World Snake Day : ವಿಶ್ವ ಹಾವು ದಿನ: ಭಾರತದಲ್ಲಿ ಹಾವುಗಳ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು

World Snake Day : ಪ್ರತಿ ವರ್ಷ ಜುಲೈ 16 ರಂದು ನಡೆಯುವ ವಿಶ್ವ ಹಾವು ದಿನವು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿರುವ 3,500 ಕ್ಕೂ ಹೆಚ್ಚು ಜಾತಿಯ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಹಾವುಗಳು ಸರೀಸೃಪ ಗುಂಪಿಗೆ ಸೇರುವ ಪ್ರಮುಖ ಜೀವಿಗಳಾಗಿದ್ದು , ಜೀವಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ನಿರ್ವಸುತ್ತವೆ. ಬಹುಶಃ ಜಗತ್ತಿನಲ್ಲಿ ಹಾವುಗಳ ಬಗ್ಗೆ ಇರುವಷ್ಟು ಮೂಢನಂಬಿಕೆ/ತಪ್ಪು ಅಭಿಪ್ರಾಯಗಳು ಬೇರೆ ಯಾವುದೇ ಪ್ರಾಣಿಗಳ ಮೇಲೂ ಇಲ್ಲ ಅನ್ಸುತ್ತೆ ! ಅವುಗಳಲ್ಲಿ ಪ್ರಮುಖವಾದವುಗಳೆಂದರೆ

  • ಹಾವು ಹಾಲು ಕುಡಿಯುತ್ತವೆ ಎನ್ನುವುದು
  • ನಾಗರಹಾವು 12 ವರ್ಷ ದ್ವೇಷ ಸಾಧಿಸುತ್ತವೆ
  • ತಲೆಯಲ್ಲಿ ವಜ್ರದ ನಾಗಮಣಿ ಹೊಂದಿವೆ
  • ಐದು ಹೆಡ, ಏಳು ಹೆಡೆ ಹೊಂದಿದ ಹಾವುಗಳಿವೆ
  • ಕೇರೆ ಹಾವಿನ ಬಾಲದಲ್ಲಿ ವಿಷವಿರುತ್ತವೆ
  • ಮಣ್ಣುಮುಕ್ಕ ಹಾವು ಎರಡು ತಲೆಹೊಂದಿರುತ್ತದೆ
  • ನಾಗರಹಾವು ಕೇರೆಹಾವಿನೊಂದಿಗೆ ಮಿಲನಹೊಂದುತ್ತದೆ
  • ಕೊಳಕು ಮಂಡಲ ಹಾವಿನ ಉಸಿರು ತೆಗಲಿದರೆ ಸಾಕು , ಉಸಿರು ತೆಗಲಿದ ಸ್ಥಳ ಕೊಳೆಯುತ್ತದೆ
  • ಕೇದಿಕೆ, ಸಂಪಿಗೆ ಹೂವಿನ ಪರಿಮಳಕ್ಕೆ ಹಾವುಗಳು ಬರುತ್ತವೆ
  • ಪುಂಗಿ ನಾದ ಕೇಳಿದೊಡನೆ ಹಾವುಗಳು , ಅದರಲ್ಲೂ ನಾಗರಹಾವುಗಳು ಎಲ್ಲಿದ್ದರೂ ಓಡೋಡಿ ಬರುತ್ತವೆ ಎಂಬಂತಹ ಪಟ್ಟಿ ಸಾಗುತ್ತಲೇ ಹೋಗುತ್ತದೆ.

ಅದರಲ್ಲೂ ಇತ್ತೀಚೆಗೆ ಜನ ‘ನಾಗಿನಿ’ ಸೇರಿ ಹಾವುಗಳ ಬಗ್ಗೆ ಕಣಿ ಹೇಳುವ ಸಾಲು ಸಾಲು ಧಾರವಾಹಿಗಳನ್ನು ನೋಡ್ಕೊಂಡು ಈ ತಪ್ಪು ಅಭಿಪ್ರಾಯಗಳನ್ನು ಮತ್ತಷ್ಟು ವೃದ್ಧಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಹಾವು ಕಡಿತದಿಂದ ಪ್ರತಿವರ್ಷ 50 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪುತ್ತಿದ್ದು, ಪ್ರಪಂಚದಲ್ಲಿಯೇ ಹಾವು ಕಡಿತದಿಂದ ಅತಿ ಹೆಚ್ಚು ಜನ ಸಾವನ್ನಪ್ಪುವ ದೇಶ ಭಾರತವಾಗಿದೆ.  ಭಾರತದಲ್ಲಿ ಹಾವು ಕಡಿತದಿಂದ ಸಾವನ್ನಪ್ಪುವ ಬಹುತೇಕ ಪ್ರಕರಣಗಳಿಗೆ ನಾಲ್ಕು ಹಾವುಗಳು ಮಾತ್ರ ಕಾರಣವಾಗಿದ್ದು , ಅವುಗಳನ್ನು Big 4 venous snakes of India ಎಂದು ವಿಭಾಗಿಸಲಾಗಿದೆ . ಅವುಗಳೆಂದರೆ ನಾಗರಹಾವು ಕಟ್ಟಾವು ಕೊಳಕು ಮಂಡಲ ಗರಗಸ ಮಂಡಲ ಹಾವುಗಳಾಗಿವೆ. ಈ ನಾಲ್ಕು ಹಾವುಗಳ ಬಗ್ಗೆ ನಾವು ಸ್ವಲ್ಪ ಎಚ್ಚರಿಕೆ ವಹಿಸಿದರೆ ಹಾವು ಕಡಿತದಿಂದಾಗುವ ಬಹಳಷ್ಟು ಸಾವುಗಳನ್ನು ತಡೆಯಬಹುದು.

ಇದನ್ನೂ ಓದಿ: World Emoji Day: ವಿಶ್ವ ಎಮೋಜಿ ದಿನದ ಶುಭಾಶಯಗಳು

ಇದನ್ನೂ ಓದಿ: BMW G310RR : ಭಾರತದಲ್ಲಿ ಬಿಡುಗಡೆಯಾದ BMW G 310 RR ಬೈಕ್‌! ಇದು KTM, ಕವಾಸಕಿ ನಿಂಜಾಗೆ ಪ್ರತಿಸ್ಪರ್ಧಿಯಾಗಲಿದೆಯೇ?

(World Snake Day: Some Misconceptions about Snakes in India)

Comments are closed.