Flax Seed : ಅಗಾಧ ಪೋಷಕಾಂಶ ಹೊಂದಿರುವ ಅಗಸೆ ಬೀಜದಿಂದ ಏನೆಲ್ಲಾ ತಯಾರಿಸಬಹುದು ಗೊತ್ತಾ?

ಅತಿ ಹಚ್ಚಿನ ಫೈಬರ್‌, ಆಂಟಿಒಕ್ಸಿಡೆಂಟ್‌ ಮತ್ತು ಒಮೆಗಾ–3 ಫ್ಯಾಟ್‌ ಹೊಂದಿರುವ ಅಗಸೆ ಬೀಜ(Flax Seed) ಸಸ್ಯಾಧಾರಿತ (Plant based) ಆಹಾರವಾಗಿದೆ. ಇದನ್ನು ಕ್ರಿಯಾತ್ಮಕ ಆಹಾರ ಎಂದು ಕರೆಯಲಾಗುತ್ತದೆ. ಏಕೆಂದರೆ ಆರೋಗ್ಯ ಸುಧಾರಣೆಗೆ ಇದು ಉತ್ತಮ ಆಹಾರವಾಗಿದೆ. ಅಗಸೆ ಬೀಜವು ಜೀರ್ಣಕ್ರಿಯೆ ಮತ್ತು ಹೃದ್ರೋಗ, ಟೈಪ್‌–2 ಡಯಾಬಿಟಿಸ್‌ ಮತ್ತು ಕ್ಯಾನ್ಸರ್‌ನ ಸಂಭವ ಕಡಿಮೆ ಮಾಡುತ್ತದೆ. ಇದನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇವಿಸುವುದು ಉತ್ತಮ ಮಾರ್ಗವಾಗಿದೆ.

ಅಗಸೆ ಬೀಜವನ್ನು ಚಟ್ನಿ ಪುಡಿ, ಮಫಿನ್‌, ಸಲಾಡ್‌, ರೋಸ್ಟೆಡ್‌ ಸೀಡ್‌ ಗಳಾಗಿ ಸೇವಿಸಬಹುದು. ಅಗಸೆ ಬೀಜದ ಎಣ್ಣೆ ಸಹ ಆರೋಗ್ಯಕ್ಕೆ ಉತ್ತಮವಾದದ್ದು. ಒಮೆಗಾ–3 ಫ್ಯಾಟ್‌ ಹೊಂದಿರುವ ಅಗಸೆ ಬೀಜ ತೂಕ ಇಳಿಸಲು ಮತ್ತು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಬಹಳ ಉಪಯುಕ್ತವಾಗಿದೆ. ಇಷ್ಟೆಲ್ಲಾ ಪ್ರಯೋಜನ ಹೊಂದಿರುವ ಅಗಸೆ ಬೀಜವನ್ನು 2 ಬೆಸ್ಟ್‌ ರೀತಿಯಿಂದ ನಿಮ್ಮ ಡಯಟ್‌ ನಲ್ಲಿ ಸೇರಿಸಿಕೊಳ್ಳಬಹುದು. 2 ಬೆಸ್ಟ್‌ ರೆಸಿಪಿ ಯಾವುದು ಅಂದರೆ ರೋಸ್ಟೆಡ್‌ ಅಗಸೆ ಬೀಜ ಮತ್ತು ಅಗಸೆ ಬೀಜದ ಚಟ್ನಿ ಪುಡಿ.

ರೋಸ್ಟೆಡ್‌ ಅಗಸೆ ಬೀಜ :

ಮಳೆಗಾಲಕ್ಕೆ ಕುರುಕುಲು ತಿಂಡಿ ಬೇಕು ಎನಿಸುತ್ತದೆಯಲ್ಲವೇ? ದೇಹಕ್ಕೆ ಹಾನಿಯುಂಟು ಮಾಡುವ ತಿಂಡಿಯ ಬದಲಿಗೆ ಇದನ್ನು ಸೇವಿಸಿ. ತಯಾರಿಸುವುದು ಬಹಳ ಸುಲಭ ಹೇಗೆಂದರೆ–

ಮೊದಲಿಗೆ ಅಗಸೆ ಬೀಜವನ್ನು ಸ್ವಚ್ಛಗೊಳಿಸಿ.
ಒಂದು ಪಾನ್‌ ತೆಗೆದುಕೊಂಡು ಸ್ವಲ್ಪ ಬಿಸಿಯಾದ ಮೇಲೆ ಅಗಸೆ ಬೀಜಗಳನ್ನು ಹಾಕಿ.
ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
ಹುರಿದ ನಂತರ ಅದಕ್ಕೆ ರುಚಿಗೆ ತಕ್ಕಷ್ಟು ರಾಕ್‌ ಸಾಲ್ಟ್‌ ಸೇರಿಸಿ.
ಪೂರ್ತಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿ.

ಅಗಸೆ ಬೀಜದ ಚಟ್ನಿ ಪುಡಿ :
ಮತ್ತೊಂದು ಸುಲಭದ ಅಡುಗೆ ಎಂದರೆ ಅಗಸೆ ಬೀಜದ ಚಟ್ನಿ ಪುಡಿ. ಪ್ರತಿನಿತ್ಯ ಚಟ್ನಿ ಮಾಡುವುದು ತೊಂದರೆಯೂ ಇಲ್ಲ. ಒಮ್ಮೆ ಮಾಡಿಟ್ಟು ಕೊಂಡರೆ ದೋಸೆ, ಚಪಾತಿ, ರೊಟ್ಟಿಗೆ ರುಚಿಯಾಗಿರುತ್ತದೆ. ಚಟ್ನಿ ಪುಡಿ ತಯಾರಿಸುವ ವಿಧಾನ ಇಲ್ಲಿದೆ:

ಬೇಕಾಗುವ ಪದಾರ್ಥಗಳು :
ಅಗಸೆ ಬೀಜ 1 ಕಪ್‌
ಬೆಳ್ಳುಳ್ಳಿ 8 ರಿಂದ 10
ಉದ್ದಿನ ಬೇಳೆ ಮತ್ತು ಕಡಲೆ ಬೇಳೆ 1 ಟೀ ಸ್ಪೂನ್‌
ಕರಿಬೇವು ಸ್ವಲ್ಪ
ಮೆಣಸಿನ ಪುಡಿ 1 ಟೀ ಸ್ಪೂನ್‌
ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ :
ಒಂದು ಪ್ಯಾನ್‌ನಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದು ಕೊಳ್ಳಿ. ಬಿಸಿ ಆರಿದ ನಂತರ ಮಿಕ್ಸರ್‌ ಜಾರ್‌ಗೆ ಹಾಕಿ ಪುಡಿ ಮಾಡಿ.

ಚಟ್ನಿ ಪುಡಿಯನ್ನು ಮೊಸರು ಅಥವಾ ತುಪ್ಪದ ಜೊತೆ ಸೇವಿಸಿ.

ಇದನ್ನೂ ಓದಿ : Grow Best Herbs : ನಿಮ್ಮ ಕೈತೋಟದಲ್ಲಿ ಸುಲಭವಾಗಿ ಈ ಗಿಡಮೂಲಿಕೆಗಳನ್ನು ಬೆಳೆಯಬಹುದು! ಯಾವುದು ಆ ಗಿಡಮೂಲಿಕೆಗಳು ಗೊತ್ತಾ?

ಇದನ್ನೂ ಓದಿ : Potato Peels : ಆಶ್ಚರ್ಯವಾಗುತ್ತಿದೆಯಾ? ಆದರೂ ಹೌದು, ಆಲೂಗಡ್ಡೆ ಸಿಪ್ಪೆಯಿಂದಲೂ ರುಚಿಕರವಾದ ಸ್ನಾಕ್ಸ್‌ ಮಾಡಬಹುದು!

(Flax seed can be eaten as chutney or roasted seeds)

Comments are closed.