Durex : ಕತ್ರಿನಾ – ವಿಕ್ಕಿ ವಿವಾಹಕ್ಕೆ ಡ್ಯುರೆಕ್ಸ್​ ಕಾಂಡೋಮ್​ ಶುಭಕೋರಿದ ಪರಿ ಕಂಡು ಹೊಟ್ಟೆ ಹುಣ್ಣಾಗುವಷ್ಟು ನಕ್ಕ ನೆಟ್ಟಿಗರು..!

ಕಾಂಡೋಮ್​ ಬ್ರ್ಯಾಂಡ್​ ಡ್ಯುರೆಕ್ಸ್ (Durex celebrates )​ ಸೋಶಿಯಲ್​ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಫನ್ನಿ ಪೋಸ್ಟ್​ಗಳನ್ನು ಹಾಕುತ್ತಲೇ ಇರುತ್ತದೆ. ಆನ್​ಲೈನ್​ನಲ್ಲಿ ಡ್ಯುರೆಕ್ಸ್​ ಪ್ರಸಾರ ಮಾಡುವ ಕೆಲ ಜಾಹೀರಾತುಗಳಂತೂ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ . ಇದೀಗ ಬಾಲಿವುಡ್​ ನಟಿ ಕತ್ರಿನಾ ಕೈಫ್​ ಹಾಗೂ ನಟ ವಿಕ್ಕಿ ಕೌಶಲ್​ಗೆ (Katrina Kaif and Vicky Kaushal) ವಿವಾಹಕ್ಕೆ ಶುಭಾಶಯ ಕೋರುವ ನೆಪದಲ್ಲಿ ಡ್ಯುರೆಕ್ಸ್​ ಮತ್ತೊಂದು ಫನ್ನಿ ಪೋಸ್ಟ್​ನ್ನು ಹರಿಬಿಟ್ಟಿದೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಶೇರ್​ ಮಾಡಿರುವ ಡ್ಯುರೆಕ್ಸ್​ ಕಂಪನಿಯು, ಆತ್ಮೀಯರಾದ ವಿಕ್ಕಿ ಹಾಗೂ ಕತ್ರಿನಾ ಅವರೇ,, ನಮ್ಮನ್ನು ನೀವು ಆಹ್ವಾನಿಸಿಲ್ಲ ಅಂದರೆ ನೀವು ತಮಾಷೆಗೆ ಒಳಗಾಗಬೇಕಾಗಿ ಬರಬಹುದು ಎಂದು ಹೇಳಿದೆ (you’ve got to be kidding, if we are not invited). ಇಲ್ಲಿ ಕಿಡ್ಡಿಂಗ್​ ಎಂಬ ಪದವನ್ನು ಬೋಲ್ಡ್​ ಅಕ್ಷರಗಳಲ್ಲಿ ಬರೆಯಲಾಗಿದೆ.


ಈ ಪೋಸ್ಟ್ ಆನ್​ಲೈನ್​ನಲ್ಲಿ ಹರಿಬಿಡುತ್ತಿದ್ದಂತೆಯೇ ಹಾಟ್​ ಕೇಕ್​ನಂತೆ ಈ ಪೋಸ್ಟ್​ ಶೇರ್​ ಆಗಿದೆ. ಡ್ಯುರೆಕ್ಸ್​ ಕಂಪನಿಯ ಸೆನ್ಸ್​ ಆಫ್​ ಹ್ಯೂಮರ್​ ಕಂಡು ನೆಟ್ಟಿಗರಂತೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಬಾಲಿವುಡ್​ ನಟ ವಿಕ್ಕಿ ಕೌಶಲ್​ ಹಾಗೂ ನಟಿ ಕತ್ರಿನಾ ಕೈಫ್​ ರಾಜಸ್ಥಾನದ ಸವೈ ಮಧೋಪುರದಲ್ಲಿರುವ ಸಿಕ್ಸ್​ ಸೆನ್ಸಸ್​ ಭರ್ವಾರಾ ಕೋಟೆಯಲ್ಲಿ ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ . ಈ ವಿವಾಹ ಕಾರ್ಯಕ್ರಮಕ್ಕೆ 120 ಮಂದಿಗೆ ಆಹ್ವಾನ ನೀಡಲಾಗಿತ್ತು. ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೆಲ ನಿಯಮಗಳನ್ನೂ ವಿಧಿಸಲಾಗಿತ್ತು. ಯಾರೂ ಫೋಟೋ ಕ್ಲಿಕ್ಕಿಸದಂತೆ ನೋಡಿಕೊಳ್ಳಲು ಮೊಬೈಲ್​ ಫೋನ್​ಗಳನ್ನು ಬ್ಯಾನ್​ ಮಾಡಲಾಗಿತ್ತು. ಮದುವೆ ಕಾರ್ಯಕ್ರಮವನ್ನು ಖಾಸಗಿಯಾಗಿಡಲು ಈ ರೀತಿ ಮಾಡಲಾಗಿದೆ.

ಇದನ್ನು ಓದಿ : IMDb Top 10 Indian Films of 2021 : ಭಾರತದ ಟಾಪ್​ 10 ಸಿನಿಮಾ, ವೆಬ್​​ ಸಿರೀಸ್​​ ಪಟ್ಟಿ ರಿಲೀಸ್​ ಮಾಡಿದ IMDb

ಇದನ್ನೂ ಓದಿ: 83 movie Cheating Complaint : ರಿಲೀಸ್ ಗೂ ಮುನ್ನ83 ಗೇ ಸಂಕಷ್ಟ: ನಿರ್ಮಾಪಕರ ವಿರುದ್ಧ ವಂಚನೆ ಪ್ರಕರಣ ದಾಖಲು

Durex celebrates Katrina Kaif and Vicky Kaushal wedding with epic meme. No kidding!

Comments are closed.