ಮಂಗಳವಾರ, ಏಪ್ರಿಲ್ 29, 2025
HomeCinemaNandi milk puneeth photo : ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಅಪ್ಪು ಪೋಟೋ: ಕೆಎಂಎಫ್...

Nandi milk puneeth photo : ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಅಪ್ಪು ಪೋಟೋ: ಕೆಎಂಎಫ್ ಅಧಿಕಾರಿಗಳು ಹೇಳಿದ್ದೇನು ಗೊತ್ತಾ?!

- Advertisement -

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಗತಿಗಳು ವೈರಲ್ ಆಗುತ್ತವೆ. ಅದರಲ್ಲೂ ಸೆಲೆಬ್ರೇಟಿಗಳ ವಿಷ್ಯ ಬಂದಾಗ ನೊರೆಂಟು ಸಂಗತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.ಆದರೆ ಇದರಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎಂಬುದನ್ನು ಪತ್ತೆ ಹಚ್ಚೋದೇ ಕಷ್ಟ. ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಲ್ಲೂ ಅಗಿರೋದು ಇದೆ. (Nandi milk puneeth photo) ಏನಿದು ವೈರಲ್ ಸುಳ್ಳು ಇಲ್ಲಿದೆ ಡಿಟೇಲ್ಸ್.

ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅಕಸ್ಮಿಕವಾಗಿ ಅಗಲಿ ಹೋಗುತ್ತಿದ್ದಂತೆ ರಾಜ್ಯದಾದ್ಯಂತ ಇರುವ ಲಕ್ಷಾಂತರ ಅಭಿಮಾನಿಗಳು ನೊರೆಂಟು ರೀತಿಯಲ್ಲಿ ಅಗಲಿದ ಅಪ್ಪುಗೆ ನಮನ ಸೂಚಿಸಿದರು. ರಸ್ತೆ,ಗ್ರಂಥಾಲಯ, ಉದ್ಯಾನವನ, ಮೆಲ್ಸೇತುವೆ,ಮರ,ಗಿಡ,ಮಕ್ಕಳಿಗೂ ಅಪ್ಪು ಹೆಸರು ಇಟ್ಟು ಗೌರವ ಸಲ್ಲಿಸಿದರು. ಈ‌ ಮಧ್ಯೆ ಕಳೆದ ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಪುನೀತ್ ಪೋಟೋ ಇರುವ ನಂದಿನಿ ಹಾಲಿನ ಪ್ಯಾಕ್ ಪೋಟೋ.‌ ರಾಜ್ಯದ ಪ್ರತಿಷ್ಟಿತ ಹಾಲು ಉತ್ಪಾದಕ ಹಾಗೂ ಮಾರಾಟ ಸಂಸ್ಥೆ ಕೆಎಮ್ ಎಫ್ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲು ಹಾಲಿನ ಪ್ಯಾಕ್ ಮೇಲೆ ಪುನೀತ್ ಪೋಟೋ ಹಾಕಲು‌ ನಿರ್ಧರಿಸಿದೆ ಎಂಬ ಸುದ್ದಿಗಳು ಹರಿದಾಡಿದವು.

ಅಷ್ಟೇ ಅಲ್ಲ ಪುನೀತ್ ಪೋಟೋವನ್ನು ಹಾಲಿನ ಪ್ಯಾಕೇಟ್ ಮೇಲೆ ಹಾಕಿದ್ದಾರೆ ಎಂಬ ಸಂಗತಿಯನ್ನು ಇಟ್ಟುಕೊಂಡು ಕೆಎಮ್ ಎಫ್ ಗೆ ಅಭಿನಂದನೆಗಳ ಸುರಿಮಳೆಯೂ ಹರಿದು ಬಂದಿತ್ತು. ಆದರೆ ಇದರ ಸತ್ಯ ಪರಿಶೀಲನೆ ಹೊರಟಾಗ ಇಲ್ಲೊಂದು ಸಂಗತಿ ಬಯಲಾಗಿದ್ದು, ಕೆಎಂಎಫ್ ಹಾಲಿನ ಪ್ಯಾಕ್ ಮೇಲೆ ಪುನೀತ್ ರಾಜ್ ಕುಮಾರ್ ಪೋಟೋ ಹಾಕಿಲ್ಲ ಹಾಗೂ ಪೋಟೋ ಹಾಕುವ ಯಾವುದೇ ಪ್ರಸ್ತಾಪವೂ ಇಲ್ಲ ಎಂಬ ಸಂಗತಿಯನ್ನು ಕೆಎಂಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಾಲಿನ ಪ್ಯಾಕೇಟ್ ಮೇಲಿನ ಪುನೀತ್ ರಾಜ್ ಕುಮಾರ್ ಪೋಟೋ ವಿಚಾರ ನಮಗೆ ಗೊತ್ತಿಲ್ಲ. ನಾವು ಅಧಿಕೃತವಾಗಿ ಅಂತಹ ಯಾವುದೇ ತೀರ್ಮಾನ, ಅದೇಶ ಹೊರಡಿಸಿಲ್ಲ ಎಂದಿದ್ದಾರೆ. ಅಲ್ಲದೇ ಪುನೀತ್ ಬಗ್ಗೆ ಮಾತನಾಡಿ ರುವ ಕೆಎಮ್ ಎಫ್ ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಸದಾ ನಮ್ಮನ್ನು ಬೆಂಬಲಿಸಿದ್ದರು. 11 ವರ್ಷಗಳ ಕಾಲ ಗೌರವಧನ ಪಡೆಯದೇ ಕೆಎಮ್ ಎಫ್ ರಾಯಭಾರಿಯಾಗಿ ಕೆಲಸ ಮಾಡಿದ್ದರು ಎಂದು ಗೌರವ ಪೂರ್ವಕವಾಗಿ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ :‌ ಅಪ್ಪು ಫ್ಯಾನ್ಸ್​ಗೆ ಗುಡ್​ನ್ಯೂಸ್​; ಪಿಆರ್​ಕೆ ಈ ವಾರ ಹೊತ್ತು ತರಲಿದೆ 3 ಸಿನಿಮಾ

ಇದನ್ನೂ ಓದಿ : ಮಿಸ್ ಕಾಲ್ ಕೊಡಿ, ನೇತ್ರದಾನಕ್ಕೆ ಹೆಸರು ನೋಂದಾಯಿಸಿ : ಪುನೀತ್ ಪುಣ್ಯತಿಥಿಯಂದು ವಿಭಿನ್ನ ಪ್ರಯತ್ನ

( Nandi milk puneeth photo : You know what KMF officials have said on the packet of Nandini’s milk Puneeth Raj kumar Photo )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular