ಕೆಜಿಎಫ್ ಹಾಗೂ ಕೆಜಿಎಫ್-2 ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಈಮಧ್ಯೆ ವಿಶ್ವದ ಸಿನಿ ಇತಿಹಾಸಕ್ಕೆ ಕೆಜಿಎಫ್-2 ದಂತಹ ಸಿನಿಮಾ ನೀಡಿದ ಹೊಂಬಾಳೆ ಫಿಲ್ಮ್ ಬ್ಯಾಕ್ ಟೂ ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಸಿದ್ಧತೆಯಲ್ಲಿದೆ. ಈ ಮಧ್ಯೆ ಇಂದು ( ಶುಕ್ರವಾರದಂದು) ಹೊಂಬಾಳೆ ಫಿಲ್ಂ ಇನ್ನೊಂದು ಫಿಲ್ಮ್ (Yash Bollywood Movie) ಘೋಷಿಸಲು ಸಿದ್ಧವಾಗಿದೆ.
ಈ ಬಗ್ಗೆ ಸ್ವತಃ ಹೊಂಬಾಳೆ ಫಿಲ್ಮ್ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. SWAG, PUNCH, SWING ಎಂದು ಟ್ವೀಟ್ ಮಾಡಿರೋ ಹೊಂಬಾಳೆ ಫಿಲ್ಮ್ಸ್ , Gloves off, Action on, The hunt Begins ಎಂದಿದ್ದು, ಯಾರಿಗಾಗಿ ಸಿನಿಮಾ ಎಂಬ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.
ಈ ಟ್ವೀಟ್ ನಲ್ಲಿ ಹೊಂಬಾಳೆ ಫಿಲ್ಸ್ಮ್ ಹೊಸ ಸಿನಿಮಾ ಘೋಷಿಸುವ ಮುನ್ಸೂಚನೆ ನೀಡಿದ್ಯಾ ಅಥವಾ ಈಗಾಗಲೇ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾದ ಬಗ್ಗೆ ಅಪ್ಡೇಟ್ ನೀಡುತ್ತಾ ಅನ್ನೋದು ಗೊತ್ತಾಗ್ತಿಲ್ಲ. ಮೂಲಗಳ ಮಾಹಿತಿ ಪ್ರಕಾರ ಹೊಂಬಾಳೆ ನಿರ್ಮಿಸುತ್ತಿರುವ ಬಿಗ್ ಬಜೆಟ್ ಸಿನಿಮಾ ಸಲಾರ್ ಸಿನಿಮಾದ ಬಗ್ಗೆ ಇಂದು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎನ್ನಲಾಗ್ತಿದೆ.
ಇದಕ್ಕೆ ಪೂರಕ ಎಂಬಂತೆ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಶೇಡ್‌ನಲ್ಲಿಯೇ ಇದೆ. ಹೀಗಾಗಿ ಸಲಾರ್ ಸಿನಿಮಾಕ್ಕೆ ಬಿಗ್ ಸ್ಟಾರ್ ಎಂಟ್ರಿ ಅಥವಾ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ವಿವರಣೆ ನೀಡೋ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದು ನಿಂತಿರೋ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎಂಬುದು ಘೋಷಣೆಯಾಗಿಲ್ಲ. ಹೀಗಾಗಿ ಯಶ್ ಗಾಗಿ ಬಾಲಿವುಡ್ ಸಿನಿಮಾವೊಂದನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದೆ ಎಂಬ ಮಾತು ಕೇಳಿಬಂದಿತ್ತು.
ಹೀಗಾಗಿ ನಾಳೆ ವಿಜಯ್ ಕಿರಂಗದೂರು ಮತ್ತು ತಂಡ ಯಶ್ ನಟನೆಯ ಬಾಲಿವುಡ್ ಸಿನಿಮಾ ಘೋಷಿಸಲಿದೆ ಎಂದು ನೀರಿಕ್ಷಿಸಲಾಗುತ್ತಿದೆ. ಒಟ್ಟಿನಲ್ಲಿ ಹೊಂಬಾಳೆ ಫಿಲ್ಸ್ಮ್ ನ ಸೋಷಿಯಲ್ ಮೀಡಿಯಾ ಪೋಸ್ಟ್ ಸಖತ್ ಕುತೂಹಲ ಮೂಡಿಸಿದ್ದು, ಇಂದು ಸಿನಿರಸಿಕೆ ಕುತೂಹಲಕ್ಕೆ ಉತ್ತರ ಸಿಗಲಿದೆ. ಈಗಾಗಲೇ ಹೊಂಬಾಳೆ ನಿರ್ಮಾಣದ ರಾಘವೇಂದ್ರ ಸ್ಟೋರ್ ಮತ್ತು ಕಾಂತಾರಾ ರಿಲೀಸ್ ಗೆ ಸಿದ್ಧವಾಗಿದೆ.
ಇದನ್ನೂ ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್
ಇದನ್ನೂ ಓದಿ : Pooja Hegde : ವಿಮಾನದಲ್ಲಿ ಪೂಜಾ ಹೆಗ್ಡೆಗೆ ಅವಮಾನ : ಕ್ಷಮೆ ಕೋರಿದ ಇಂಡಿಗೋ ಸಂಸ್ಥೆ
Yash Bollywood Movie Announce Hombale films Today