ಸ್ಯಾಂಡಲ್‌ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ (Yash Radhika Pandit) ಸಖತ್ ಫೇಮಸ್. ಮದುವೆಯಿಂದ ಆರಂಭಿಸಿ ಬದುಕಿನ ಎಲ್ಲ ಖುಷಿಯನ್ನು ಫ್ಯಾನ್ಸ್ ಜೊತೆ ವಿಭಿನ್ನವಾಗಿ ಹಂಚಿಕೊಳ್ಳೋ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫನ್ನಿ ಪೋಸ್ಟ್ ಗಳನ್ನು ಹಾಕಿ ಎಂಜಾಯ್ ಮಾಡ್ತಾರೆ. ಸದ್ಯ ಐದನೇ ಆನ್ಯಿವರ್ಸರಿ ಖುಷಿಯಲ್ಲಿರೋ ರಾಧಿಕಾ ಈ ಖುಷಿ ಸಂದರ್ಭ ದಲ್ಲಿ ಮಾತ್ರ ಯಶ್ ಜೊತೆಗಿನ ಬೇಸರದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಇಷ್ಟಕ್ಕೂ ಅಂತಹ ಬೇಜಾರಾಗೋ ಕೆಲಸ ಯಶ್ ಏನು ಮಾಡಿದ್ರು ಅಂದ್ರಾ ಈ ಸ್ಟೋರಿ ಓದಿ.

ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದರೂ ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್. ಅವಕಾಶ ಸಿಕ್ಕಾಗಲೆಲ್ಲ ರಾಧಿಕಾ ಹಾಗೂ ಮಕ್ಕಳ ಜೊತೆ ಸಮಯ ಕಳೆಯೋಕೆ ತುದಿಗಾಲಲ್ಲಿ ನಿಂತಿರ್ತಾರೆ. ಇತ್ತೀಚಿಗಷ್ಟೇ ಯಶ್ ಮತ್ತು ರಾಧಿಕಾ ಮಕ್ಕಳ ಜೊತೆ ಮಾಲ್ಡೀವ್ಸ್ ಗೆ ಫ್ಯಾಮಿಲಿ ಟ್ರಿಪ್ ಹೋಗಿದ್ದರು. ಆದರೆ ಎಲ್ಲೇ ಟ್ರಿಪ್ ಹೋದರೂ ಸೆಲಿಬ್ರೆಟ್ ಮಾಡ್ತಿದ್ದರು ಯಶ್ ಗೆ ಪತ್ನಿ ಜೊತೆ ಸೆಲ್ಪಿಗೆ ಪೋಸ್ ಕೊಡೋಕೆ ಮಾತ್ರ ಬೇಸರವಂತೆ. ಈ ವಿಚಾರವನ್ನು ಸ್ವತಃ ಯಶ್ ಹಲವಾರು ಭಾರಿ ಸಾಬೀತು ಪಡಿಸಿದ್ದಾರೆ.

ರಾಧಿಕಾ ಜೊತೆ ರೆಸ್ಟೋರೆಂಟ್, ಟ್ರಿಪ್, ಡಿನ್ನರ್ ಎಲ್ಲೆ ಹೋದರು ಯಶ್ ರಾಧಿಕಾ ಸೆಲ್ಪಿ ಕ್ಲಿಕ್ ಮಾಡುವಾಗ ಏನಾದ್ರು ಒಂದು ತುಂಟಾಟ ಮಾಡ್ತಾರಂತೆ. ಆನ್ಯಿವರ್ಸರಿಯನ್ನು ಸ್ಪೆಶಲ್ ಆಗಿ ಸೆಲಿಬ್ರೆಟ್ ಮಾಡೋಕೆ ಈ ಜೋಡಿ ಗೋವಾ ಕ್ಕೆ ತೆರಳಿದ್ದು ಅಲ್ಲಿ ಸ್ಪೆಶಲ್ ಬೋಟ್ ಹೌಸ್ ವೊಂದನ್ನು ಬುಕ್ ಮಾಡಿದೆ. ಆ ಬೋಟ್ ಹೌಸ್ ನಲ್ಲಿ ಯಶ್ ರಾಧಿಕಾ ಆನ್ಯಿವರ್ಸರಿ ಸೆಲಿಬ್ರೆಟ್ ಮಾಡಿದ್ದಾರೆ.

ಈ ವೇಳೆ ರಾಧಿಕಾ ಯಶ್ ಜೊತೆ ವೈರೈಟಿ ವೈರೈಟಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಯಶ್ ರಾಧಿಕಾ ರನ್ನು ಸತಾಯಿಸಿದ್ದು ಮುಖವನ್ನು ಟವೆಲ್ ನಿಂದ ಮುಚ್ಚಿಕೊಂಡು ಸೆಲ್ಪಿಯಿಂದ ಬಚಾವಾಗುವ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲ ರಾಧಿಕಾ ತೆಗೆದ ಪ್ರತಿ ಸೆಲ್ಪಿಯಲ್ಲೂ ಒಂದಿಲ್ಲೊಂದು ತುಂಟಾಟ ಮಾಡಿದ್ದಾರೆ. ಈ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ರಾಧಿಕಾ ನೋಡಿ ಯಶ್ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳೋದು ಎಷ್ಟು ಕಷ್ಟ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.
ಪರಸ್ಪರ ಹಲವು ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ 2016 ಡಿಸೆಂಬರ್ 9 ರಂದು ಹೊಸಬದುಕಿಗೆ ಕಾಲಿರಿಸಿದ್ದು ಸದ್ಯ ಆಯ್ರಾ ಹಾಗೂ ಯಥರ್ವ್ ಇಬ್ಬರು ಮಕ್ಕಳ ಜೊತೆ ಫ್ಯಾಮಿಲಿ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದ್ರೇ ಯಶ್ ಕೆಜಿಎಫ್ 2 ಪ್ರಮೋಶನ್ ಗೆ ಸಿದ್ದತೆ ನಡೆಸಿದ್ದು ರಾಧಿಕಾ ಸದ್ಯ ನಟನೆಯಿಂದ ಬ್ರೇಕ್ ಪಡೆದಿದ್ದಾರೆ.
ಇದನ್ನೂ ಓದಿ : ಕೆಜಿಎಫ್-2 ಹಾಗೂ ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಮತ್ತೊಂದು ದಾಖಲೆ ಬರೆದ ಸಿನಿಮಾ…!!
ಇದನ್ನೂ ಓದಿ : Yash Radhika Pandit : ಯಶ್ ರಾಧಿಕಾಗೆ ಆನ್ಯಿವರ್ಸರಿ ಸಂಭ್ರಮ : ಪತಿ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಏನಂದ್ರು ಗೊತ್ತಾ
(Yash Radhika Pandit : Yash is not good at this matter : Radhika Pandit)