ಸ್ಯಾಂಡಲ್‌ವುಡ್‌ನ ನಗುಮುಖದ ಸರದಾರ ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವು ಇನ್ನು ಅಭಿಮಾನಿಗಳಲ್ಲಿ ಮಾಸಿಲ್ಲ. ಯಾಕೆಂದರೆ ಇನ್ನು ಮುಂದೆ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ನೋಡಲು ಸಾಧ್ಯವಿಲ್ಲ ಎನ್ನುವ ನೋವು ಸದಾ ಅವರನ್ನು ಕಾಡುತ್ತಿದೆ. ಹಾಗಾಗಿ ನಟ ಪುನೀತ್ ಅವರ ಸ್ಥಾನದಲ್ಲಿ ಜೂ. ಪವರ್‌ಸ್ಟಾರ್ ಆಗಿ ನಟ ಯುವರಾಜ್‌ಕುಮಾರ್‌ನ್ನು ನೋಡಲು ಬಯಸುತ್ತಿದ್ದು, ಅವರಿಗಾಗಿ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಬಳಿ ಅವರಿಗಾಗಿ ಸಿನಿಮಾ ಮಾಡಿ ಎಂದು ಸತತವಾಗಿ ಹೇಳುತ್ತಾ ಬಂದಿದ್ದಾರೆ. ಸಂತೋಷ್ ಆನಂದ್‌ರಾಮ್ ಯುವರಾಜ್‌ಕುಮಾರ್‌ಗಾಗಿ ಸಿನಿಮಾವನ್ನು ನಿರ್ದೇಶಿಸಿದ್ದು, ಸಿನಿಮಾ ಟೈಟಲ್ ಕೂಡ ರಿವೀಲ್ ಮಾಡಿದ್ದಾರೆ. ಇದೀಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರಾಜ್‌ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ “ಯುವ” ಚಿತ್ರೀಕರಣದ (Yuva shooting starts) ಬಗ್ಗೆ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವೀಟರ್‌ನಲ್ಲಿ,”ಯುವ ಚಿತ್ರೀಕರಣ ಆರಂಭ ಲೈಟ್ಸ್, ಕ್ಯಾಮರಾ, ಆಕ್ಷನ್, ಯುವ ರೆಡಿನಾ ” ಎನ್ನುವ ಶೀರ್ಷಿಕೆಯೊಂದಿಗೆ ಸಿನಿಮಾ ಶೂಟಿಂಗ್‌ನ್ನು ಪ್ರಾರಂಭಿಸಿದ್ದಾರೆ. ಅದರೊಂದಿಗೆ ಶೂಟಿಂಗ್ ಸ್ಥಳದ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಭಾರತ ಸಿನಿರಂಗದಲ್ಲೇ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಯುವರಾಜ್‌ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಳೆದ ಕೆಲವು ತಿಂಗಳ ಹಿದೆಯಷ್ಟೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯವರು ನಟ ಯುವರಾಜ್‌ಕುಮಾರ್ ಅಭಿನಯದ ಚೊಚ್ಚಲ ಸಿನಿಮಾದ ಟೈಟಲ್ ಅನ್ನು ವಿಶೇಷವಾಗಿ ಟೀಸರ್ ಮೂಲಕ ಘೋಷಿಸಿದ್ದಾರೆ. ಹೊಂಬಾಳೆ ಸಂಸ್ಥೆ ಅವರು ತಮ್ಮ ಟ್ವೀಟ್‌ನಲ್ಲಿ,”ಯುವ ಪರ್ವ ಆರಂಭ, 𝐓𝐇𝐄 𝐑𝐀𝐆𝐄 𝐁𝐄𝐆𝐈𝐍𝐒” ಎಂದು ಟೈಟಲ್ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.
ಯುವ ಚಿತ್ರೀಕರಣ ಆರಂಭ ♥️
— Santhosh Ananddram (@SanthoshAnand15) April 9, 2023
𝑳𝒊𝒈𝒉𝒕𝒔, 𝑪𝒂𝒎𝒆𝒓𝒂, 𝑨𝒄𝒕𝒊𝒐𝒏 🎬
𝒀𝒖𝒗𝒂 𝒈𝒆𝒕𝒕𝒊𝒏𝒈 𝒓𝒆𝒂𝒅𝒚 𝒇𝒐𝒓 𝒚𝒐𝒖!@yuva_rajkumar #VijayKiragandur @hombalefilms @HombaleGroup @ChaluveG @gowda_sapthami @AJANEESHB @DopShreesha #VishwasKashyap @yogigraj @YuvaTheFilm @Karthik1423 pic.twitter.com/v1cGbcCiAQ
ಇದನ್ನೂ ಓದಿ : “ಗುರುದೇವ್ ಹೊಯ್ಸಳ” ಸಿನಿಮಾಕ್ಕೆ ಅಭಿಮಾನಿಗಳ ಬೆಂಬಲ : ಸಂತಸ ವ್ಯಕ್ತಪಡಿಸಿದ ಕೆಆರ್‌ಜಿ ಸ್ಟುಡಿಯೋಸ್
ಇದನ್ನೂ ಓದಿ : ನಟ ರಿಷಬ್ ಶೆಟ್ಟಿ ಮಗ ರಣ್ವಿತ್ ಶೆಟ್ಟಿ ಹುಟ್ಟುಹಬ್ಬ ಸಂಭ್ರಮ : ವೈರಲ್ ಆಯ್ತು ವಿಡಿಯೋ
ಇನ್ನುಳಿದಂತೆ ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾಕ್ಕೆ ನಾಯಕಿ ಯಾರು ಎನ್ನುವ ಕುತೂಹಲ ಮೊದಲಿನಿಂದಲೂ ಇತ್ತು. ಮೊದಲಿಗೆ ಈ ಸಿನಿಮಾಕ್ಕೆ ಮಲಯಾಳಂನ ಚೆಲುವೆ ಕಲ್ಯಾಣಿ ಪ್ರಿಯದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಗುಸು ಗುಸು ಹರಡಿತ್ತು, ಇತ್ತೀಚೆಗಷ್ಟೆ ರುಕ್ಮಿಣಿ ವಸಂತ್ ಸಿನಿಮಾಕ್ಕೆ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿತ್ತು. ಆದರೆ ಈ ಎರಡೂ ಸಹ ಗಾಳಿಸುದ್ದಿಯಾಗಿದ್ದು, ಸಿನಿತಂಡ ತಳ್ಳಿ ಹಾಕಿದ್ದು,ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಅವರನ್ನು ಯುವನಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಿನಿತಂಡ ತಿಳಿಸಿದೆ.
Yuva shooting starts :Yuva shooting starts : Kylap is directed by Santhosh Anand Ram