ದಕ್ಷಿಣ ಕನ್ನಡ : check of 25 lakh rupees : ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಮೃತ ಪ್ರವೀಣ್ ಕುಟುಂಬಸ್ಥರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳುವ ಪ್ರಯತ್ನವನ್ನು ಮಾಡಿದರು. ಪ್ರವೀಣ್ ಪತ್ನಿ ಹಾಗೂ ಪೋಷಕರ ಜೊತೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಬಳಿಕ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದ್ದಾರೆ.
ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ ಇದೇ ವೇಳೆಯಲ್ಲಿ ಪ್ರವೀಣ್ ಹಂತಕರಿಗೆ ತಕ್ಕ ಶಿಕ್ಷೆ ನೀಡುವ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದಾದ ಬಳಿಕ ಬೆಂಗಳೂರಿನಿಂದ ವಿಮಾನದಲ್ಲಿ ಮಂಗಳೂರಿಗೆ ಹೊರಟ ಸಿಎಂ ಬೊಮ್ಮಾಯಿ ಮಂಗಳೂರು ಏರ್ಪೋರ್ಟ್ಗೆ ಬಂದಿಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಭಾರೀ ಭದ್ರತೆಯೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸುಳ್ಯ ತಾಲೂಕಿನಲ್ಲಿರುವ ಬೆಳ್ಳಾರೆ ಸಮೀಪದ ನೆಟ್ಟಾರು ಗ್ರಾಮಕ್ಕೆ ತೆರಳಿದರು. ಸಿಎಂ ಬಸವರಾಜ ಬೊಮ್ಮಾಯಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಿ.ಟಿ ರವಿ , ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಸಾಕಷ್ಟು ಬಿಜೆಪಿ ನಾಯಕರು ಸಾಥ್ ನೀಡಿದರು.
ನೆಟ್ಟಾರು ಗ್ರಾಮದಲ್ಲಿರುವ ಮೃತ ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಕುಟುಂಬಸ್ಥರ ಜೊತೆಯಲ್ಲಿ ಸಮಾಲೋಚನೆ ನಡೆಸಿ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು. ಈ ವೇಳೆಯಲ್ಲಿ ಸಿಎಂ ಬೊಮ್ಮಾಯಿ ಜೊತೆಯಲ್ಲಿ ಮಾತನಾಡಿದ ಪ್ರವೀಣ್ ಪತ್ನಿ ನೂತನಾ ನೆಟ್ಟಾರು, ನನ್ನ ಪತಿಗೆ ಬಂದಂತಹ ಪರಿಸ್ಥಿತಿ ಇನ್ಯಾರಿಗೂ ಬರ ಕೂಡದು. ಆರೋಪಿಗಳಿಗೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಸಹಾಯ ಮಾಡಿದವರಿಗೂ ಗಲ್ಲು ಶಿಕ್ಷೆ ನೀಡಬೇಕು. ನನ್ನ ಪತಿಯನ್ನು ಕೊಂದವರನ್ನು ನೀವು ಎನ್ಕೌಂಟರ್ ಮಾಡಿಸಿದರೆ ಮಾತ್ರ ನನಗೂ ಹಾಗೂ ನನ್ನ ಪತಿಗೂ ತೃಪ್ತಿ ಸಿಗಲಿದೆ. ನನ್ನ ಪತಿ ಪಕ್ಷಕ್ಕಾಗಿ ಹೋರಾಡಿದ್ದಾರೆ. ಈಗ ಅವರ ಸಾವಿಗೆ ನೀವೇ ನ್ಯಾಯ ನೀಡಬೇಕು ಎಂದು ಹೇಳಿದರು.
ಪ್ರವೀಣ್ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ನಾವು ಕೇವಲ ಒಂದು ಕೊಲೆ ಕೇಸ್ ಎಂಬಂತೆ ನೋಡುತ್ತಿಲ್ಲ. ಈ ಪ್ರಕರಣದ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅತಿ ಶೀಘ್ರದಲ್ಲಿಯೇ ಎಲ್ಲಾ ಆರೋಪಿಗಳನ್ನು ಹೆಡೆಮುರಿ ಕಟ್ಟಲಿದ್ದೇವೆ. ಈ ಕೊಲೆಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಶಿಕ್ಷೆ ವಿಧಿಸಲಾಗುತ್ತದೆ. ಪ್ರವೀಣ್ ಕುಟುಂಬಸ್ಥರಿಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದೇನೆ. ಅಗತ್ಯ ಬಿದ್ದರೆ ಈ ಪ್ರಕರಣವನ್ನು ಎನ್ಐಎಗೆ ವಹಿಸುತ್ತೇವೆ ಎಂದು ಹೇಳಿದರು .
ಇದನ್ನು ಓದಿ : CT Ravi : ಪಿಎಫ್ಐ ಸಂಘಟನೆ ಬ್ಯಾನ್ ಮಾಡ್ತೇವೆ, ಯಾರೂ ಸಮೂಹ ಸನ್ನಿಗೆ ಒಳಗಾಗದಿರಿ : ಕಾರ್ಯಕರ್ತರಲ್ಲಿ ಸಿ.ಟಿ ರವಿ ಮನವಿ
ಇದನ್ನೂ ಓದಿ : Accused remanded in judicial custody : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಆರೋಪಿಗಳಿಗೆ ಆ.11ರವರೆಗೆ ನ್ಯಾಯಾಂಗ ಬಂಧನ
A check of 25 lakh rupees was distributed to the family members of Praveen Nettaru