yash movie : ಕೆಜಿಎಫ್ 2 ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ರ ಹೆಸರು ವಿಶ್ವ ಮಟ್ಟದಲ್ಲಿ ರಾರಾಜಿಸಿದೆ. ಗಜಕೇಸರಿ, ಸಂತು ಸ್ಟ್ರೇಟ್ ಫಾರ್ವಡ್, ಕಿರಾತಕದಂತಹ ಸಿನಿಮಾಗಳಲ್ಲಿ ಯಶ್ ನಟಿಸಿದ್ದರು ಎಂಬುದೂ ನೆನಪಿಲ್ಲದ ಮಟ್ಟಿಗೆ ಕೆಜಿಎಫ್ ಎಂಬ ಒಂದೇ ಸಿನಿಮಾ ಯಶ್ರನ್ನು ದೊಡ್ಡ ಬ್ರ್ಯಾಂಡ್ನಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ಯಾಂಡಲ್ವುಡ್ ಸಿನಿಮಾದ ಇತಿಹಾಸದಲ್ಲಿಯೇ ಯಾವುದೇ ಸಿನಿಮಾಗಳು ಈವರೆಗೆ ಮಾಡಿರದಷ್ಟು ಕಲೆಕ್ಷನ್ನ್ನು ಕೆಜಿಎಫ್ 2 ಸಿನಿಮಾವೊಂದೇ ಮಾಡಿದೆ. ಈ ಮೂಲಕ ಚಂದನವನದ ಹೀರೋ ಎನಿಸಿಕೊಂಡಿದ್ದ ಯಶ್ ಇದೀಗ ವಿಶ್ವ ಮಟ್ಟದಲ್ಲಿ ಸೌಂಡ್ ಮಾಡಿದ್ದಾರೆ. ಈ ಎಲ್ಲದರ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಕಾದಿದೆ.
ಕೆಜಿಎಫ್ 2 ಸಿನಿಮಾ ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಕಡೆಗಳಲ್ಲೂ ಸದ್ದು ಮಾಡಿತ್ತು. ಅದರಲ್ಲೂ ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಮತ್ತೊಂದು ಖುಷಿ ವಿಚಾರ ಏನೆಂದರೆ ನಟ ಯಶ್ರ ಸಿನಿಮಾವೊಂದು ಇದೀಗ ಬೇರೆ ಭಾಷೆಯಲ್ಲಿ ರಿಮೇಕ್ ಆಗಲಿದ ಎಂಬ ಸುದ್ದಿ ಸಿಕ್ಕಿದೆ. ಹೌದು..! ಬರೋಬ್ಬರಿ 9 ವರ್ಷಗಳ ಹಿಂದೆ ತೆರೆ ಕಂಡಿದ್ದ ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ ಗೂಗ್ಲಿ ಇದೀಗ ಬಾಲಿವುಡ್ಗೆ ರಿಮೇಕ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಯಣ್ಣ ಕಂಬೈನ್ಸ್ ಬ್ಯಾನರ್ನಡಿಯಲ್ಲಿ ಮೂಡಿ ಬಂದಿದ್ದ ಪವನ್ ಒಡೆಯರ್ ನಿರ್ದೇಶನದ ಸಿನಿಮಾ ಗೂಗ್ಲಿ 2013ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಯಶ್ಗೆ ಜೋಡಿಯಾಗಿ ಕೃತ ಕರಬಂಧ ನಟಿಸಿದ್ದರು. ಈ ಸಿನಿಮಾಗೆ ಅನುಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದರು. ಗೂಗ್ಲಿ ಸಿನಿಮಾದ ಟೈಟಲ್ ಟ್ರ್ಯಾಕ್ ಅಂತೂ ಯೂತ್ಸ್ಗೆ ಸಿಕ್ಕಾಪಟ್ಟೆ ಫೇವರಿಟ್ ಎನಿಸಿತ್ತು.
ಇದೀಗ ಈ ಸಿನಿಮಾ ಹಿಂದಿ, ಗುಜರಾತು, ಪಂಜಾಬಿ ಹಾಗೂ ಮರಾಠಿ ಭಾಷೆಗಳಲ್ಲಿ ರಿಮೇಕ್ ಆಗಲಿದೆ. ಮಹೇಶ್ ದಾನಣ್ಣನವರ್ ಎಂಬವರು ಈ ಸಿನಿಮಾದ ರೀಮೇಕ್ ರೈಟ್ಸ್ ಪಡೆದುಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಯಶ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ತಾರೆ ಎಂಬುದು ಇನ್ನಷ್ಟೇ ರಿವೀಲ್ ಆಗಬೇಕಿದೆ.
ಇದನ್ನು ಓದಿ : I love Virat .. ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಯಾಕೆ ಹೀಗಂದ್ರು ?
ಇದನ್ನೂ ಓದಿ : same-sex marriage : ಸಲಿಂಗ ವಿವಾಹ ಬೆಂಬಲಿಸುವ ಮಸೂದೆಗೆ ಅಮೆರಿಕದಲ್ಲಿ ಅಂಗೀಕಾರ
yash movie going to remake in bollywood