ನಾವು ಇದೀಗ 2022ರ ಡಿಸೆಂಬರ್ ತಿಂಗಳಿನಲ್ಲಿದ್ದು ಇನ್ನೂ ಸ್ವಲ್ಪ ದಿನಗಳಲ್ಲಿ ಈ ವರ್ಷವನ್ನು ಮುಗಿಸಿ ಹೊಸ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸಲು ದಿನಗಣನೆ ಶುರುವಾಗಿದೆ. ನೂರಕ್ಕೆ ನೂರಷ್ಟು 2022 ಸಿನಿಮಾರಂಗಕ್ಕೆ ಈ ವರ್ಷ ಸಾಮಾನ್ಯ ವರ್ಷವಾಗಿರದೇ ಗೋಲ್ಡನ್ ಇಯರ್ ಆಗಿ (Worldwide Google Search Movie) ಗುರುತಿಸಿಕೊಂಡಿದೆ. ಯಾಕೆಂದರೆ ಕಳೆದೆರಡು ವರ್ಷಗಳಲ್ಲಿ ವಿಶ್ವದಾದ್ಯಂತ ಕರೋನಾ ಮಹಾಮಾರಿ ಎದುರಾಗಿದ್ದು ಹಲವು ತಿಂಗಳುಗಳ ಕಾಲ ಸಿನಿಮಂದಿರಗಳು ಮುಚ್ಚಿ ಅದೆಷ್ಟೋ ಸಿನಿಮಾಗಳು ಆ ಸಂದರ್ಭದಲ್ಲಿ ನಷ್ಟ ಕಂಡಿವೆ.
ಸಿನಿಮಂದಿರಗಳಲ್ಲಿ ತೆರೆ ಕಾಣಲು ಸಾಧ್ಯವಾಗದೇ ಹಲವು ಸಿನಿಮಾಗಳು ನೇರ ಓಟಿಟಿಯಲ್ಲಿ ಪ್ರದರ್ಶನ ಕಂಡಿದೆ. ಆದರೆ ಈ ವರ್ಷದ ಮೊದಲ ತಿಂಗಳಿನಿಂದ ಕೊನೆಯವರೆಗೂ ಯಾವುದೇ ಲಾಕ್‌ಡೌನ್ ಭೀತಿ ಇಲ್ಲದೇ ಸಿನಿಮಂದಿರಗಳು ಕಾರ್ಯ ನಿರ್ವಹಿಸಿವೆ. ಅನೇಕ ಸಿನಿಮಾಗಳು ಸಿನಿಮಂದಿರಗಳಲ್ಲಿ ತೆರೆಕಂಡು ಸಿನಿಪ್ರೇಕ್ಷಕರನ್ನು ಮತ್ತೆ ಸಿನಿಮಂದಿರಗಳಿಗೆ ಕರೆ ತರುವಲ್ಲಿ ಯಶಸ್ವಿಯಾಗಿವೆ. ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರ ಚೆನ್ನಾಗಿ ವ್ಯವಹಾರ ಖುದ್ದುರಿಸಿದ್ದು, ಹಾಗಾಗಿ ಈ ವರ್ಷವನ್ನು ಗೋಲ್ಡನ್ ವರ್ಷಎಂದು ಕರೆಯಬಹುದಾಗಿದೆ.
ಎಲ್ಲಾ ಸಿನಿಮಾರಂಗದಲ್ಲಿ ಈ ವರ್ಷ ಅನೇಕ ಸಿನಿಮಾಗಳು ಅಬ್ಬರಿಸಿವೆ. ತಮ್ಮ ಕಂಟೆಂಟ್‌ಗಳಿಂದಾಗಿ ಚರ್ಚೆಗೆ ಒಳಪಟ್ಟಿವೆ. ಹೀಗೆ ಸಾಕಷ್ಟು ಸದ್ದು ಮಾಡಿದ ಈ ವರ್ಷದ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಸಿನಿ ಪ್ರಿಯರು ಅಂತರ್ಜಾಲದಲ್ಲಿ ಹುಡುಕಾಡಿದ್ದಾರೆ. ಈ ರೀತಿ 2022ರಲ್ಲಿ ಅಭಿಮಾನಿಗಳು ವಿಶ್ವದಾದ್ಯಂತ ಅತಿಹೆಚ್ಚಾಗಿ ಹುಡುಕಲ್ಪಟ್ಟ ಹತ್ತು ಸಿನಿಮಾಗಳ ಪಟ್ಟಿಯನ್ನು ಗೂಗಲ್ ಬಿಡುಗಡೆಗೊಳಿಸಿದ್ದು ಈ ಪಟ್ಟಿಯಲ್ಲಿ ಕನ್ನಡದ ಒಂದು ಸಿನಿಮಾ ಸ್ಥಾನ ಗಿಟ್ಟಿಸಿಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.
ವಿಶ್ವದಾದ್ಯಂತ ಅತಿಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳ ವಿವರ:
- ಥಾರ್: ಲವ್ ಅಂಡ್ ಥಂಡರ್
- ಬ್ಲಾಕ್ ಆಡಂ
- ಟಾಪ್ ಗನ್: ಮ್ಯಾವೆರಿಕ್
- ದಿ ಬ್ಯಾಟ್‌ಮನ್
- ಎನ್‌ಕ್ಯಾಂಟೊ
- ಬ್ರಹ್ಮಾಸ್ತ್ರ
- ಜುರಾಸಿಕ್ ವರ್ಲ್ಡ್ ಡೊಮಿನಿಯನ್
- ಕೆಜಿಎಫ್ ಚಾಪ್ಟರ್ 2
- ಅನ್‌ಚಾರ್ಟೆಡ್
- ಮೊರ್ಬಿಯಸ್
ಇದನ್ನೂ ಓದಿ : Aniruddha Jatkar : ಮತ್ತೆ ಕಿರುತೆರೆಗೆ ಕಾಲಿಟ್ಟ ಅನಿರುದ್ಧ : “ಸೂರ್ಯವಂಶ” ಧಾರಾವಾಹಿಗೆ ಹೀರೋ
ಇದನ್ನೂ ಓದಿ : Ambareesh-Sumalatha : 31ನೇ ಮದುವೆ ವಾರ್ಷಿಕೋತ್ಸವದಂದು ಅಂಬರೀಶ್ ನೆನೆದ ಸುಮಲತಾ
ವಿಶ್ವದಾದ್ಯಂತ ಅತಿಹೆಚ್ಚು ಸರ್ಚ್ ಆದ ಕನ್ನಡದ ಏಕೈಕ ಸಿನಿಮಾ ಕೆಜಿಎಫ್ ಚಾಪ್ಟರ್ 2 :
ವಿಶ್ವದಾದ್ಯಂತ 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಟಾಪ್ ಹತ್ತು ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕನ್ನಡದ ಏಕೈಕ ಸಿನಿಮಾ ಎಂಬ ಹೆಗ್ಗಳಿಕೆಗೆ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿರುವುದು ಹೆಮ್ಮೆಯ ವಿಷಯ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸ್ಥಾನ ಪಡೆದಿರುವುದು ಸಿನಿಮಾದ ಬಗ್ಗೆ ವಿಶ್ವ ಮಟ್ಟದಲ್ಲಿ ಇದ್ದ ಕ್ರೇಜ್ ಅನ್ನು ತೋರಿಸುತ್ತದೆ.
Worldwide Google Search Movie: Do you know which Kannada movie will create new history on Google in 2022?