Sahasra lingeshwara Temple : ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರನ ವೈಭವದ ಬಗ್ಗೆ ಇಲ್ಲಿದೆ ಮಾಹಿತಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನವು (Sahasra lingeshwara Temple) ಪ್ರಾಚೀನ ತೀರ್ಥ ಕ್ಷೇತ್ರದಲ್ಲೊಂದಾಗಿದೆ. ನೇತ್ರಾವತಿ – ಕುಮಾರಧಾರ ನದಿಗಳ ಸಂಗಮ ತೀರದಲ್ಲಿ ನೆಲೆಗೊಂಡಿರುವ ಪರಮ ಸಾನಿಧ್ಯ ಇದಾಗಿದೆ. ಉತ್ತರದಲ್ಲಿ ಕಾಶಿ ವಿಶ್ವನಾಥ ಮಹಾಕಾಳಿ ವೀರಭದ್ರ ಸನ್ನಿಧಿಯಿದ್ದು, ಉತ್ತರ ಕಾಶಿಯೆಂದು ಪ್ರಸಿದ್ಧವಾದರೆ, ದಕ್ಷಿಣದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ಕಾಲಭೈರವನಿದ್ದು, ದಕ್ಷಿಣ ಕಾಶಿಯೆಂದು ಪ್ರಖ್ಯಾತವಾಗಿದೆ. ಈ ಕ್ಷೇತ್ರವನ್ನೂ ಗಯಾಪದ ಕ್ಷೇತ್ರವೆಂದೂ ಕರೆಯುತ್ತಾರೆ.

ಭಕ್ತಿ ಮುಕ್ತಿಗಳೆರಡನ್ನು ಕರುಣಿಸುವ ಈ ಸನ್ನಿಧಿ ಸದ್ಗತಿದಾಯಕವಾದ ಕ್ರಿಯೆಗಳ ಮೂಲಕ ಮೋಕ್ಷಧಾಮವೆನಿಸಿದೆ. ಈ ಕ್ಷೇತ್ರದಲ್ಲಿ ಶ್ರೀ ಮಹಾಕಾಳಿ ದೇವಿ ದೇವಸ್ಥಾನ ಹಾಗು ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ಕಲ್ಕುಡ ದೈವಸ್ಥಾನವಿದೆ. ಇನ್ನು ಈಗಲೂ ಸಹಸ್ರಲಿಂಗಗಳು ಇಲ್ಲಿ ಭೂ ತಳದಲ್ಲಿ ಇದೆಯೆಂದು ಪ್ರತೀತಿ. ಅದರಲ್ಲಿ ಒಂದು ಲಿಂಗ ನದಿಯ ಮರಳಿನ ಮಧ್ಯೆ ಇದ್ದು, ಫೆಬ್ರವರಿ ತಿಂಗಳಲ್ಲಿ ದರ್ಶನಕ್ಕೆ ದೊರಕುತ್ತದೆ. ಪವಿತ್ರ ತೀರ್ಥಕ್ಷೇತ್ರವಾದ ಈ ಸನ್ನಿಧಿಯಲ್ಲಿ ಭಕ್ತಿ ಮುಕ್ತಿಗಳೆರಡೂ ಪ್ರಾಪ್ತಿಯಾಗುತ್ತದೆ. ಅಪರ ಕರ್ಮಾಧಿಗಳಿಗೆ ಪ್ರಶಸ್ತ ತಾಣ ಇದಾಗಿದೆ.

ಕರಾವಳಿ ಕರ್ನಾಟಕ ಜನ ಬಂಗಾಳದ ದೇವತಾ ತಾಯಿಯಾದ ಕಾಳಿಯನ್ನು ಪೂಜಿಸುತ್ತಾರೆ. ನೇತ್ರಾವತಿ ನದಿಯ ದಂಡೆಯ ಮೇಲೆ ಮಹಾಕಾಳಿ ದೇವತೆಯ ಒಂದು ಪ್ರತ್ಯೇಕವಾದ ದೇವಸ್ಥಾನವಿದೆ. ಮಹಾಕಾಳಿಯು ತನ್ನ ಕೈಯಲ್ಲಿ ಕಪಾಲ, ತ್ರಿಶೂಲ, ಖಡ್ಗ, ಧಮರುಗ ಹಿಡಿದು ನಿಂತಿರುತ್ತಾಳೆ. ಆಧಿಶಕ್ತಿ ದೇವತೆಯು ರಕ್ತ ಬೀಜಾಸುರ ಅಸುರನನ್ನು ಸಂಹಾರ ಮಾಡಲು ಮಹಾಕಾಳಿಯ ಅವತಾರ ಧರಿಸಿದಳು. ನಾವು ಬಹುತೇಕ ದೇವಸ್ಥಾನಗಳಲ್ಲಿ ಶಿವ ಪಾರ್ವತಿ ಮತ್ತು ಕಾಳಿ ರುದ್ರ ದೇವರುಗಳ ಸಂಗಮವನ್ನು ನೋಡಬಹುದು. ಕಾಲ ಬೈರವನನ್ನು ಇಲ್ಲಿ ಮಾತ್ರ ನೋಡಬಹುದು. ಕುಂಕುಮಾರ್ಚನೆ ಮತ್ತು ತಂಬಿಲ ಸೇವೆ ಮಹಾಕಾಳಿ ದೇವತೆಯ ಅರ್ಚನೆಯ ಪ್ರಿಯ ಸೇವೆಗಳು. ಸಂಕ್ರಾಮಿಕ ರೋಗಗಳು ಆಕ್ರಮಿಸಿದಾಗ ಜನರು ಕಾಳಿ ದೇವತೆಯನ್ನು ಪೂಜಿಸುತ್ತಾರೆ. ಪ್ರತಿ ವರ್ಷ ದೇವತೆಗೆ ಮೆಚ್ಚಿ ನೇಮ ಎಂಬ ಎರಡನೇ ಪ್ರಕಾರದ ಪೂಜೆಯನ್ನು ಅರ್ಪಿಸುತ್ತಾರೆ.

ಇದನ್ನು ಓದಿ : Amruteshwari Temple : ಹಲವು ಮಕ್ಕಳ ತಾಯಿಯ ಮಹಿಮೆ ಅಪಾರ : ಬೇಡಿ ಬಂದವರಿಗೆ ನೀಡುತ್ತಾಳೆ ಸಂತಾನ ಭಾಗ್ಯ

ಇದನ್ನೂ ಓದಿ : Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

complete details about uppinangady sahasra lingeshwara temple

Comments are closed.