ಮಂಗಳವಾರ, ಏಪ್ರಿಲ್ 29, 2025
HomeCinemaRaktadokuli:‘ರಕ್ತದೋಕುಳಿ’ ಟೀಸರ್ ಲಾಂಚ್ ಮಾಡಿದ ಯುವ ನಟ ಧೀರೇನ್ ರಾಮ್ ಕುಮಾರ್

Raktadokuli:‘ರಕ್ತದೋಕುಳಿ’ ಟೀಸರ್ ಲಾಂಚ್ ಮಾಡಿದ ಯುವ ನಟ ಧೀರೇನ್ ರಾಮ್ ಕುಮಾರ್

- Advertisement -

ಬೆಂಗಳೂರು:ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರಕ್ತದೋಕುಳಿ(Raktadokuli)ಸಿನಿಮಾ ಟೀಸರ್ ಇಂದು ರಿಲೀಸ್ ಆಗಿದೆ. ಯುವ ನಟ ಧಿರೇನ್ ರಾಮ್ ಕುಮಾರ್ ಚಿತ್ರದ ಟೀಸರ್ ಲಾಂಚ್ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಎನ್ ಎನ್ ಜಾಕಿ ಈಡಿಗರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರ(Raktadokuli)ರಕ್ತದೋಕುಳಿ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರೇ ಮಾಡಿರುತ್ತಾರೆ. ಚಿತ್ರರಂಗದಲ್ಲಿ ನಿರ್ದೇಶನ ಹಾಗೂ ತಾಂತ್ರಿಕ ವಿಭಾಗದಲ್ಲಿ ದುಡಿದ ಹತ್ತು ವರ್ಷಗಳ ಅನುಭವ ಇವರಿಗಿದ್ದು ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರಕ್ತದೋಕುಳಿ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಕೊನೆಯ ಹಂತದಲ್ಲಿ ಇರುತ್ತದೆ. ಇದೇ ಮೊದಲ ಬಾರಿಗೆ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮಾಧ್ಯಮದ ಮುಂದೆ ಹಾಜರಾಗಿದ್ದಾರೆ. ಚಿತ್ರದ ನಿರ್ಮಾಪಕ ಎಂ ನಾಗರಾಜು ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಕೂಡ ಬಿಡುಗಡೆ ಮಾಡಿದೆ.

ಬೆಂಗಳೂರಿನ ಸ್ಲಂ ಗಳಲ್ಲಿ ನಡೆಯುವ ಕಥೆ ಚಿತ್ರದಲ್ಲಿದ್ದು, ಸ್ಲಂ ಹುಡುಗರು ಹೇಗೆ ಅಲ್ಲಿನ ವಾತಾವರಣದಿಂದ ಪ್ರೇರಿತರಾಗಿ ಅಡ್ಡದಾರಿ ಹಿಡಿಯುತ್ತಾರೆ. ತಪ್ಪು ದಾರಿ ಹಿಡಿದ ಮೇಲೆ ಏನೆಲ್ಲ ಕ್ರೈಂ ಮಾಡುತ್ತಾರೆ ಅನ್ನುವುದರ ಸುತ್ತ ಕಥೆ ಹೆಣೆಯಲಾಗಿದೆ. ಈ ಚಿತ್ರದ ಮೂಲಕ ಕ್ರೈಂ ಮಾಡಬೇಡಿ ಅನ್ನೋದನ್ನು ಸೂಕ್ಷ್ಮವಾಗಿ ಹೇಳ ಹೊರಟಿದ್ದಾರೆ. ಐದು ಜನ ಹುಡುಗರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಕೂಡ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ ಎಂದು ಚಿತ್ರದ ನಿರ್ದೇಶಕ ಎನ್ ಎನ್ ಜಾಕಿ ಈಡಿಗರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಸೈಮಾ ಪಾರ್ಟಿ ವಿರುದ್ದ ದೂರು : ವೈರಲ್‌ ಆಯ್ತು ಸೆಲೆಬ್ರಿಟಿಗಳ ಮೋಜು ಮಸ್ತಿ

ಇದನ್ನೂ ಓದಿ : ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ಇದನ್ನೂ ಓದಿ : ಕೊನೆಗೂ ಮಗುವಿನ ಪೋಟೋವನ್ನು ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಹಾದಿಯಲ್ಲಿ ಸಿನಿಮಾ ಸಾಗಲಿದ್ದು, ಪ್ರತಿ ಹಂತದಲ್ಲೂ ಪ್ರೇಕ್ಷಕರಿಗೆ ಥ್ರಿಲ್ ನೀಡುವ ಕಟೆಂಟ್ ಸಿನಿಮಾದಲ್ಲಿದೆ ಎನ್ನುತ್ತಾರೆ ನಿರ್ದೇಶಕ ಜಾಕಿ ಈಡಿಗರ್. ಇಡೀ ಸಿನಿಮಾ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಎಂ ನಾಗರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ಮಾಪಕರು ಕೂಡ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದಾರೆ. ನಟ ಹಾಗೂ ನಿರ್ದೇಶಕ ನಾಗೇಂದ್ರ ಅರಸ್ ಚಿತ್ರದಲ್ಲಿ ನಟಿಸಿದ್ದು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಲೋಕಲ್ ಲೋಕಿ ಸಾಹಿತ್ಯ, ಅನಿಲ್ ಸಿ ಜೆ ಸಂಗೀತ ನಿರ್ದೇಶನ ಚಿತ್ರಕ್ಕೆ ಮಾಡಿದ್ದಾರೆ. ರಂಗಸ್ವಾಮಿ ಎಲ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ, ಗಂಗಮ್ ರಾಜು ನೃತ್ಯ ನಿರ್ದೇಶನ ನೀಡಿದ್ದಾರೆ, ಹಾಗೆ ಚಂದ್ರು ಬಂಡೆಯವರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಅನ್ನು ಹೇಳಿದ್ದಾರೆ.

Young actor Dheeren Ram Kumar launched the teaser of ‘Raktadokuli’

RELATED ARTICLES

Most Popular