Delhi model corona control : ಕರ್ನಾಟಕದಲ್ಲಿ ಕಂಟ್ರೋಲ್‌ ತಪ್ಪಿದ ಕರೋನಾ : ದೆಹಲಿ ಮಾದರಿ‌ ಕ್ರಮಕ್ಕೆ ತಜ್ಞರ ಶಿಫಾರಸ್ಸು

ಬೆಂಗಳೂರು : ರಾಜ್ಯಕ್ಕೆ ಕೊರೋನಾ ಮತ್ತು ಓಮೈಕ್ರಾನ್ ಆತಂಕ ಎದುರಾಗಿದ್ದು, ಜನವರಿ ಅಥವಾ ಫೆಬ್ರವರಿ ವೇಳೆಗೆ ರಾಜ್ಯದಲ್ಲಿ ಮೂರನೆ ಅಲೆಯ ಅಪ್ಪಳಿಸುವ ಆತಂಕ ಎದುರಾಗಿದೆ. ಈ‌ ಮಧ್ಯೆ ರಾಜ್ಯದಲ್ಲಿ ಧೀಡಿರ್ ಕೊರೋನಾ ಹಾಗೂ ಓಮೈಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದರಿಂದ ಸೋಂಕಿನ ಹರಡುವಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ದೆಹಲಿ ಮಾದರಿ (Delhi model corona control ) ಆ್ಯಕ್ಷನ್ ಪ್ಲಾನ್ ಗೆ ತಜ್ಞರ ಶಿಫಾರಸು ಮಾಡಿದ್ದಾರೆ.

ಜನವರಿ, ಫೆಬ್ರವರಿಯಲ್ಲಿ ಮೂರನೇ ಅಲೆ ಎಚ್ಚರಿಕೆ ನೀಡಿರುವ ತಜ್ಞರು, ಈಗಾಗಲೇ ದೆಹಲಿ, ಮುಂಬೈ, ಚೆನ್ನೈ ನಲ್ಲಿ ಸೋಂಕಿನ ತೀವ್ರತೆ ಹೆಚ್ಚಳವಾಗಿರುವುದನ್ನು ಉಲ್ಲೇಖಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ ದಿಢೀರ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ 140-200 ರಲ್ಲಿ ಪತ್ತೆಯಾಗ್ತಿದ್ದ ಕೇಸ್ ಗಳು ಈಗ 400 – 500ಕ್ಕೆ ಜಿಗಿತ ಕಂಡಿದೆ. ಹೀಗಾಗಿ ಓಮೈಕ್ರಾನ್ ಕುರಿತು ನಿರ್ಲಕ್ಷ್ಯ ಬೇಡ ಎಂದಿರುವ ತಜ್ಞರು ದೆಹಲಿ ಮಾದರಿಯ ಆಕ್ಷ್ಯನ್ ಪ್ಲ್ಯಾನ್ ಮಾಡುವಂತೆ ಸರ್ಕಾರಕ್ಕೆ ತಜ್ಞರು ಸೂಚನೆ ನೀಡಿದ್ದಾರೆ.

ಯಾವ ಯಾವ ಚಟುವಟಿಕೆಗಳಿಗೆ ನಿರ್ಬಂಧ ಯಾವಾಗ ಹೇರಬೇಕು ಎಂಬುದನ್ನ ನಿರ್ಧರಿಸಲು ಕಲರ್ ಕೋಡ್

ಕೋವಿಡ್ ಪಾಸಿಟಿವ್ ರೇಟ್ ಶೇ. 1ರಷ್ಟು ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್ ವಿಧಿಸಬೇಕು. ಪಾಸಿಟಿವಿಟಿ ದರ 1 ರಿಂದ 2ರಷ್ಟು ಇದ್ದರೆ ಆರೆಂಜ್ ಅಲರ್ಟ್ ಆದೇಶ ಹೊರಡಿಸಿ, ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದ್ದರೆ ರೆಡ್ ಅಲರ್ಟ್ ಅಲ್ಲದೇ ಈ ಕಲರ್‌ ಕೋಡ್‌ ಆಧಾರದ ಮೇಲೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ಹೇರಲು ಸೂಚನೆ ನೀಡಿದ್ದಾರಂತೆ.

ಈಗಾಗಲೇ ಸೋಂಕು ನಿಯಂತ್ರಣ ತಪ್ಪಿರೋದರಿಂದ ದೆಹಲಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗ್ತಿದೆ.ಇನ್ನು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ತಜ್ಞರ ಶಿಫಾರಸುಗಳು ಏನು ಅನ್ನೋದನ್ನು ಗಮನಿಸೋದಾದರೇ,

1. ಡೆಲ್ಟಾದಿಂದ ಎರಡನೇ ಅಲೆಯ ತೀವ್ರತೆಯನ್ನ ಜನರು ಎದುರಿಸಿ ಸೋತಿದ್ದಾರೆ. ಡೆಲ್ಟಾಗಿಂತ ಓಮೈಕ್ರಾನ್ ರೂಪಾಂತರಿ ಹರಡುವಿಕೆ ಹೆಚ್ಚುಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು

2. ಪ್ರತಿನಿತ್ಯ 75,000 ಆರ್ ಟಿಪಿಸಿಆರ್ ಹಾಗೂ RAT ಮೂಲಕ ಶೇ. 30 ರಷ್ಟು ಮಾಡಬೇಕು.

3. ಕ್ಲಸ್ಟರ್‌ಗಳಿಂದ ಶೇ. 30 ಎಲ್ಲಾ ಮಾದರಿಗಳನ್ನ ಕಡ್ಡಾಯವಾಗಿ ಜಿನೋಮ್‌ ಸೀಕ್ವೇನ್ಸಿಂಗ್ ಕಳುಹಿಸಬೇಕು.

4. ಎಲ್ಲಾ ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು ಮತ್ತು ಜನಸಂದಣಿ ಇರುವ ಇತರ ಸ್ಥಳಗಳಲ್ಲಿ ಕೋವಿಡ್ ನಿಯಮ ಪಾಲಿಸಬೇಕು.

5. ಇನ್ನು ಸರಿಯಾಗಿ ಎಸ್ ಒಪಿ ಜಾರಿಯಾಗಿದೆಯಾ ಎಂಬುದನ್ನ ಪರಿಶೀಲಿಸಲು ಮಾರ್ಷಲ್‌ಗಳ ಮತ್ತು ಪೊಲೀಸ್ ಸಹಾಯ ಪಡೆಯುವುದು. ಇದರ ಜೊತೆಗೆ ಓಮೈಕ್ರಾನ್ ಬಹುಬೇಗ ಆಕ್ರಮಣಕಾರಿಯಾಗಲಿದ್ದು, ಹೀಗಾಗಿ ಮೊದಲು ಆಸ್ಪತ್ರೆಗಳು ಸಜ್ಜಾಗಿ ಇರಲಿ ಎಂದು ತಜ್ಞರ ಸಲಹೆ ನೀಡಿದ್ದಾರೆ.

ಇನ್ನು ಆಸ್ಪತ್ರೆಗೆ ಬೇಕಾಗುವ ಸೌಲಭ್ಯಗಳು, ಔಷಧ ಹಾಗೂ ಉಪಕರಣಗಳ ಸರಬರಾಜು ಮತ್ತು ತರಬೇತಿ ಪಡೆದಿರುವ ಸಿಬ್ಬಂದಿಗಳ ನಿಯೋಜನೆಗೆ ಸೂಚನೆ ನೀಡುವಂತೆ ತಜ್ಞರ ಸಮಿತಿ ಹೇಳಿದೆ. ಸೌಮ್ಯ ರೋಗದ ಲಕ್ಷಣಗಳನ್ನ ಹೊಂದಿದ್ದರೆ ಅಷ್ಟೇ ರೋಗಿಗಳು ಹೋಂ ಐಸೋಲೇಷನ್ ಆಯ್ಕೆ ಮಾಡಬೇಕು. ಇದಕ್ಕೆ ವೈದ್ಯರು ಅನುಮತಿ ನೀಡುವ ಮೊದಲು ಎಲ್ಲಾ ರೀತಿಯ ಸೌಲಭ್ಯಗಳು ಇದೆಯಾ ಎಂಬುದನ್ನ ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.

ಒಬ್ಬರು ಆರೈಕೆ ಮಾಡುವವರು ರೋಗಿಯ ಜೊತೆಗಿದ್ದು , ಉಳಿದವರು ಟೆಲಿ ಮಾನಿಟರ್ ಮಾಡುತ್ತಲಿರಬೇಕು. ಓಮೈಕ್ರಾನ್ ಸೌಮ್ಯವಾಗಿದ್ದು, ಹೆಚ್ಚಿನವರಿಗೆ ಆಸ್ಪತ್ರೆಯ ಹಾಸಿಗೆಗಳ ಅಗತ್ಯವಿರುವುದಿಲ್ಲ. ಆದರೂ ಆಸ್ಪತ್ರೆಗಳು ಅಲರ್ಟ್ ಆಗಿರಬೇಕು. ಇತ್ತ ಹೋಂ ಐಸೋಲೇಷನ್ ಗೆ ಅನೇಕರು ಮನೆಯಲ್ಲಿ ಸೌಲಭ್ಯಗಳ ಕೊರತೆಯಿದ್ದಾಗ ಕೋವಿಡ್ ಕೇರ್ ಸೆಂಟರ್ ಹೋಗಲು ಬಯಸುತ್ತಾರೆ. ಹೀಗಾಗಿ, ಉತ್ತಮವಾಗಿರುವ CCC ಸಿದ್ಧಪಡಿಸುವಂತೆಯೂ ಶಿಫಾರಸ್ಸು ಮಾಡಲಾಗಿದೆ. ಇದರಿಂದ ಆಸ್ಪತ್ರೆಗಳ ದಟ್ಟಣೆ ನಿವಾರಿಸಲಿದೆ ಎಂಬುದು ತಜ್ಞರ ಆಶಯವಾಗಿದೆ.

ಇದನ್ನೂ ಓದಿ : ಕರ್ನಾಟಕಕ್ಕೆ ಲಾಕ್ ಡೌನ್ ಅನಿವಾರ್ಯ: ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ತಾಂತ್ರಿಕ ಸಮಿತಿ

ಇದನ್ನೂ ಓದಿ : ಕರ್ನಾಟಕದಲ್ಲಿ 1187 ಕೊರೊನಾ ಪ್ರಕರಣ : ಬೆಂಗಳೂರು, ದ.ಕ. ಉಡುಪಿಯಲ್ಲಿ ಕೊರೊನಾರ್ಭಟ

(Corona in Karnataka: Experts recommendation for Delhi model corona control)

Comments are closed.