ಸಾಲಿಗ್ರಾಮ : ಮಾಲೀಕನ ಎದುರಲ್ಲೇ ಸ್ಕೂಟರ್‌ ಕದ್ದ ಕಳ್ಳ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು : Video

ಕೋಟ : ಆತ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ಕೂಟರ್‌ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಮಾವನ ಜೊತೆಗೆ ಐಸ್‌ ಕ್ರೀಂ ಪಾರ್ಲರ್‌ಗೆ ತೆರಳಿದ್ದ. ಆರ್ಡರ್‌ ಮಾಡಿ ಕುರ್ಚಿಯಲ್ಲಿ ಕುಳಿತಿದ್ದಾಗಲೇ, ತನ್ನ ಕಣ್ಣೆದುರಲ್ಲೇ ಕಳ್ಳ ಬಂದು ಸ್ಕೂಟರ್‌ ಕದ್ದು‌ (Saligrama) ಪರಾರಿಯಾಗಿದ್ದಾನೆ. ಈ ಘಟನೆ ನಡೆದಿರೋದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ.

ಹೌದು, ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಲೀಕನ ಎದುರಲ್ಲೇ ಕಳ್ಳನೋರ್ವ ಸ್ಕೂಟರ್‌ ಎಗರಿಸಿರುವ ಘಟನೆ. ಇಲ್ಲಿನ ಐಸ್‌ಸ್ಪೈಸ್‌ ರೆಸ್ಟೋರೆಂಟ್‌ ಎದುರಲ್ಲೇ ಈ ಘಟನೆ ನಡೆದಿದ್ದು, ಕಳ್ಳನ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಟ ಸಮೀಪದ ಉಪ್ಲಾಡಿಯ ತೆಂಕಬೆಟ್ಟು ನಿವಾಸಿ ರವಿ ಎಂಬವರು ಮೀನು ವ್ಯಾಪಾರ ಮಾಡುತ್ತಿದ್ದರು. ಸಾಲಿಗ್ರಾಮಕ್ಕೆ ತನ್ನ ಸ್ಕೂಟರ್‌ನಲ್ಲಿ ಬಂದಿದ್ದ ರವಿ, ಸ್ಕೂಟರ್‌ ಅನ್ನು ರಸ್ತೆ ಪಕ್ಕದಲ್ಲಿ ಪಾರ್ಕ್‌ ಮಾಡಿ, ತನ್ನ ಮಾವನ ಜೊತೆಗೆ ಐಸ್‌ ಕ್ರೀಂ ಪಾರ್ಲರ್‌ಗೆ ಒಳಗೆ ತೆರಳಿದ್ದಾರೆ. ಇದನ್ನು ದೂರದಲ್ಲಿ ನಿಂತು ನೋಡಿತ್ತಿದ್ದ ಕಳ್ಳ ಮಾಲೀಕ ರವಿಯ ಕಣ್ಣೆದುರಲ್ಲೇ ಸ್ಕೂಟರ್‌ ಕದ್ದು ಎಸ್ಕೇಪ್‌ ಆಗಿದ್ದಾನೆ.

ಇದನ್ನೂ ಓದಿ : ಕೋಟ : ಕಾಂಗ್ರೆಸ್‌ ಸೇರಿದ ಸಮಾಜ ಸೇವಕ ನಾಗೇಂದ್ರ ಪುತ್ರನ್‌

ಇದನ್ನೂ ಓದಿ : ಬೈಂದೂರು : ಕೊಸಳ್ಳಿ ಫಾಲ್ಸ್‌ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ರಸ್ತೆ ಪಕ್ಕದಲ್ಲಿದ್ದ ಸ್ಕೂಟರ್‌ ಅನ್ನು ತಳ್ಳಿಕೊಂಡು ಸ್ವಲ್ಪ ದೂರ ಬಂದಿದ್ದಾನೆ. ನಂತರ ಸ್ಕೂಟರ್‌ ಸ್ಟಾರ್ಟ್‌ ಮಾಡಿಕೊಂಡು ಎಸ್ಕೇಪ್‌ ಆಗಿದ್ದಾನೆ. ರವಿ ಸ್ಕೂಟರ್‌ಗೆ ಪುಲ್‌ ಟ್ಯಾಂಕ್‌ ಪೆಟ್ರೋಲ್‌ ತುಂಬಿಸಿದ್ದಾರೆ. ಅಲ್ಲದೇ ಐದು ಲೀಟರ್‌ನ ಒಂದು ತೆಂಗಿನ ಎಣ್ಣೆಯ ಕ್ಯಾನ್‌ ಸ್ಕೂಟರ್‌ನಲ್ಲಿದ್ದು, ತೆಂಗಿನ ಎಣ್ಣೆಯನ್ನೂ ಕದ್ದು ಕಳ್ಳ ಎಸ್ಕೇಪ್‌ ಆಗಿದ್ದಾನೆ. ಈ ಕುರಿತು ಸ್ಕೂಟರ್‌ ಮಾಲೀಕ ರವಿ ಸದ್ಯ ಕೋಟ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ : ಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ ಎದುರಾಯ್ತು ಧಾರ್ಮಿಕ ಸಂಘರ್ಷ

ಬೈಂದೂರು : ಕೊಸಳ್ಳಿ ಫಾಲ್ಸ್‌ ನಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ

ಬೈಂದೂರು : (Byndur) ಫಾಲ್ಸ್‌ ನಲ್ಲಿ ಸ್ನಾನಕ್ಕಿಳಿದ ವೇಳೆ ಮುಳುಗಿ ವಿದ್ಯಾರ್ಥಿ ನಾಪತ್ತೆಯಾದ ಘಟನೆ ನಿನ್ನೆ ತಾಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಫಾಲ್ಸ್‌ ನಲ್ಲಿ ನಡೆದಿದ್ದು, ಇದೀಗ ವಿದ್ಯಾರ್ಥಿಯ ಮೃತದೇಹ ಇಂದು ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎ.ಎಸ್.‌ಐ ಕುಮಾರ್‌ ಶೆಟ್ಟಿ ಎನ್ನುವವರ ಪುತ್ರ ಚಿರಾಂತ್‌ ಶೆಟ್ಟಿ ( 20 ವರ್ಷ) ಮೃತ ವಿದ್ಯಾರ್ಥಿ.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಜೊತೆಗೆ ಏವಿಯೇಷನ್‌ ಕೋರ್ಸ್‌ ಓದುತ್ತಿದ್ದ ಚಿರಾಂತ್‌ ಶೆಟ್ಟಿ ಪಿಜಿಯಲ್ಲಿ ಉಳಿದುಕೊಂಡಿದ್ದನು. ಏ. ೭ ರಂದು ಗುಡ್‌ ಫ್ರೈಡೇ ಪ್ರಯುಕ್ತ ಕಾಲೇಜಿಗೆ ರಜೆ ಇದ್ದ ಕಾರಣ ಚಿರಾಂತ್‌ ತನ್ನ ಸ್ನೇಹಿತರಾದ ಬೈಂದೂರಿನ ಕೀರ್ತನ್‌ ದೇವಾಡಿಗ ಹಾಗೂ ಅಕ್ಷಯ್‌ ಆಚಾರ್‌ ಎನ್ನುವವರ ಮನೆಗೆ ತನ್ನ ಮೂವರು ಗೆಳೆಯರೊಂದಿಗೆ ಗುರುವಾರ ರಾತ್ರಿ ತೆರಳಿದ್ದರು.

ಮರುದಿನ ಅಂದರೆ ಶುಕ್ರವಾರ ಮಧ್ಯಾಹ್ನ ಕೀರ್ತನ್‌ ಎನ್ನುವ ಸ್ನೇಹಿತನ ಮನೆಯಲ್ಲೇ ಊಟ ಮುಗಿಸಿಕೊಂಡು ಕೊಸಳ್ಳಿ ಫಾಲ್ಸ್‌ ಗೆ ತೆರಳಿದ್ದರು. ಈ ವೇಳೆ ಈಜು ಬರುತ್ತಿದ್ದ ಚಿರಾಂತ್‌ ಶೆಟ್ಟಿ ನೀರಿಗಿಳಿದಿದ್ದು, ಮತ್ತುಳಿದವರು ಈಜು ಬರದ ಕಾರಣ ದಂಡೆಯಲ್ಲೇ ಕುಳಿತಿದ್ದರು. ನೀರಿಗಿಳಿದ ಚಿರಾಂತ್‌ ಶೆಟ್ಟಿ ನೀರಿನಲ್ಲಿ ಮುಳುಗಿದ್ದು, ನಂತರ ನಾಪತ್ತೆಯಾಗಿದ್ದನು. ಮಾಹಿತಿ ಮೇರೆಗೆ ಸ್ಥಳೀಯರು ಹಾಗೂ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಇಂದು ಚಿರಾಂತ್‌ ಮೃತದೇಹ ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saligrama : The thief who stole the scooter in front of the owner, was captured on the CC camera and the thief was arrested: Video

Comments are closed.