Namanne Yuvarani serial : ಕಲರ್ಸ್ ಕನ್ನಡ ಧಾರವಾಹಿಯಲ್ಲಿ ಸಂಜೆ 6:30ಕ್ಕೆ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರವಾಹಿ ಕೊನೆಯ ಹಂತದಲ್ಲಿದೆ. ಇನ್ನೇನು ಬಿಗ್ ಬಾಸ್ ಸೀಸನ್ 9 ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡದ ಸಾಕಷ್ಟು ಧಾರವಾಹಿಗಳು ಕೊನೆಯಾಗುತ್ತಿದೆ. ನಮ್ಮನೆ ಯುವರಾಣಿ, ಕನ್ಯಾಕುಮಾರಿ, ಮಂಗಳಗೌರಿ ಮದುವೆ ಹಾಗೂ ನನ್ನರಸಿ ರಾಧೆ ಧಾರವಾಹಿಗಳನ್ನು ಮುಗಿಸಲು ಕಲರ್ಸ್ ಕನ್ನಡ ಟೀಂ ನಿರ್ಧರಿಸಿದೆ ಎನ್ನಲಾಗಿದ್ದು ಈ ಧಾರವಾಹಿಗಳ ಕೊನೆಯ ಹಂತದ ಶೂಟಿಂಗ್ಗಳು ಭರದಿಂದ ಸಾಗಿದೆ.
ನಮ್ಮನೆ ಯುವರಾಣಿ ಎಂಬ ಧಾರವಾಹಿ ಹೆಸರು ಕೇಳಿದಾಕ್ಷಣ ಮೊದಲು ನೆನಪಾಗೋದೇ ಅನಿಕೇತ್ ಹಾಗೂ ಮೀರಾ ಜೋಡಿ. ಈ ಜೋಡಿ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಅಂದರೆ ಸೋಶಿಯಲ್ ಮೀಡಿಯಾದ ಅನೀರಾ ಎಂಬ ಫ್ಯಾನ್ಸ್ಗಳು ಹುಟ್ಟಿಕೊಂಡಿದ್ದಾರೆ. ಆದರೆ ಕಾರಣಾಂತರಗಳಿಂದ ಈ ಧಾರವಾಹಿಯಲ್ಲಿ ಕಳೆದ ಅನೇಕ ದಿನಗಳಿಂದ ಅನಿಕೇತ್ ಹಾಗೂ ಮೀರಾ ಪಾತ್ರಧಾರಿಗಳು ಕಾಣಿಸಿಕೊಳ್ತಿರಲಿಲ್ಲ. ಧಾರವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ಗಳನ್ನು ತರುವ ಮೂಲಕ ಅನಿಕೇತ್ ಹಾಗೂ ಮೀರಾನನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಹೇಳಲಾಗಿತ್ತು.
ನಮ್ಮನೆ ಯುವರಾಣಿ ಧಾರವಾಹಿಗೆ ಎಷ್ಟೇ ಟ್ವಿಸ್ಟ್ಗಳನ್ನು ತಂದರೂ ಸಹ ಜನರು ಮಾತ್ರ ನಮಗೆ ಅನಿಕೇತ್ ಮೀರಾ ವಾಪಸ್ ಬೇಕು ಎಂದು ಹೇಳ್ತಿದ್ದಾರೆ. ಸಾಕೇತ್ – ಅಹಲ್ಯಾ, ಗಂಗಾ – ಪ್ರಣಮ್ ಜೋಡಿಯನ್ನು ಮುಂದಿಟ್ಟು ಧಾರವಾಹಿಯನ್ನು ನಡೆಸಲಾಗುತ್ತಿದೆಯಾದರೂ ನಮ್ಮನೆ ಯುವರಾಣಿ ವೀಕ್ಷಕರ ಅನಿರಾ ಬೇಕೆಂಬ ಬೇಡಿಕೆ ಮಾತ್ರ ಕಡಿಮೆಯಾಗಲೇ ಇಲ್ಲ.
ಇದೀಗ ಧಾರವಾಹಿಯು ಕೊನೆಯ ಹಂತದಲ್ಲಿದ್ದು ಗಂಹಾ ಅಹಲ್ಯಾಳ ನಿಜ ಬಣ್ಣವನ್ನು ಬಯಲು ಮಾಡುವ ಪ್ರಯತ್ನದಲ್ಲಿದ್ದಾಳೆ. ಅಲ್ಲದೇ ಅನಿಕೇತ್ ಹಾಗೂ ಮೀರಾ ಮಗು ಕೂಡ ರಾಜ್ಗುರು ಕುಟುಂಬವನ್ನು ಸೇರಿಕೊಂಡಿದೆ. ಧಾರವಾಹಿ ಕ್ಲೈಮಾಕ್ಸ್ ಸೀನ್ನಲ್ಲಿ ಅನಿಕೇತ್ ಹಾಗೂ ಮೀರಾರನ್ನು ಕರೆತರುವ ನಿರ್ಧಾರಕ್ಕೆ ಧಾರವಾಹಿ ತಂಡ ಬಂದಿದ್ದು ಈ ಮೂಲಕ ಅನಿರಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುವ ತಯಾರಿಯಲ್ಲಿದೆ. ಮೀರಾ ಪಾತ್ರಧಾರಿ ಅಂಕಿತಾ ಅಮರ್ ಈಗಾಗಲೇ ಸೀರಿಯಲ್ ಸೆಟ್ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಅನಿಕೇತ್ ಪಾತ್ರಧಾರಿಯಾಗಿರುವ ದೀಪಕ್ ಮಾತ್ರ ಇನ್ನೂ ಧಾರವಾಹಿ ತಂಡಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : Auto that fell into the canal :ಕಾಲುವೆಗೆ ಪಲ್ಟಿಯಾಗಿ ಬಿದ್ದ ಆಟೋ: ಮೂವರ ಶವ ಪತ್ತೆ, ಮೂವರು ಮಿಸ್ಸಿಂಗ್, ನಾಲ್ವರ ರಕ್ಷಣೆ
Will Aniket-Meera come back to Namanne Yuvarani serial: Here are the big updates.