- ಪ್ರಿಯಾಂಗಾ ಎಸ್. ಪಿಳ್ಳೈ
ಚೆನ್ನೈ : ಕಾರು ಅಪಘಾತಕ್ಕೊಳಗಾಗಿ ಪ್ರಜ್ಞೆ ಕಳೆದುಕೊಂಡಿದ್ದ ತಮಿಳು, ತೆಲುಗು ಚಿತ್ರರಂಗ ಖ್ಯಾತ ನಟಿ ಯಶಿಕಾ ಆನಂದ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ ಅವರನ್ನು ಇಂದು ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.

ನಟಿ ಯಶಿಕಾ ಆನಂದ ತನ್ನ ಸ್ನೇಹಿತರ ಜೊತೆಯಲ್ಲಿ ಮಹಾಬಲಿಪುರಂನಿಂದ ಚೆನ್ನೈಗೆ ತೆರಳುತ್ತಿದ್ದ ವೇಳೆಯಲ್ಲಿ ಕಾರು ಅಪಘಾತಕ್ಕೆ ಈಡಾಗಿತ್ತು. ಈ ವೇಳೆಯಲ್ಲಿ ಸ್ನೇಹಿತೆ ವಲ್ಲಿಚೆಲ್ಲಿ ಭವಾನಿ ಸಾವನ್ನಪ್ಪಿದ್ದರು. ಅಲ್ಲದೇ ಕಾರಿನಲ್ಲಿದ್ದ ಯಶಿಕಾ ಸೇರಿಂತೆ ಉಳಿದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ನಟಿ ಯಶಿಕಾ ಆನಂದ್ ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ಖ್ಯಾತ ನಟಿ ಯಶಿಕಾ ಆನಂದ ಕಾರು ಅಪಘಾತ : ಗೆಳತಿ ಸಾವು
ಇನ್ನು ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಮಹಾಬಲಿಪುರಂ ಠಾಣೆಯ ಪೊಲೀಶರು ತನಿಖೆಯನ್ನು ನಡೆಸುತ್ತಿದ್ದಾರೆ. ಅಪಘಾತದ ವೇಳೆಯಲ್ಲಿ ಯಶಿಕಾ ಕಾರು ಚಲಾಯಿಸುತ್ತಿದ್ದರು. ಅತೀ ವೇಗದಿಂದ ಕಾರು ಚಲಾಯಿಸಿದ್ದೇ ಘಟನೆಗೆ ಕಾರಣವೆನ್ನಲಾಗುತ್ತಿದೆ. ಅಲ್ಲದೇ ಕಾರಿನಲ್ಲಿ ಇನ್ನೂ ಇಬ್ಬರು ಪುರುಷರು ಇದ್ದರು ಎಂದು ವರದಿಯಾಗಿತ್ತು. ಆದರೆ ಅವರು ಯಾರೂ ಅನ್ನೋದು ಇನ್ನೂ ತಿಳಿದು ಬಂದಿಲ್ಲ.

ಅಪಘಾತಕ್ಕೆ ಸಂಬಂಧಿಸಿದಂತೆ ಯಶಿಕಾ ಆನಂದ್ ವಿರುದ್ದ ಪ್ರಕರಣ ದಾಖಲಾಗಿದೆ. ಅಲ್ಲದೇ ನಟಿ ಯಶಿಕಾ ಡ್ರೈವಿಂಗ್ ಲೈಸೆನ್ಸ್‌ನ್ನು ಸೀಝ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.