zee kannada jote joteyali : ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸಧ್ಯ ವಿವಾದದ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಜೀ ಕನ್ನಡ ವಾಹಿನಿಯ ಪಾಲಿಗೆ ಭಾರೀ ದೊಡ್ಡ ಮಟ್ಟದ ಯಶಸ್ಸು ಎನಿಸಿದ್ದ ಈ ಧಾರವಾಹಿಯು ಇತ್ತೀಚಿನ ದಿನಗಳಲ್ಲಿ ಕಿರಿಕ್ ಕತೆಗಳ ಮೂಲಕವೇ ಸುದ್ದಿಯಾಗುತ್ತಿದೆ. ವಯಸ್ಸಾದ ವ್ಯಕ್ತಿಯು ಯುವತಿಯ ಜೊತೆಯಲ್ಲಿ ಪ್ರೀತಿಯಲ್ಲಿ ಬೀಳುವ ಎಳೆಯನ್ನು ಇಟ್ಟುಕೊಂಡು ಆರಂಭವಾದ ಈ ಕತೆಯು ಕರುನಾಡ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿತ್ತು. ಧಾರವಾಹಿಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಶೂಟಿಂಗ್ ಸೆಟ್ನಲ್ಲಿ ಕಿರಿಕ್ ಮಾಡಿಕೊಂಡು ಧಾರವಾಹಿಯಿಂದ ಹೊರಬಿದ್ದಿದ್ದು ಮಾತ್ರವಲ್ಲದೇ 2 ವರ್ಷಗಳ ಕಾಲ ಕಿರುತೆರೆಯಿಂದಲೇ ದೂರವಿರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಆರ್ಯವರ್ದನ್ ಪಾತ್ರದಿಂದ ಅನಿರುದ್ಧರಿಗೆ ಕೊಕ್ ನೀಡಿದ ಬಳಿಕ ಜೊತೆ ಜೊತೆಯಲಿ ಸೀರಿಯಲ್ ತಂಡ ಅನಿರುದ್ಧರನ್ನೇ ಹೋಲುವ ವ್ಯಕ್ತಿಯನ್ನು ಈ ಪಾತ್ರಕ್ಕೆ ತೆಗೆದುಕೊಳ್ಳಬೇಕು ಎಂದು ಯೋಚಿಸುತ್ತಿದೆ. ಅಂತೆಯೇ ಈಗಾಗಲೇ ನಿರ್ದೇಶಕ ಅನೂಪ್ ಭಂಡಾರಿಗೆ ಆರೂರು ಜಗದೀಶ್ ಕರೆ ಮಾಡಿದ್ದು ಆದರೆ ಈ ಆಫರ್ನ್ನು ಅವರು ತಿರಸ್ಕರಿಸಿದ್ದು ಇದ್ಯಾವುದೂ ಕೂಡ ಗುಟ್ಟಾಗಿ ಉಳಿದಿಲ್ಲ.
ಆದರೆ ಇದೀಗ ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುವಲ್ಲಿ ಸೀರಿಯಲ್ ತಂಡ ಯಶಸ್ವಿಯಾಗಿದೆ. ಸ್ಯಾಂಡಲ್ವುಡ್ ನಟ ಹರೀಶ್ ರಾಜ್ರನ್ನು ಆರ್ಯವರ್ಧನ್ ಪಾತ್ರದಲ್ಲಿ ತೋರಿಸಲು ಧಾರವಾಹಿ ತಂಡ ಇದೀಗ ಸಿದ್ಧವಾಗಿದೆ. ಹರೀಶ್ ರಾಜ್ ಜೊತೆ ಜೊತೆಯಲಿ ಆಫರ್ ಒಪ್ಪಿದ್ದಾರೆ ಎನ್ನಲಾಗಿದ್ದು ಶೀಘ್ರದಲ್ಲಿಯೇ ಅವರು ಆರ್ಯವರ್ಧನ್ ಆಗಿ ತೆರೆ ಮೇಲೆ ಮೋಡಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಆದರೆ ಆರ್ಯವರ್ಧನ್ ಪಾತ್ರದಲ್ಲಿ ಹರೀಶ್ ರಾಜ್ ನಟಿಸುತ್ತಿದ್ದಾರೆ ಎಂಬ ಬಗ್ಗೆ ಜೊತೆ ಜೊತೆಯಲಿ ಧಾರವಾಹಿ ತಂಡವಾಗಲಿ ಅಥವಾ ಜೀ ಕನ್ನಡ ವಾಹಿನಿಯಾಗಲಿ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಹೊರ ಬಿಟ್ಟಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಆರ್ಯವರ್ಧನ್ ಕರುನಾಡ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುವುದು ಪಕ್ಕಾ ಆಗಲಿದೆ.
ಮೇಘಾ ಶೆಟ್ಟಿ ಹಾಗೂ ಅನಿರುದ್ಧರ ಜೋಡಿ ತೆರೆ ಮೇಲೆ ಕಮಾಲ್ ಮಾಡುವಲ್ಲಿ ಸಖತ್ ಯಶಸ್ವಿಯಾಗಿತ್ತು. ಈಗಾಗಲೇ ಅನೇಕರು ನಮಗೆ ಅನಿರುದ್ಧರೇ ಮರಳಿ ಬರಬೇಕು ಅಂತಲೂ ಆಗ್ರಹಿಸುತ್ತಿದ್ದಾರೆ. ಆರೂರು ಜಗದೀಶ್ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ರೋಶ ಕೂಡ ವ್ಯಕ್ತವಾಗ್ತಿದೆ. ಆದರೆ ಹೊಸ ಸಾಹಸಕ್ಕೆ ಕೈ ಹಾಕಿರುವ ಧಾರವಾಹಿ ತಂಡ ಪಾತ್ರ ಬದಲಾವಣೆ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದು ಇದಕ್ಕೆ ಕರುನಾಡ ಪ್ರೇಕ್ಷಕರು ಸಾಥ್ ನೀಡ್ತಾರಾ ಇಲ್ವಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನು ಓದಿ : Fishing boat : ಭಟ್ಕಳ, ಮಂಗಳೂರಿನಲ್ಲಿ ಮೀನುಗಾರಿಕಾ ದೋಣಿ ಪಲ್ಟಿ: ಓರ್ವ ನಾಪತ್ತೆ
ಇದನ್ನೂ ಓದಿ : Flight tickets price :ನಾಳೆಯಿಂದ ವಿಮಾನ ಟಿಕೆಟ್ ದರ ಇಳಿಕೆ: ಇಲ್ಲಿದೆ ಸಂಪೂರ್ಣ ವಿವರ
zee kannada jote joteyali anirudh role change in that place hero harish raj fix next hero