Karnataka Bank Recruitment 2023 : ಕರ್ಣಾಟಕ ಬ್ಯಾಂಕ್ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ಣಾಟಕ ಬ್ಯಾಂಕ್ (Karnataka Bank Recruitment 2023) ಫೆಬ್ರವರಿ 2023 ರ ಅಧಿಕೃತ ಅಧಿಸೂಚನೆಯ ಮೂಲಕ ವ್ಯಾಪಾರ ವಿಶ್ಲೇಷಕ, ಇಂಜಿನಿಯರ್, ನೆಟ್‌ವರ್ಕ್ ಅಡ್ಮಿನ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಖಾಲಿ ಇರುವ ಹುದ್ದೆಗಳಿಗಾಗಿ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.

ಕರ್ಣಾಟಕ ಬ್ಯಾಂಕ್‌ ಹುದ್ದೆಗಳ ಅಧಿಸೂಚನೆಯ ಸಂಪೂರ್ಣ ವಿವರ :
ಬ್ಯಾಂಕ್ ಹೆಸರು : ಕರ್ನಾಟಕ ಬ್ಯಾಂಕ್
ಹುದ್ದೆಗಳ ಸಂಖ್ಯೆ‌ : 22 ಹುದ್ದೆಗಳು
ಉದ್ಯೋಗ ಸ್ಥಳ : ಕರ್ನಾಟಕ
ಹುದ್ದೆಯ ಹೆಸರು : ವ್ಯಾಪಾರ ವಿಶ್ಲೇಷಕ, ಇಂಜಿನಿಯರ್, ನೆಟ್‌ವರ್ಕ್ ಅಡ್ಮಿನ್

ಶೈಕ್ಷಣಿಕ ಅರ್ಹತೆ:
ಕರ್ನಾಟಕ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯಾ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ಹುದ್ದೆಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಗಳು B.Sc, B.Tech/BE, MA, ME/M.Tech, MBA/PGDM, MCA ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.

ವಯೋಮಿತಿ ವಿವರ :
ಕರ್ನಾಟಕ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ, ಆಯಾ ಹುದ್ದೆಗಳಿಗೆ ವಿಭಿನ್ನ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ ಮತ್ತು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪಡೆಯಬಹುದು

ವಯೋಮಿತಿ ಸಡಿಲಿಕೆ:
ಕರ್ನಾಟಕ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ವಯೋಮಿತಿಯನ್ನು ಕರ್ನಾಟಕ ಬ್ಯಾಂಕ್ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಅನುಸಾರವಾಗಿ ಅಡಿಲಿಕೆ ನೀಡಲಾಗುತ್ತದೆ.

ಕರ್ಣಾಟಕ ಬ್ಯಾಂಕ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಭ್ಯರ್ಥಿಗಳು ಇಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಈ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳು ಅಗತ್ಯ ದಾಖಲೆಗಳಾದ ಸಿವಿ, ಕೆಲಸದ ಅನುಭವ ಪ್ರಮಾಣಪತ್ರ, ಅರ್ಜಿ ಸಲ್ಲಿಸಿದ ಹುದ್ದೆಗೆ ಸಂಬಂಧಿಸಿದ ಪ್ರಮಾಣೀಕರಣಗಳನ್ನು ಈ ಮೇಲ್‌ [email protected] ಐಡಿ ಮೂಲಕ ಕಳಿಸಬೇಕಾಗುತ್ತದೆ. ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಕೆಳಗೆ ನೀಡಿರುವ ಲಿಂಕ್‌ಗಳನ್ನು ಪರಿಶೀಲಿಸಬೇಕಾಗಿದೆ.

ಇದನ್ನೂ ಓದಿ : RCUB Recruitment 2023 : ರಾಣಿ ಚನ್ನಮ್ಮ ವಿವಿ ನೇಮಕಾತಿ : ಬೋಧಕೇತರ ಹುದ್ದೆಗೆ ಅರ್ಜಿ ಆಹ್ವಾನ

ಇದನ್ನೂ ಓದಿ : DC Office Bengaluru Urban Recruitment 2023 : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ನೇಮಕಾತಿ : ಲೋಡರ್, ಕ್ಲೀನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : HMT Machine Tools Limited Recruitment 2023 : ಡಿಪ್ಲೊಮಾ, ಪದವಿಧರರಿಗೆ ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ

ಪ್ರಮುಖ ಇಮೇಲ್‌ ವಿವರಗಳು :

ಅಧಿಕೃತ ಅಧಿಸೂಚನೆ-1 : [email protected]
ಅಧಿಕೃತ ಅಧಿಸೂಚನೆ-2: [email protected]
ಅಧಿಕೃತ ಅಧಿಸೂಚನೆ-3 : [email protected]

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 09 ಫೆಬ್ರವರಿ 2023
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 15 ಫೆಬ್ರವರಿ 2023

Karnataka Bank Recruitment 2023 : Application Invitation for Various Posts

Comments are closed.