Womens Asia Cup 2022 : ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ… ತಂಡದಲ್ಲಿ ಓರ್ವ ಕನ್ನಡತಿ

ಬೆಂಗಳೂರು: ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಪುರುಷರ ನಂತರ ಇದೀಗ ಮಹಿಳಾ ಕ್ರಿಕೆಟಿಗರ ಸರದಿ. ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಗೆ (Womens Asia Cup 2022) ಹರ್ಮನ್’ಪ್ರೀತ್ ಕೌರ್ (Harmanpreet Kaur) ಸಾರಥ್ಯದ 15 ಸದಸ್ಯೆಯ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಏಷ್ಯಾ ಕಪ್’ನಲ್ಲಿ ಆಡಲಿರುವ ಭಾರತ ಮಹಿಳಾ ತಂಡದಲ್ಲಿ ಕರ್ನಾಟಕದ ಅನುಭವಿ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad) ಸ್ಥಾನ ಪಡೆದಿದ್ದಾರೆ. 8ನೇ ಆವೃತ್ತಿಯ ಏಷ್ಯಾ ಕಪ್ ಟಿ20 ಟೂರ್ನಿ ಅಕ್ಟೋಬರ್ 1ರಿಂದ 16ರವರೆಗೆ ಬಾಂಗ್ಲಾದೇಶದಲ್ಲಿ ನಡೆಯಲಿದ್ದು; ಭಾರತ, ಆತಿಥೇಯ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯಾ ಹಾಗೂ ಯುಎಇ ತಂಡಗಳು ಭಾಗವಹಿಸಲಿವೆ.

ಅಕ್ಟೋಬರ್ 1ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಶ್ರೀಲಂಕಾವನ್ನು ಎದುರಿಸಲಿದೆ. ಬಹುನಿರೀಕ್ಷಿತ ಭಾರತ vs ಪಾಕಿಸ್ತಾನ ಪಂದ್ಯ ಅಕ್ಟೋಬರ್ 7ರಂದು ನಡೆಯಲಿದೆ.

ಮಹಿಳಾ ಏಷ್ಯಾ ಕಪ್ ಟಿ20 (Womens Asia Cup 2022) ಟೂರ್ನಿಯಲ್ಲಿ ಆಡಲಿರುವ ಭಾರತ ತಂಡ:

ಹರ್ಮನ್’ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗ್ಸ್, ದೀಪ್ತಿ ಶರ್ಮಾ, ಸಬ್ಬಿನೇನಿ ಮೇಘನಾ, ರಿಚಾ ಘೋಶ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ದಯಾಳನ್ ಹೇಮಲತಾ, ಮೇಘನಾ ಸಿಂಗ್, ರೇಣುಕಾ ಠಾಕೂರ್, ಪೂಜಾ ವಸ್ತ್ರಕಾರ್, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಕೆ.ಪಿ ನವ್ಗಿರೆ.

ಮೀಸಲು ಆಟಗಾರ್ತಿಯರು: ತಾನಿಯಾ ಸಪ್ನ ಭಾಟಿಯಾ, ಸಿಮ್ರಾನ್ ದಿಲ್ ಬಹದ್ದೂರ್.

ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಯ ವೇಳಾಪಟ್ಟಿ

ಅಕ್ಟೋಬರ್ 1: ಬಾಂಗ್ಲಾದೇಶ Vs ಥಾಯ್ಲೆಂಡ್ (9 AM)
ಭಾರತ Vs ಶ್ರೀಲಂಕಾ (1.30 PM)

ಅಕ್ಟೋಬರ್ 2: ಪಾಕಿಸ್ತಾನ Vs ಮಲೇಷ್ಯಾ (9 AM)
ಯುಎಇ Vs ಶ್ರೀಲಂಕಾ (1.30 PM)

ಅಕ್ಟೋಬರ್ 3: ಬಾಂಗ್ಲಾದೇಶ Vs ಪಾಕಿಸ್ತಾನ (9 AM)
ಭಾರತ Vs ಮಲೇಷ್ಯಾ (1.30 PM)

ಅಕ್ಟೋಬರ್ 4: ಶ್ರೀಲಂಕಾ Vs ಥಾಯ್ಲೆಂಡ್ (9 AM)
ಭಾರತ Vs ಯುಎಇ (1.30 PM)

ಅಕ್ಟೋಬರ್ 5: ಯುಎಇ Vs ಮಲೇಷ್ಯಾ (1.30 PM)

ಅಕ್ಟೋಬರ್ 6: ಪಾಕಿಸ್ತಾನ Vs ಥಾಯ್ಲೆಂಡ್ (9 AM)
ಬಾಂಗ್ಲಾದೇಶ Vs ಮಲೇಷ್ಯಾ (1.30 PM)

ಅಕ್ಟೋಬರ್ 7: ಯುಎಇ Vs ಥಾಯ್ಲೆಂಡ್ (9 AM)
ಭಾರತ Vs ಪಾಕಿಸ್ತಾನ (1.30 PM)

ಅಕ್ಟೋಬರ್ 8: ಶ್ರೀಲಂಕಾ Vs ಮಲೇಷ್ಯಾ (9 AM)
ಭಾರತ Vs ಬಾಂಗ್ಲಾದೇಶ (1.30 PM)

ಅಕ್ಟೋಬರ್ 9: ಮಲೇಷ್ಯಾ Vs ಥಾಯ್ಲೆಂಡ್ (9 AM)
ಪಾಕಿಸ್ತಾನ Vs ಯುಎಇ (1.30 PM)

ಅಕ್ಟೋಬರ್ 10: ಬಾಂಗ್ಲಾದೇಶ Vs ಶ್ರೀಲಂಕಾ (9 AM)
ಭಾರತ Vs ಥಾಯ್ಲೆಂಡ್ (1.30 PM)

ಅಕ್ಟೋಬರ್ 11: ಬಾಂಗ್ಲಾದೇಶ Vs ಯುಎಇ (9 AM)
ಪಾಕಿಸ್ತಾನ Vs ಶ್ರೀಲಂಕಾ (1.30 PM)

ಅಕ್ಟೋಬರ್ 13: ಸೆಮಿಫೈನಲ್-1
ಟೀಮ್ 1 Vs ಟೀಮ್ 4 (9 AM)
ಭಾರತ Vs ಶ್ರೀಲಂಕಾ

ಸೆಮಿಫೈನಲ್-2
ಟೀಮ್ 2 Vs ಟೀಮ್ 3 (1.30 PM)

ಅಕ್ಟೋಬರ್ 15: ಫೈನಲ್

ಇದನ್ನೂ ಓದಿ : India Vs Pak Jersey Fight : ಟಿ20 ವಿಶ್ವಕಪ್: “ಕಲ್ಲಂಗಡಿ Vs ಹಾರ್ಪಿಕ್” ; ಭಾರತ Vs ಪಾಕ್ ಜರ್ಸಿ ಜಟಾಪಟಿ ; ಏನಿದು ಹೊಸ ರಗಳೆ ?

ಇದನ್ನೂ ಓದಿ : Virat Kohli New Hair Style: ಹೊಸ ಹೇರ್ ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಮೊತ್ತ ₹80,000

Womens Asia Cup 2022 Team India announced for the Women’s

Comments are closed.