಡಲು ಬಾಲಿವುಡ್ ನಿರ್ಮಾಪಕರಾದ ವಿನೋದ್ ಭಾನುಶಾಲಿ ಹಾಗೂ ಸಂದೀಪ್ ಸಿಂಗ್ ಒಟ್ಟಾಗಿದ್ದಾರೆ. ಈ ಸಿನಿಮಾಗೆ ‘ ಮೇ ರಹೂ ಯಾ ನಾ ರಹೂ ಯೇ ದೇಶ ರೆಹನಾ ಚಾಯಿಯೆ – ಅಟಲ್’ ಎಂದು ಶೀರ್ಷಿಕೆ ನೀಡಲಾಗಿದೆ. ಅಂದರೆ ನಾನು ಇರಲಿ ಬಿಡಲಿ ಈ ದೇಶ ಮಾತ್ರ ಇರಬೇಕು ಎಂದರ್ಥವಾಗಿದೆ.
ಖ್ಯಾತ ಲೇಖಕ ಉಲ್ಲೇಖ್ ಎನ್.ಪಿ ಬರೆದಿರುವ ದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಶಿಯನ್ ಅಂಡ್ ಪ್ಯಾರಡಾಕ್ಸ್ (The Untold Vajpayee: Politician and Paradox ) ಎಂಬ ಪುಸ್ತಕವನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.
ಅಟಲ್ ಸಿನಿಮಾ ಕುರಿತು ಮಾತನಾಡಿದ ನಿರ್ಮಾಪಕ ವಿನೋದ್, ನನ್ನ ಜೀವಮಾನದುದ್ದಕ್ಕೂ ನಾನು ಅಟಲ್ ಬಿಹಾರಿ ವಾಜಪೇಯಿಯವರ ದೊಡ್ಡ ಅಭಿಮಾನಿಯಾಗಿದ್ದೇನೆ. ಹುಟ್ಟು ನಾಯಕ, ರಾಜನೀತಿ ಶ್ರೇಷ್ಠ, ದೂರದೃಷ್ಟಿಯನ್ನು ಹೊಂದಿದ್ದ ವಾಜಪೇಯಿಯವರು ಎಲ್ಲರಿಗಿಂತ ಮೇಲಿದ್ದಾರೆ. ನಮ್ಮ ರಾಷ್ಟ್ರವನ್ನು ನಿರ್ಮಿಸಲು ಅಟಲ್ ನೀಡಿದ ಕೊಡುಗೆ ಅಪ್ರತಿಮವಾಗಿದೆ. ಭಾನುಶಾಲಿ ಸ್ಟುಡಿಯೋಸ್ ಕಡೆಯಿಂದ ಇಂತದ್ದೊಂದು ಮೇರು ವ್ಯಕ್ತಿತ್ವವುಳ್ಳ ವ್ಯಕ್ತಿಯ ಜೀವನ ಚರಿತ್ರೆಯಾಧಾರಿತ ಸಿನಿಮಾ ಹೊರಬರುತ್ತಿರುವುದು ನಿಜಕ್ಕೂ ಒಂದು ಗೌರವದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಸಿನಿಮಾ ನಿರ್ಮಾಪಕನಾಗಿ ಹೇಳಲು ಸಾಧ್ಯವಾಗದ ಕತೆಗಳನ್ನು ಸಿನಿಮಾ ರೂಪದಲ್ಲಿ ತೋರಿಸುವುದು ಒಂದು ಅತ್ಯುತ್ತಮ ಮಾರ್ಗ ಎಂದು ನಾನು ಭಾವಿಸುತ್ತೇನೆ. ಈ ಸಿನಿಮಾವು ವಾಜಪೇಯಿ ಅವರ ರಾಜಕೀಯ ಸಿದ್ಧಾಂತ ಮಾತ್ರವಲ್ಲದೇ ಮಾನವೀಯ ಹಾಗೂ ಕಾವ್ಯಾತ್ಮಕ ಅಂಶಗಳನ್ನು ಅನಾವರಣಗೊಳಿಸಲಿದೆ. ಪ್ರತಿಪಕ್ಷಗಳೂ ಪ್ರೀತಿಸುತ್ತಿದ್ದ ಅಪ್ರತಿಮ ನಾಯಕ ಎಂದರೆ ಅದು ಅಟಲ್ ಬಿಹಾರಿ ವಾಜಪೇಯಿ ಎಂದು ವಿನೋದ್ ಹೇಳಿದ್ದಾರೆ.
ಅಟಲ್ ಪಾತ್ರಕ್ಕೆ ನಾಯಕ ನಟನಿಗಾಗಿ ಹುಡುಕಾಟ ಆರಂಭವಾಗಿದೆ. ಶೀಘ್ರದಲ್ಲಿಯೇ ನಟ ಹಾಗೂ ನಿರ್ದೇಶಕರ ಘೋಷಣೆಯಾಗಲಿದೆ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಮುಂದಿನ ವರ್ಷ ಕ್ರಿಸ್ಮಸ್ ದಿನದಂದು ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ವಿನೋದ್ ಹೇಳಿದ್ದಾರೆ.
ಇದನ್ನು ಓದಿ : India Vs New Zealand : ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಟೂರ್: ಕಿವೀಸ್ ವಿರುದ್ಧ ಟಿ20, ಏಕದಿನ ಸರಣಿ ಆಡಲಿದೆ ಟೀಮ್ ಇಂಡಿಯಾ
ಇದನ್ನೂ ಓದಿ : No Place for Virat Kohli : ಸೆಹ್ವಾಗ್ ಟಿ20 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಯೇ ಇಲ್ಲ
Vinod Bhanushali and Sandeep Singh come together to make a biopic on late PM Atal Bihari Vajpayee