Hindi Divas celebration :ಹಿಂದಿ ದಿವಸ್​ ಆಚರಣೆಗೆ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್​ ವಿರೋಧ : ನಮ್ಮ ನೆಲದಲ್ಲಿ ಬಿಜೆಪಿ ಕುತಂತ್ರಕ್ಕೆ ನಡೆಯಲ್ಲವೆಂದು ಟಾಂಗ್​

ಬೆಂಗಳೂರು : Hindi Divas celebration : ರಾಜ್ಯದಲ್ಲಿಂದು ಹಿಂದಿ ದಿವಸ್​ ಆಚರಣೆಗೆ ವಿರೋಧ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಸದನದಲ್ಲಿ ಹಿಂದಿ ದಿವಸ್​ ಆಚರಣೆ ನಮಗೆ ಬೇಡ ಅಂತಾ ವಾದ ಮಾಡ್ತಿದ್ದಾರೆ. ಇತ್ತ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಹಿಂದಿ ದಿವಸ್​ ಆಚರಣೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಶೇರ್​ ಮಾಡಿದ್ದಾರೆ.


ನಾವು ಯಾವ ಭಾಷೆಯ ಕಲಿಕೆಯನ್ನು ವಿರೋಧಿಸುವುದಿಲ್ಲ. ಆದರೆ ಯಾವುದೇ ಭಾಷೆಯ ಹೇರಿಕೆಯನ್ನೂ ನಮ್ಮಿಂದ ಸಹಿಸಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರದ ಭಾರತೀಯ ಜನತಾ ಪಾರ್ಟಿ ಸರ್ಕಾರ ಹಿಂದಿ ದಿವಸ ಆಚರಿಸಿ, ಹಿಂದಿ ಭಾಷೆಯ ಹೆಸರಿನಲ್ಲಿ ಆರ್​ಎಸ್​ಎಸ್​ ಪ್ರಣೀತ ಹಿಂದುತ್ವವನ್ನು ಹೇರುವುದನ್ನು ನಾನು ಖಂಡಿಸುತ್ತೇನೆ. ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಎಂದು ನಾಡಗೀತೆಯ ಸಾಲುಗಳನ್ನು ಕೊನೆಯಲ್ಲಿ ಬರೆದಿದ್ದಾರೆ.

ಇತ್ತ ಹಿಂದಿ ದಿವಸ ಆಚರಣೆಗೆ ಪರಿಷತ್​ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್​ ಕೂಡ ಟ್ವೀಟ್​ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ. ನಾನು ಸದಾ ಭಾಷೆ ಕಲಿಯು ವಿದ್ಯಾರ್ಥಿ. ನಾನು ಆರು ಭಾಷೆಗಳನ್ನು ಮಾತನಾಡುತ್ತೇನೆ, ಹಲವು ಭಾಷೆಗಳನ್ನು ಅರ್ಥ ಮಾಡಿಕೊಳ್ತೇನೆ.ಹಿಂದಿ ಸೇರಿದಂತೆ ಎಲ್ಲಾ ಭಾಷೆಗಳ ಮೇಲೆ ನನಗೆ ಗೌರವವಿದೆ. ಹಾಗೆಯೇ ಹಿಂದೆ ಹೇರಿಕೆಯ ವಿರುದ್ಧ ನನ್ನ ಧಿಕ್ಕಾರವಿದೆ. ಭಾಷೆ ಹೇರಿಕೆಯ ಹಿಂದಿನ ಆರ್ ಎಸ್ಎಸ್ ಕುತಂತ್ರ, ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ನಡೆಯುವುದಿಲ್ಲ ಎಂದು ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.


ಇತ್ತ ಜೆಡಿಎಸ್​ ಕೂಡ ಹಿಂದಿ ದಿವಸ್​ ಆಚರಣೆಯನ್ನು ಖಂಡಿಸಿ ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆಯನ್ನು ನಡೆಸಿದೆ. ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಹಳದಿ, ಕೆಂಪು ಬಣ್ಣದ ಶಾಲನ್ನು ಹೊದ್ದು ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಸದನ ಪ್ರವೇಶಕ್ಕೆ ಯತ್ನಿಸಿದ ಜೆಡಿಎಸ್ ನಾಯಕರನ್ನು ಮಾರ್ಷಲ್​ಗಳು ತಡೆದಿದ್ದಾರೆ. ಕಪ್ಪು ಪಟ್ಟಿ ತೆರೆಯದೇ ಸದನದ ಒಳಗೆ ಪ್ರವೇಶವಿಲ್ಲ ಎಂದ ಬಳಿಕ ಜೆಡಿಎಸ್​ ಶಾಸಕರು ಕಪ್ಪು ಪಟ್ಟಿಯನ್ನು ತೆಗೆದಿಟ್ಟು ಸದನದ ಒಳಗೆ ಪ್ರವೇಶಿಸಿದರು.

ಇದನ್ನು ಓದಿ : Minister Shankar Patil Munenakoppa :ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸಹೋದರ ನಿಧನ: ಹುಬ್ಬಳ್ಳಿಯ ಕಿಮ್ಸ್ ಗೆ ದೇಹದಾನ

ಇದನ್ನೂ ಓದಿ : Auto that fell into the canal :ಕಾಲುವೆಗೆ ಪಲ್ಟಿಯಾಗಿ ಬಿದ್ದ ಆಟೋ: ಮೂವರ ಶವ ಪತ್ತೆ, ಮೂವರು ಮಿಸ್ಸಿಂಗ್, ನಾಲ್ವರ ರಕ್ಷಣೆ

Siddaramaiah, BK Hariprasad oppose Hindi Divas celebration

Comments are closed.