Prime Minister’s program :ಪ್ರಧಾನಿ ಕಾರ್ಯಕ್ರಮಕ್ಕೆ 1461 ಬಸ್, 200ಕ್ಕೂ ಹೆಚ್ಚು ಟೆಂಪೋ ಟ್ರಾವೆಲ್ ಗಳ ಬುಕ್ಕಿಂಗ್

ಮಂಗಳೂರು : (Prime Ministers program) ಪ್ರಧಾನಿ ನರೇಂದ್ರ ಮೋದಿಯವರು ಸೆ.2ರಂದು ಭಾಗಿಯಾಗಲಿರುವ ಮಂಗಳೂರು ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರು ಒಟ್ಟು ಸೇರಲಿದ್ದಾರೆ. ಈ ಬಗ್ಗೆ ಮಾಹಿತಿ‌ ನೀಡಿರುವ ದಕ್ಷಿಣಕನ್ನಡ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಎಂಟು ವಿಧಾನಸಭಾ ಕ್ಷೇತ್ರದಿಂದ ಸಾವಿರಾರು ಮಂದಿ ಕಾರ್ಯಕರ್ತರು ಬರಲಿದ್ದಾರೆ ಎಂದು‌ ಹೇಳಿದ್ದಾರೆ. ಈಗಾಗಲೇ 1461 ಬಸ್, 200 ಟೆಂಪೋ ಟ್ರಾವೆಲ್ ಗಳ ಬುಕ್ಕಿಂಗ್ ಮಾಡಲಾಗಿದ್ದು ಮೋದಿ‌ ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಜನ ಸಾಗರ ಹರಿದು ಬರಲಿದೆ.

ಪ್ರಧಾನಿ ನರೇಂದ್ರ ಮೋದಿ‌ ಸಂಜೆ 4 ಗಂಟೆಗೆ ಮಂಗಳೂರಿಗೆ ಆಗಮಿಸುವುದಾಗಿ‌ ಹೇಳಲಾಗಿತ್ತು.‌ ಆದ್ರೆ ಇದೀಗ ಪ್ರಧಾನಿ ಆಗಮನದ ಸಮಯ ಬದಲಾವಣೆಯಾಗಿದ್ದು ಮಧ್ಯಾಹ್ನ ಒಂದು ಗಂಟೆಗೆ ಪ್ರಧಾನಿ ಮೋದಿ ಮಂಗಳೂರಿಗೆ ಬರಲಿದ್ದಾರೆ ಎಂದು ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದ್ದಾರೆ‌. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಪ್ರಧಾನಿ ಬಳಿಕ ಹೆಲಿಕಾಪ್ಟರ್ ಮೂಲಕ ಎನ್.ಎಂ.ಪಿ.ಎ ಹೆಲಿಪ್ಯಾಡ್ ನಲ್ಲಿ ಬಂದಿಳಿಯಲಿದ್ದಾರೆ. ಅಲ್ಲಿ ಕೆಲ ಯೋಜನೆಗಳ ಶಿಲಾನ್ಯಾಸ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ‌ ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಮಾವೇಶ ನಡೆಯುವ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನಕ್ಕೆ ಬರಲಿದ್ದಾರೆ. ಒಟ್ಟು ಮೂರು ಗಂಟೆಯ ತನಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ,ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.

ಪ್ರಧಾನಿಯವರು ಭಾಗವಹಿಸುವ ಸರ್ಕಾರಿ ಕಾರ್ಯಕ್ರಮ ಇದಾಗಿದ್ದು ಈಗಾಗಲೇ 80% ಪೂರ್ವ ಸಿದ್ಧತೆಯಾಗಿದೆ. 70,000 ಮಂದಿ ಕೇಂದ್ರದ ಯೋಜನೆಯ ಫಲಾನುಭವಿಗಳನ್ನು ಸಹ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಕರೆತರುವ ವ್ಯವಸ್ಥೆ ಮಾಡಲಿದೆ.ಭದ್ರತೆಯ ದೃಷ್ಟಿಯಿಂದ ತಪಾಸಣೆ ಹಿನ್ನೆಲೆಯಲ್ಲಿ ಮಧ್ಯಾಹ್ನ 11.30ರ ಒಳಗಡೆ ಸಮಾವೇಶ ನಡೆಯುವ ಸ್ಥಳಕ್ಕೆ ಬರಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು ಎರಡು ಲಕ್ಷಕ್ಕೂ ಹೆಚ್ಚು ಜನ‌ ಸೇರುವ ನಿರೀಕ್ಷೆಯಿದೆ.

ಈಗಾಗಲೇ ಸಮಾವೇಶ ನಡೆಯುವ ಸ್ಥಳದಲ್ಲಿ ಅಂತಿಮ‌ ಹಂತದ ತಯಾರಿಗಳು ನಡೆಯುತ್ತಿದೆ. ಪ್ರಧಾನಿಯವರ ವಿಶೇಷ ಭದ್ರತಾ ಪಡೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.‌ ಎಲ್ಲಾ ತಯಾರಿ ಆದ ಬಳಿಕ ಪೂರ್ತಿ ಸ್ಥಳವನ್ನು ತಮ್ಮ ಕಂಟ್ರೋಲ್ ಗೆ ಎಸ್.ಪಿ.ಜಿ ಅಧಿಕಾರಿಗಳು ಪಡೆಯಲಿದ್ದಾರೆ. ಒಟ್ಟಿನಲ್ಲಿ ನಮೋ ಭಾಗವಹಿಸುವ ಈ ಸಮಾವೇಶ ಮುಂದಿನ ಚುನಾವಣೆ ದೃಷ್ಟಿಯಿಂದ ಬಿ.ಜೆ.ಪಿ ಬಹಳಷ್ಟು ಮಹತ್ವದಾಗಿದೆ.

ಇದನ್ನು ಓದಿ : Flight tickets price :ನಾಳೆಯಿಂದ ವಿಮಾನ ಟಿಕೆಟ್ ದರ ಇಳಿಕೆ: ಇಲ್ಲಿದೆ ಸಂಪೂರ್ಣ ವಿವರ

ಇದನ್ನೂ ಓದಿ : zee kannada jote joteyali : ಜೊತೆ ಜೊತೆಯಲಿ ಆರ್ಯವರ್ಧನ್​ ಆಗಿ ಬರಲಿದ್ದಾರೆ ನಟ ಹರೀಶ್​ ರಾಜ್​​

Booking of 1461 buses, more than 200 tempo travels for Prime Ministers program

Comments are closed.