ಸ್ಯಾಂಡಲ್ ವುಡ್ ಗೆ ದೊಡ್ಮನೆಯಾಗಿರೋ ಡಾ.ರಾಜ್ ಕುಮಾರ್ ಕುಟುಂಬದಿಂದ ಮತ್ತೊಬ್ಬ ಹಿರೋವಾಗಿ ಯುವ್ ರಾಜ್ ಕುಮಾರ್ ತೆರೆಗೆ ಬರ್ತಿರೋದು ಈಗ ಹಳೆ ವಿಚಾರ. ಈಗಾಗಲೇ ಘೋಷಣೆಯಾಗಿ, ಸೆಟ್ಟೇರಿ ಶೂಟಿಂಗ್ ಆರಂಭಿಸಬೇಕಿದ್ದ ಯುವರಾಜ್ ಕುಮಾರ್ ಸಿನಿಮಾಗೆ ನಟ ಪುನೀತ್ ರಾಜ್ ಕುಮಾರ್ (Puneet Rajkumar) ಅಕಾಲಿಕ ನಿಧನ ಶಾಕ್ ನಂತೆ ಎದುರಾಗಿತ್ತು. ಎಲ್ಲ ಅಂದುಕೊಂಡಂತೇ ಆಗಿದ್ದರೇ ಚಿಕ್ಕಪ್ಪನ ಪ್ರೊಡಕ್ಷನ್ ಹೌಸ್ ನಲ್ಲಿ ಸೆಟ್ಟೇರಬೇಕಿದ್ದ ಸಿನಿಮಾ ಕೊನೆಗೂ ಆರಂಭ ಕಾಣ್ತಿದೆ. ಇದೀಗ ನಾಳೆ ಯುವರಾಜ್ (Yuvraj) ಚಿತ್ರವನ್ನು ಹೊಂಬಾಳೆ ಬ್ಯಾನರ್ಸ್ ( Hombale Films) ಘೋಷಣೆ ಮಾಡಲಿದೆ.
ಹೌದು ಪವರ್ ಸ್ಟಾರ್ ಗೆ ಪ್ರೀತಿಯ ಮಗನಾಗಿದ್ದ ಯುವರಾಜ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಲು ಸಿದ್ಧವಾಗಿದ್ದಾರೆ. ಯುವನ ಮೊದಲ ಚಿತ್ರವನ್ನು ಪಿಅರ್ ಕೆ ಪ್ರೊಡಕ್ಷನ್ ನಲ್ಲೇ ನಿರ್ಮಾಣ ಮಾಡಲು ಪುನೀತ್ ರಾಜ್ ಕುಮಾರ್ ಪ್ಲಾನ್ ಮಾಡಿದ್ರು.. ಅದ್ರೆ ಈಗ ಅಪ್ಪು ಇಲ್ಲದ ಕಾರಣ ಯುವ ಮೊದಲ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡ್ತಿದೆ.
ಈ ವಿಚಾರ ಈಗಾಗಲೇ ಬಹಿರಂಗವಾಗಿದೆ. ಇದರ ಜೊತೆಗೆ ಇನ್ನೊಂದು ಮಹತ್ವದ ವಿಚಾರ ಅಂದ್ರೇ ಈ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಅತ್ಯಾಪ್ತ ನಿರ್ದೇಶಕ ಸಂತೋಷ್ ಆನಂದ ರಾಮ್ ನಿರ್ದೇಶಿಸುತ್ತಿದ್ದಾರೆ. ದೊಡ್ಮನೆಯ ರಾಘವೇಂದ್ರ ರಾಜ್ ಕುಮಾರ್ ಪುತ್ರ ನಾಯಕರಾಗಿ ತೆರೆಗೆ ಬರ್ತಿರೋ ಈ ಚೊಚ್ಚಲಚಿತ್ರ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನ ಅನೌನ್ಸ್ ಆಗಲಿದೆ ಅಂತ ನೀರಿಕ್ಷಿಸಲಾಗಿತ್ತು. ಆದರೆ ಈಗ ಈ ಸಿನಿಮಾ ಏಪ್ರಿಲ್ ೨೭ ರಂದು ಅನೌನ್ಸ್ ಆಗಲಿದೆ ಅನ್ನೋ ಮಾಹಿತಿ ಸಿಕ್ಕಿದೆ.
ಪುನೀತ್ ಗಾಗಿ ಸಿನಿಮಾ ನಿರ್ಮಿಸುತ್ತಿದ್ದ ಸಂತೋಷ್ ಆನಂದ ರಾಮ್ ತಮ್ಮ ಕನಸುಗಳನ್ನು ಈಗ ಯುವರಾಜ್ ಮೂಲಕ ಈಡೇರಿಸಿಕೊಳ್ಳಲು ಸಜ್ಜಾಗಿದ್ದು, ಯುವರಾಜ್ ನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಮುಂದಾಗಿದ್ದಾರೆ. ಏ,27ಕ್ಕೆ ಯುವರಾಜ್ ಮೊದಲ ಸಿನಿಮಾವನ್ನು ಹೊಂಬಾಳೆ ಫಿಲಂ ಅಧಿಕೃತ ವಾಗಿ ಘೋಷಣೆ ಮಾಡಲಿದೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ನಟ ಯುವ ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿದ್ದಾರೆ. ಕತೆಗೆ ಬೇಕಾದ ರೀತಿ ಯುವ ಪೋಟೋ ಶೂಟ್ ಮಾಡಿಸಿರುವ ಸಂತೋಷ್ 27ಕ್ಕೆ ಸಿನಿಮಾ ಅನೌನ್ಸ್ ಮಾಡುವುದರ ಜೊತೆಗೆ ಯುವ ಲುಕ್ ಅನ್ನು ರಿವೀಲ್ ಮಾಡೊ ಸಾಧ್ಯತೆ ಇದೆ. ದೊಡ್ಮನೆಯ ಮತ್ತೊಂದು ಕುಡಿಯನ್ನು ಹೀರೋವಾಗಿ ನೋಡಲು ಅಭಿಮಾನಿಗಳು ಸಿದ್ಧವಾಗಿದ್ದು ಯುವರಾಜ್ ಲಾಂಚ್ ಗಾಗಿ ಕಾಯ್ತಿದ್ದಾರೆ.
ಇದನ್ನೂ ಓದಿ : ಮಾವ ರಜನಿಕಾಂತ್ ನಂತರ, ಮಾಜಿ ಅಳಿಯನ ಜೊತೆ ಹೊಸ ಸಿನಿಮಾ
ಇದನ್ನೂ ಓದಿ : ರಜನಿಕಾಂತ್ ಅವರ ಸಾಧನೆ ಗೌರವಿಸೋಣ ಹಾಗೇನೇ, ಈಗ ನಮ್ಮಕೈಲಿ ಏನು ಮಾಡೋಕೆ ಸಾಧ್ಯ ಅನ್ನೋದನ್ನು ನೋಡೋಣ : ಯಶ್
Yuvraj instead of Puneet Rajkumar will announce a new cinema on April 27 Hombale Films