Rivaba Jadeja: ಗೆಲುವಿನ ಹಾದಿಯಲ್ಲಿ ಜಡೇಜಾ ಪತ್ನಿ ರಿವಾಬಾ ಜಡೇಜಾ

ಗುಜರಾತ್: (Rivaba Jadeja) ಬಹು ನಿರೀಕ್ಷೆ ಹುಟ್ಟಿಸಿದ್ದ ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ಚುನಾವಣೆಯ ಮತ ಎಣಿಕೆಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ, ರಿವಾಬಾ ಜಡೇಜಾಗೆ ಪ್ರಬಲ ಪೈಪೋಟಿ ನೀಡಿದ್ದರು. ಜಾಮ್​ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ರಿವಾಬಾ ಜಡೇಜಾ ಗೆಲ್ಲುವ ಕುರಿತು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಇತ್ತೀಚಿನ ಅಪ್​ಡೇಟ್​ಗಳ ಪ್ರಕಾರ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ 23,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿ ಭರ್ಜರಿ ಗೆಲುವನ್ನು ಕಂಡಿದ್ದಾರೆ.

ಗುಜರಾತ್’ನ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಜಡೇಜಾ ಬದಲಿಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ (Rivaba Jadeja) ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು.ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಪ್ರಸ್ತುತ ಶೇ.57 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ರಿವಾಬಾ ಜಡೇಜಾ 14,905 ಮತಗಳೊಂದಿಗೆ ಅಗ್ರಸ್ಥಾನ ಗಳಿಸಿದ್ದು, ಎಎಪಿಯ ಕರ್ಶನ್‌ಭಾಯ್ ಕರ್ಮುರ್ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್‌ನ ಅಮರಸಿನ್ಹ್ ಅನಾದಾಜಿ ಠಾಕೋರ್ ನಂತರದ ಸ್ಥಾನದಲ್ಲಿದ್ದಾರೆ.

ಜಡೇಜಾ ಇದುವರೆಗೆ 14,905 ಮತಗಳನ್ನು ಪಡೆದಿದ್ದರೆ, ಎಎಪಿಯ ಕರ್ಶನ್‌ಭಾಯ್ ಕರ್ಮುರ್ 7,235 ಮತಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್‌ನ ಬಿಪೇಂದ್ರ ಸಿನ್ಹ 5,288 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೆಜಾ ಪತ್ನಿಯ ಸ್ಪರ್ಧೆಯಿಂದ ಹೆಚ್ಚು ಸದ್ದು ಮಾಡಿದ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ ರಿವಾಬಾ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ರವೀಂದ್ರ ಜಡೆಜಾ ಸಹೋದರಿ ಮತ್ತು ಮಾವ ಕಾಂಗ್ರೆಸ್ ಅಭ್ಯರ್ಥಿ ಬಿಪೇಂದ್ರಸಿನ್ಹ ಪರ ಪ್ರಚಾರ ನಡೆಸಿದರು. ಡಿಸೆಂಬರ್ 1ರಂದು ಮತದಾನ ನಡೆದ ಜಾಮ್‌ನಗರ ಉತ್ತರ ಕ್ಷೇತ್ರದಲ್ಲಿ 2.61 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಜಾಮ್‌ನಗರ ಪುರಸಭೆಯ 16 ವಾರ್ಡ್ ಪ್ರದೇಶದಲ್ಲಿ ವ್ಯಾಪಿಸಿದೆ.

ಇದನ್ನೂ ಓದಿ : Bhupendra Patel: ಎರಡನೇ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಭೂಪೇಂದ್ರ ಪಟೇಲ್

ಇದನ್ನೂ ಓದಿ : Himachalpradesh election result 2022: ಸೆರಾಜ್‌ ಕ್ಷೇತ್ರದಲ್ಲಿ ಗೆಲುವು ಕಂಡ ಕರ್ನಾಟಕದ ಅಳಿಯ

(Rivaba Jadeja) Rivaba Jadeja, the wife of famous cricketer Ravindra Jadeja, who had raised much expectations, has won the Gujarat elections by securing more than 50 percent votes.

Comments are closed.