Sushmita Sen’s father answers : ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಾಗೂ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ನಡುವಿನ ಸಂಬಂಧ ಇದೀಗ ಗುಟ್ಟಾಗಿ ಉಳಿದಿಲ್ಲ. ವಿದೇಶಗಳಲ್ಲಿ ಸುಶ್ಮಿತಾ ಸೇನ್ ಜೊತೆ ಎಂಜಾಯ್ ಮಾಡಿದ ಫೋಟೋಗಳನ್ನು ಸ್ವತಃ ಲಲಿತ್ ಮೋದಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಸಧ್ಯ ಡೇಟಿಂಗ್ ಮಾಡ್ತಾ ಇದ್ದು ಶೀಘ್ರದಲ್ಲಿಯೇ ಮದುವೆ ಕೂಡ ಆಗಲಿದ್ದೇವೆ ಎಂದೂ ಹೇಳಿದ್ದಾರೆ. ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ನಡುವಿನ ಪ್ರೇಮ ಸಂಬಂಧ ವೈರಲ್ ಆದ ಬಳಿಕ ಈ ಬಗ್ಗೆ ಸುಶ್ಮಿತಾ ಸೇನ್ ತಂದೆ ಹಾಗೂ ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಶುಬೀರ್ ಸೇನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಶ್ಮಿತಾ ಹಾಗೂ ಲಲಿತ್ ಮೋದಿ ಡೇಟಿಂಗ್ ಮಾಡುತ್ತಿದ್ದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗಳ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇರಲಿಲ್ಲ. ನಾನು ಶುಕ್ರವಾರ ಮುಂಜಾನೆಯಷ್ಟೇ ನನ್ನ ಪುತ್ರಿಯ ಜೊತೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದೆ. ಆದರೆ ಇದರ ಬಗ್ಗೆ ಆಕೆ ನನ್ನ ಜೊತೆ ಏನನ್ನೂ ಹೇಳಿಕೊಂಡಿಲ್ಲ. ಮಾಧ್ಯಮಗಳಲ್ಲಿ ಲಲಿತ್ ಮೋದಿ ಮಾಡಿದ ಟ್ವೀಟ್ಗಳು ಪ್ರಸಾರವಾದ ಬಳಿಕವೇ ನನಗೆ ಈ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ನನಗೆ ಈ ಬೆಳವಣಿಗೆಯ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ. ಹೀಗಾಗಿ ನಾನು ಈ ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಶುಬೀರ್ ಸೇನ್ ಹೇಳಿದ್ದಾರೆ.
ಮಗಳ ಜೊತೆ ಫೋನ್ನಲ್ಲಿ ನಾವು ಮಾತನಾಡುತ್ತಿರುವಾಗ ಲಲಿತ್ ಮೋದಿ ಹೆಸರನ್ನೂ ಸುಶ್ಮಿತಾ ಪ್ರಸ್ತಾಪ ಮಾಡಲಿಲ್ಲ. ಒಂದು ವೇಳೆ ಇವೆಲ್ಲವೂ ಆಕೆಯ ಜೀವನದಲ್ಲಿ ಘಟಿಸಿದಲ್ಲಿ ನಿಜಕ್ಕೂ ಇದು ಆಕೆಯ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಎನಿಸಲಿದೆ. ಭವಿಷ್ಯದಲ್ಲಿ ಈ ಬಗ್ಗೆ ನಾನು ಖಂಡಿತವಾಗಿಯೂ ತಿಳಿದುಕೊಳ್ಳುತ್ತೇನೆ. ಆದರೆ ಈಗಂತೂ ನನಗೆ ಏನೂ ತಿಳಿದಿಲ್ಲ ಎಂದು ಶುಬೀರ್ ಸೇನ್ ಹೇಳಿದರು.
ಸುಮಾರು 18 ತಿಂಗಳ ಹಿಂದೆ ನಮ್ಮ ಕುಟುಂಬದ ಸಮಾರಂಭವೊಂದಕ್ಕೆ ಲಲಿತ್ ಮೋದಿ ಆಗಮಿಸಿದ್ದರು. ಆಗ ಕೂಡ ನಮ್ಮ ಪುತ್ರಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಟ್ವಿಟರ್ ಮೂಲಕವೇ ನಮಗೆ ಮಾಹಿತಿ ತಿಳಿದಿದೆ ಎಂದು ಹೇಳಿದರು. ಲಲಿತ್ ಮೋದಿ ನಿಮಗೆ ಅಳಿಯನಾಗಿ ಒಪ್ಪಿಗೆಯಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶುಬೀರ್ ಸೇನ್, ಲಲಿತ್ ಮೋದಿ ಹಾಗೂ ಸುಶ್ಮಿತಾ ನಡುವಿನ ಸಂಬಂಧದ ಬಗ್ಗೆ ತಿಳಿದುಕೊಂಡ ಬಳಿಕವಷ್ಟೇ ನಾನು ಈ ಪ್ರಶ್ನೆಗೆ ಉತ್ತರ ನೀಡಬಹುದು ಎಂದಿದ್ದಾರೆ.
ಇದನ್ನು ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ
ಇದನ್ನೂ ಓದಿ : Byndur murder case : ಮಲಯಾಳಂ ಸಿನಿಮಾ ಆಧರಿಸಿ ನಡೆದಿತ್ತು ಹತ್ಯೆಗೆ ಮಾಸ್ಟರ್ ಪ್ಲಾನ್
Will you accept Lalit Modi as a son-in-law Sushmita Sen’s father answers