ಮಂಗಳವಾರ, ಜೂನ್ 17, 2025
HomeCoastal NewsAmbedkar derogatory visual display: ಅಂಬೆಡ್ಕರ್‌ ಅವಹೇಳನಕಾರಿ ದೃಶ್ಯ ಪ್ರದರ್ಶನ: ಪೊಲೀಸರಿಗೆ ದೂರು

Ambedkar derogatory visual display: ಅಂಬೆಡ್ಕರ್‌ ಅವಹೇಳನಕಾರಿ ದೃಶ್ಯ ಪ್ರದರ್ಶನ: ಪೊಲೀಸರಿಗೆ ದೂರು

- Advertisement -

ಉಡುಪಿ: (Ambedkar derogatory visual display) ಬೆಂಗಳೂರಿನ ಜೈನ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಂವಿಧಾನದ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ ಕುರಿತು ಪ್ರದರ್ಶಿಸಿದ್ದ ವಿವಾದಾತ್ಮಕ ಕಿರು ನಾಟಕದ ವಿರುದ್ದ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್‌ ಮಲ್ಪೆ ಅವರು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಜೈನ್‌ ವಿಶ್ವವಿದ್ಯಾಲಯದ ಮ್ಯಾನೇಜ್‌ ಮೆಂಟ್‌ ಸ್ಟಡೀಸ್‌ ಕೇಂದ್ರದ ಥಿಯೇಟರ್‌ ಗ್ರೂಪ್‌ ಕಾಲೇಜು ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೆಲ್ರಾಯ್‌ ಬಾಯ್ಸ್‌ ಮ್ಯಾಡ್‌ ಆಡ್‌ನ ಭಾಗವಾಗಿ ಫೆಸ್ಟ್‌ ನಲ್ಲಿ ಅಂಬೇಡ್ಕರ್‌ ಹಾಗೂ ದಲಿತ ಸಮುದಾಯದ ಕುರಿತು ಅಪಹಾಸ್ಯ ಮತ್ತು ಗೇಲಿ ಮಾಡುತ್ತಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್‌ ಮಲ್ಪೆ ಅವರು ಆಕ್ರೋಶಗೊಂಡಿದ್ದು, ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸ್ಕಿಟ್‌ ನಲ್ಲಿ ಕೆಳಜಾತಿಯ ಹಿನ್ನಲೆಯ ವ್ಯಕ್ತಿಯೊಬ್ಬ ಮೇಲ್ಜಾತಿಯ ಮಹಿಳೆಯೊಂದಿಗೆ ಡೇಟಿಂಗ್‌ ಮಾಡಲು ಪ್ರಯತ್ನಿಸಿರುವುದನ್ನು ಪ್ರದರ್ಶಿಸಿದ್ದು, ಈ ವೇಳೆ ಅತ ತಾನು ದಲಿತ, ಕೀಳು ಜಾತಿಯವ ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಡೋಂಟ್‌ ಟಚ್‌ ಮಿ, ಡೋಂಟ್‌ ಟಚ್‌ ಮಿ ಎಂಬ ಹಾಡನ್ನು ಗೇಲಿ ಮಾಡುತ್ತಾ ಪ್ಲೇ ಮಾಡಿ ಉದ್ದೇಶ ಪೂರ್ವಕವಾಗಿ ಅವಮಾನಿಸುತ್ತಾರೆ. ಅಲ್ಲದೇ ಬಿ. ಆರ್‌ . ಅಂಬೇಡ್ಕರ್‌ ಅವರನ್ನು ಬಿಯರ್‌ ಅಂಬೇಡ್ಕರ್‌ ಎಂದು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿರುವುದಾಗಿ ಜಯನ್‌ ಮಲ್ಪೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ದೇಶದ ಭಾರತರತ್ನ ಸಂವಿಧಾನ ಶಿಲ್ಪಿಯನ್ನು ಅತ್ಯಂತ್‌ ಕೆಳಮಟ್ಟದಲ್ಲಿ ಕಂಡು ಅವಮಾನಿಸಿರುವುದು ದೇಶದ್ರೋಹವೆಂದೇ ಪರಿಗಣಿಸಿ, ಜಾತಿ ಹಿನ್ನಲೆಯಲ್ಲಿ ಕಾನೂನು ಬಾಹಿರ ಅಸ್ಪೃಶ್ಯತೆ ಮಾಡಿ ನಾಟಕ ಪ್ರದರ್ಶಿಸಿ, ಅಪರಾಧ ಎಸಗಿರುವ ಜೈನ್‌ ಕಾಲೇಜಿನ ವಿದ್ಯಾರ್ಥಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯಡಿ ಕಾನೂನುಕ್ರಮ ಕೈಗೊಳ್ಳಬೇಕೆಂದು ಮಲ್ಪೆ ಅರ್ಕಲ್‌ ಇನ್ಸ್ಪೆಕ್ಟರ್‌ ಆಫ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ : Kambala racer committed suicide: ಕೆಲಸ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಕಂಬಳ ಓಟಗಾರ

ಇದನ್ನೂ ಓದಿ : Dakshina Kannada District Football League : ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಲೀಗ್ : ಜಯಭೇರಿ ಸಾಧಿಸಿದ ಯೇನಪೋಯ, ಯುನೈಟೆಡ್ ತಂಡ

Ambedkar derogatory visual display: Complaint to police

RELATED ARTICLES

Most Popular