ಮಂಗಳೂರು : ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸುತ್ತಿದೆ. ತಡೆಗೋಡೆ ಕುಸಿದು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ 13 ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಜಖಂ ಗೊಂಡಿರುವ ಘಟನೆ ಮಂಗಳೂರು ನಗರದ ನಲಪಾಡ್ ಕುನಿಲ್ ಟವರ್ಸ್ ಪಕ್ಕದಲ್ಲಿರುವ ಎಪಿಎಂಸಿ ಯಾರ್ಡ್ ನಲ್ಲಿ ನಡೆದಿದೆ.

ಎಪಿಎಂಸಿ ಯಾರ್ಡ್‌ನ ತಡೆಗೋಡೆ ಶಿಥಿಲವಾಗಿದ್ದು, ಸುರಿದ ಭಾರೀ ಮಳೆಯಿಂದ ಕುಸಿದಿದೆ. ಈ ವೇಳೆ ಯಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನಗಳ ಮೇಲೆ ಗೋಡೆಯ ಕಲ್ಲುಗಳು ಬಿದ್ದ ಹಿನ್ನೆಲೆಯಲ್ಲಿ ವಾಹನ ಗಳು ಜಖಂಗೊಂಡಿವೆ.

ಇದನ್ನೂ ಓದಿ : ಮಹಾಮಳೆಗೆ ಗೋಡೆ ಕುಸಿದು 15 ಸಾವು : ಮುಂದುವರಿದ ರಕ್ಷಣಾ ಕಾರ್ಯ
ಇನ್ನು ತಡೆಗೋಡೆಯ ಅವಶೇಷಗಳು ಅಪಾರ್ಮೆಂಟ್ ಉದ್ದಕ್ಕೂ ಬಿದ್ದಿದೆ. ಈ ವೇಳೆಯಲ್ಲಿ ಮಕ್ಕಳು ಆಟ ವಾಡುತ್ತಿದ್ದು, ಅವರೆಲ್ಲರೂ ಓಡಿ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ.

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದೀಗ ಇತರ ಕಾಮಗಾರಿ ಯ ಅವಶೇಷಗಳನ್ನು ತಂದು ಇಲ್ಲಿ ಸುರಿಯಲಾಗುತ್ತಿತ್ತು.
ಇದನ್ನೂ ಓದಿ : ನಕಲಿ ಚಿನ್ನಕ್ಕೆ 72 ಲಕ್ಷ ಸಾಲ ಕೊಟ್ಟ ಕೆನರಾ ಬ್ಯಾಂಕ್…!!!

ಇದರಿಂದಾಗಿ ತಡೆಗೋಡೆ ಶಿಥಿಲವಾಗಿದ್ದು, ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.