ಸೋಮವಾರ, ಏಪ್ರಿಲ್ 28, 2025
HomeCinemaZubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಆಸ್ಪತ್ರೆಗೆ ದಾಖಲು

Zubin Nautiyal Injured:ಮೆಟ್ಟಿಲಿನಿಂದ ಬಿದ್ದ ಬಾಲಿವುಡ್ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಆಸ್ಪತ್ರೆಗೆ ದಾಖಲು

- Advertisement -

(Zubin Nautiyal Injured)ಬಾಲಿವುಡ್‌ ನ ಖ್ಯಾತ ಗಾಯಕ ಜುಬಿನ್‌ ನೌಟಿಯಾಲ್‌ ಕಟ್ಟಡದ ಮೆಟ್ಟಿಲಿನಿಂದ ಬಿದ್ದು ಇಂದು ಮುಂಜಾನೆ ಮುಂಬೈ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಬಲಗೈ ಹೆಚ್ಚಿಗೆ ಬಳಸಬಾರದು ಎಂದು ಸಲಹೆ ನೀಡಿದ್ದಾರೆ. ಇನ್ನು ಹೆಚ್ಚಿನ ಚಿಕೆತ್ಸೆಗಾಗಿ ಜುಬಿನ್‌ ನೌಟಿಯಾಲ್‌ ತನ್ನ ಹುಟ್ಟೂರಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

(Zubin Nautiyal Injured)ಮೆಟ್ಟಿಲುಗಳಿಂದ ಬಿದ್ದ ಪರಿಣಾಮದಿಂದಾಗಿ ಗಾಯಕ ಜುಬಿನ್‌ ನೌಟಿಯಾಲ್‌ ಅವರ ಮೊಣಕೈ ಮುರಿದಿದ್ದು, ಪಕ್ಕೆಲುಬು ಕ್ರ್ಯಾಕ್‌ ಆಗಿದೆ ಮತ್ತು ತಲೆಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ.33 ವಯಸ್ಸಿನ ಗಾಯಕ ಜುಬಿನ್‌ ನೌಟಿಯಾಲ್‌ ಬಲಗೈ ಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು,ವ್ಯಾಯಾಮ ಮಾಡಬಾರದು ಮತ್ತು ಅತಿ ಹೆಚ್ಚಾಗಿ ಬಲಗೈ ಬಳಸಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:Sreeleela : 7 ತೆಲುಗು ಸಿನಿಮಾಕ್ಕೆ ಸಹಿ ಹಾಕಿದ ಭರಾಟೆ ಬೆಡಗಿ ಶ್ರೀಲೀಲಾ

ಇದನ್ನೂ ಓದಿ:Ranjani Raghavan : “ಸ್ವೈಪ್‌ ರೈಟ್‌” ಕಾದಂಬರಿ ಬರೆದ ಕನ್ನಡತಿ ಖ್ಯಾತಿಯ ರಂಜನಿ ರಾಘವನ್‌

ಜುಬಿನ್‌ ನೌಟಿಯಾಲ್‌ “ರಾತನ್‌ ಲಂಬಿಯಾನ್‌”, “ಲುಟ್‌ ಗಯೆ”, ಹುಮ್ನಾವಾ ಮೇರೆ”, “ತುಜೆ ಕಿತ್ನೆ ಚಾಹ್ನೆ ಲಗೇ ಹಮ್”‌, ” ತುಮ್‌ ಹಿ ಅನಾ”, ಮತ್ತು ಬೇವಫಾ ತೇರಾ ಮಸೂನ್‌ ಚೆಹ್ರಾ” ನಂತರ ಚಾರ್ಟ್‌ ಬಸ್ಟರ್ ಟ್ರ್ಯಾಕ್‌ ಗಳನ್ನು ಹಾಡಿ ನೌಟಿಯಲ್‌ ಹೆಚ್ಚು ಹೆಸರುವಾಸಿ ಆಗಿದ್ದರು. ಅಷ್ಟೇ ಅಲ್ಲದೆ ಗಾಯಕ ಜುಬಿನ್ ನೌಟಿಯಾಲ್ ಬಾಲಿವುಡ್‌ನಲ್ಲಿ ಹಲವಾರು ಹಿಟ್ ಹಾಡನ್ನು ಕೊಟ್ಟಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿಯವರು ಒಟ್ಟಿಗೆ ನಟಿಸಿದ ಶೇರ್ಷಾ ಚಿತ್ರದ ರೊಮ್ಯಾಂಟಿಕ್ ಹಾಡನ್ನು ಕೊಟ್ಟು ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಗಳಿಸಿದರು. ಇತ್ತೀಚಿಗೆ ಬಂದ ಅವರ ಹೊಸ ಹಾಡು “ಗೋವಿಂದಾ ನಾಮ್‌ ಮೇರಾ” ಚಿತ್ರದ ” ಬಾನಾ ಶರಾಬಿ” ಬುಧವಾರ ಬಿಡುಗಡೆಯಾಗಿ ಹಲವರ ಜನಮನ್ನಣೆ ಗಳಿಸಿದೆ.

ಇದನ್ನೂ ಓದಿ : Rishabh Shetty‌ : ತುಳುವಿನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಮಹತ್ವದ ಸಂದೇಶ ಕೊಟ್ಟ ರಿಷಬ್ ಶೆಟ್ಟಿ

Zubin Nautiyal Injured Famous Bollywood singer Zubin Nautiyal who fell down the stairs was admitted to the hospital

RELATED ARTICLES

Most Popular