ಸೋಮವಾರ, ಏಪ್ರಿಲ್ 28, 2025
HomeCinemaAnil Kumble watched Kantara : ಕಾಂತಾರ ಸಿನಿಮಾ ವೀಕ್ಷಿಸಿ ಶಹಬ್ಬಾಸ್ ಅಂದ್ರು ಸ್ಪಿನ್ ಮಾಂತ್ರಿಕ...

Anil Kumble watched Kantara : ಕಾಂತಾರ ಸಿನಿಮಾ ವೀಕ್ಷಿಸಿ ಶಹಬ್ಬಾಸ್ ಅಂದ್ರು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ

- Advertisement -

ಬೆಂಗಳೂರು: (Anil Kumble watched Kantara) ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದ್ರೂ “ಕಾಂತಾರ”(Kantara) ಸಿನಿಮಾದ್ದೇ ಸದ್ದು, “ಕಾಂತಾರ”ದ್ದೇ ಹವಾ. ತುಳುನಾಡಿನ ಸಂಸ್ಕೃತಿ ಹಾಗೂ ದೈವಾರಾಧನೆಯನ್ನು ಪ್ರತಿಬಿಂಬಿಸುತ್ತಿರುವ ಅಪರೂಪದ ಚಿತ್ರ ಕಾಂತಾರ. ರಿಷಭ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿರುವ ಸಿನಿಮಾಗೆ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಣ್ಯಾತಿಗಣ್ಯರು ಸಿನಿಮಾ ವೀಕ್ಷಿಸಿ ಕಾಂತರಗೆ ಶಹಬ್ಬಾಸ್ ಹೇಳಿದ್ದಾರೆ. ಈಗ ಕರ್ನಾಟಕ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ (Anil Kumble)ಯವರ ಸರದಿ.

ಪತ್ನಿ ಜೊತೆ ಕಾಂತಾರ (Kantara) ಸಿನಿಮಾ ವೀಕ್ಷಿಸುವ ಅನಿಲ್ ಕುಂಬ್ಳೆ (Anil Kumble), “ಅದ್ಭುತ ಸಿನಿಮಾ” ಎಂದು ಟ್ವೀಟ್ ಮಾಡಿದ್ದಾರೆ. ಆತ್ಮೀಯ ಸ್ನೇಹಿತರೂ ಆಗಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಜೊತೆ ಅನಿಲ್ ಕುಂಬ್ಳೆ ಬೆಂಗಳೂರಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಅವರೊಂದಿಗೆ ಕಾಂತಾರ (Kantara)ಸಿನಿಮಾ ವೀಕ್ಷಿಸುತ್ತಿರುವ ಚಿತ್ರವನ್ನು ಟ್ವಿಟರ್’ನಲ್ಲಿ(Anil Kumble watched Kantara)ಪ್ರಕಟಿಸಿರುವ ವಿಜಯ್ ಪ್ರಕಾಶ್ “ಕಾಂತಾರವನ್ನು ಅನುಭವವನ್ನು ಎರಡನೇ ಬಾರಿ ಅನಿಲ್ ಕುಂಬ್ಳೆ (Anil Kumble)ಯವರ ಜೊತೆ ಅನುಭವಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಕಾಂತಾರ ಬಾಕ್ಸಾಫೀಸ್’ನಲ್ಲಿ ಅಕ್ಷರಶಃ ಧೂಳೆಬ್ಬಿಸುತ್ತಿದೆ. ಭಾರತೀಯ ಚಿತ್ರರಂಗದ ಹಲವರು ತಾರೆಗಳು ಈಗಾಗಲೇ ಕಾಂತಾರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಹುಬಲಿ ಖ್ಯಾತಿಯ ತೆಲುಗು ನಟ ಪ್ರಭಾಸ್, ಮತ್ತೊಬ್ಬ ತೆಲುಗು ನಟ ನಾನಿ, ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್, ಮೋಹಕ ತಾರೆ ರಮ್ಯಾ, ರಕ್ಷಿತ್ ಶೆಟ್ಟಿ.. ಹೀಗೆ ಹಲವರು ಕಾಂತಾರ ಮೋಡಿಗೆ ಕ್ಲೀನ್ ಬೌಲ್ಡಾಗಿದ್ದಾರೆ.

ಇದನ್ನೂ ಓದಿ : Crazy Star Ravichandran : ಮನೆ ಖಾಲಿ ಮಾಡಿದ ಹಿಂದಿನ ಸತ್ಯ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್‌

ಇದನ್ನೂ ಓದಿ : Nayanthara In trouble: ಸಿಹಿ ಸುದ್ದಿಕೊಟ್ಟ ನಯನತಾರಾ ದಂಪತಿಗೆ ‘ಬಾಡಿಗೆ’ ಸಂಕಷ್ಟ

ಇದನ್ನೂ ಓದಿ : Film Fare awards 2022 :‌ ಫಿಲ್ಮ್ ಫೇರ್ ನಲ್ಲಿ ಚಿರುಗೆ ಅವಾರ್ಡ್: ಪ್ರಶಸ್ತಿ ಸ್ವೀಕರಿಸಿದ ಮೇಘನಾ ಭಾವುಕ

15 ಕೋಟಿ ವೆಚ್ಚದಲ್ಲಿ ಹೊಂಬಾಳೆ ಫಿಲ್ಮ್ಸ್ (Hombale films) ಬ್ಯಾನರ್ ಆಡಿ ಮೂಡಿ ಬಂದಿರುವ ಕಾಂತಾರ ಈಗಾಗಲೇ 85 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿ ಮಾತ್ರ ಬಿಡುಗೊಂಡಿದ್ದ ರಿಷಭ್ ಶೆಟ್ಟಿ(Rishabh Shetty) ಸಿನಿಮಾ, ಅಮೋಘ ಯಶಸ್ಸಿನ ನಂತರ ಇದೀಗ ಬೇರೆ ಭಾಷೆಗಳಿಗೂ ಡಬ್ ಆಗುತ್ತಿದೆ. ಈಗಾಗ್ಲೇ ಸಿನಿಮಾದ ಹಿಂದಿ ಟ್ರೇಲರ್ ಬಿಡುಗಡೆಗೊಂಡಿದ್ದು, ಅಕ್ಟೋಬರ್ 15ರಂದು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ತಮಿಳು, ತೆಲುಗು, ಮಲಯಾಳಂನಲ್ಲೂ ಕಾಂತಾರ ಚಿತ್ರ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

RELATED ARTICLES

Most Popular